ಮುಂಬಯಿ – ನನ್ನ ಆರೋಗ್ಯ ಸರಿ ಇರುವುದಿಲ್ಲ; ಆದರೆ ನ್ಯಾಯಾಲಯವು ನನ್ನನ್ನು ಕರೆಸಿದಾಗಲೆಲ್ಲಾ ನಾನು ಹಾಜರಾಗುತ್ತೇನೆ. ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕಾಂಗ್ರೆಸ್ ನನಗೆ ನೀಡಿದ ಯಾತನೆಯ ಬಗ್ಗೆ ನನಗೆ ನ್ಯಾಯ ಬೇಕಿದೆ. ಕಾಂಗ್ರೆಸ್ ನೀಡಿದ ಚಿತ್ರಹಿಂಸೆಗಳಿಂದ ನಾನು ಇನ್ನೂ ಹೊರಬಂದಿಲ್ಲ ಎಂದು ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿದ್ದಾರೆ. ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆಗಾಗಿ ಅವರು ಜನವರಿ ೪ ರಂದು ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆ ಸಮಯದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮೇಲಿನ ಪ್ರತಿಕ್ರಿಯೆಯನ್ನು ನೀಡಿದರು.
೨೦೦೮ ರ ಮಾಲೆಗಾಂವ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಸಾಧ್ವಿ ಪ್ರಜ್ಞಾ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜನವರಿ ೫ ರಂದು ನಡೆಯಲಿದೆ.