ಕೊರೋನಾದಿಂದಾಗಿ ಮೃತಪಟ್ಟವರ ಸಂಖ್ಯೆಯಲ್ಲಿ ಭಾರತವು ಜಗತ್ತಿನ ೫ ಸ್ಥಾನದಲ್ಲಿದೆ

ಕಳೆದ ಕೆಲವು ದಿನಗಳಿಂದ ಪ್ರತಿದಿನ ೫೦ ಸಾವಿರಕ್ಕಿಂತಲೂ ಹೆಚ್ಚು ರೋಗಿಗಳು ಪತ್ತೆಯಾಗುತ್ತಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೫೫ ಸಾವಿರದ ೭೯ ಹೊಸ ರೋಗಿಗಳು ಪತ್ತೆಯಾಗಿದ್ದು ೭೭೯ ರೋಗಿಗಳು ಸಾವನ್ನಪ್ಪಿದ್ದಾರೆ.

‘ಆನ್‌ಲೈನ್’ ಮಾಧ್ಯಮದಿಂದ ೯ ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ವು ಉತ್ಸಾಹದ ವಾತಾವರಣದಲ್ಲಿ ಪ್ರಾರಂಭ !

ಕೊರೋನಾದ ಮಹಾಮಾರಿಯಾಗಿರಲಿ ಅಥವಾ ಭವಿಷ್ಯದಲ್ಲಿ ಎದುರಾಗುವ ಮೂರನೇ ವಿಶ್ವಯುದ್ಧವಾಗಿರಲಿ, ಕಾಲಮಹಾತ್ಮೆಗನುಸಾರ ಮುಂಬರುವ ಕಾಲವು ಹಿಂದುತ್ವನಿಷ್ಠರಿಗೆ ಅನುಕೂಲಕರ ಕಾಲವಾಗಿರಲಿದೆ. ಅದಕ್ಕಾಗಿ ನಾವು ನಿರಂತರವಾಗಿ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡುತ್ತಿರಬೇಕು.

ರಾಮಮಂದಿರ ಭೂಮಿಪೂಜೆಯ ಮುಹೂರ್ತವನ್ನು ಬೆಳಗಾವಿಯ ಪಂಡಿತ ವಿಜಯೇಂದ್ರ ಶರ್ಮಾ ಇವರು ತೆಗೆದರು

ಗೋವಾ ವೇಸನ ವಿದ್ಯಾ ವಿಹಾರ ವಿದ್ಯಾಲಯದ ಕುಲಪತಿ ವಿಜಯೇಂದ್ರ ಶರ್ಮಾ ಇವರು ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿಪೂಜೆಯ ಮುಹೂರ್ತವನ್ನು ತೆಗೆದರು. ರಾಮಮಂದಿರ ನಿರ್ಮಾಣದ ಟ್ರಸ್ಟ್‌ನ ಅಧ್ಯಕ್ಷ ಪೂ. ಕಿಶೋರಜಿ ವ್ಯಾಸ ಇವರ ಆಜ್ಞೆಯಂತೆ ಈ ಮುಹೂರ್ತವನ್ನು ತೆಗೆದಿರುವ ಮಾಹಿತಿಯನ್ನು ಬೆಳಗಾವ ಲೈವ್ ಈ ವಾರ್ತಾವಾಹಿನಿಯಲ್ಲಿ ನೀಡಿದ ಸಂದರ್ಶನದಲ್ಲಿ ಹೇಳಿದರು.

ರಾಮಜನ್ಮಭೂಮಿಯ ಪುರೋಹಿತರು ಹಾಗೂ ೧೬ ಪೊಲೀಸರಿಗೆ ಕೊರೋನಾದ ಸೋಂಕು

ಆಗಸ್ಟ್ ೫ ರಂದು ರಾಮಜನ್ಮಭೂಮಿಯ ರಾಮಮಂದಿರದ ಭೂಮಿ ಪೂಜೆಯಾಗುವ ಮುನ್ನವೇ ರಾಮಜನ್ಮಭೂಮಿಯ ಪುರೋಹಿತ ಪ್ರದೀಪ ದಾಸ ಇವರಿಗೆ ಕೊರೋನಾದ ಸೋಂಕು ತಗಲಿದೆ. ಅವರು ಮುಖ್ಯ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ ಇವರ ಶಿಷ್ಯರಾಗಿದ್ದಾರೆ. ದಾಸ ಇವರ ಜೊತೆಗೆ ಅಲ್ಲಿಯ ೧೬ ಪೊಲೀಸರಿಗೂ ಕೊರೋನಾದ ಸೋಂಕು ತಗಲಿದೆ.

ಮಣಿಪುರದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮೂವರು ಸೈನಿಕರು ಹುತಾತ್ಮ

ಮಣಿಪುರದ ಚಂದೆಲ ಜಿಲ್ಲೆಯ ಮ್ಯಾನ್ಮಾರ ಗಡಿಯ ಸಮಿಪದ ಪ್ರದೇಶದಲ್ಲಿ ಸ್ಥಳಿಯ ಪೀಪಲ್ಸ್ ಲಿಬರೇಶನ್ ಆರ್ಮಿಯ ಭಯೋತ್ಪಾದಕರು ಆಸಾಮ ರೈಫಲ್ ಸೈನಿಕರ ಮೇಲೆ ದಾಳಿ ಮಾಡಿದರು. ಇವರು ಮೊದಲು ಬಾಂಬ್ ಸ್ಪೋಟಿಸಿದರು. ನಂತರ ಗುಂಡು ಹಾರಿಸಿದರು. ಇದರಲ್ಲಿ ೩ ಸೈನಿಕರು ಹುತಾತ್ಮರಾದರೇ, ೬ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೊರೆಗಾವ ಭೀಮಾ ಪ್ರಕರಣದಲ್ಲಿ ದೆಹಲಿ ವಿದ್ಯಾಪೀಠದ ಪ್ರಾ. ಹನೀ ಬಾಬೂ ಬಂಧನ

ಕೊರೆಗಾವ ಭೀಮಾದಲ್ಲಿ ನಡೆದ ಹಿಂಸಾಚಾರದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ವಿದ್ಯಾಪೀಠದ ಆಂಗ್ಲ ವಿಭಾಗದ ೫೪ ವರ್ಷದ ಪ್ರಾಧ್ಯಾಪಕ ಹನಿ ಬಾಬೂನನ್ನು ಬಂಧಿಸಲಾಗಿದೆ. ಇವರ ಮೇಲೆ ಮಾವೋವಾದಿಗಳ ವಿಚಾರಗಳನ್ನು ಹಬ್ಬಿಸುವ ಆರೋಪವು ಇದೆ.

ಬಿಜನೌರ್ (ಉತ್ತರಪ್ರದೇಶ) ಇಲ್ಲಿ ಬಕರಿ ಈದ್‌ನ ಸಮಯದಲ್ಲಿ ಹಿಂಸಾಚಾರ ಮಾಡುವ ಸಂಚನ್ನು ರೂಪಿಸಿದ ನ್ಯಾಯವಾದಿ ಜಾವೇದ ಸಿದ್ಧಕಿಯ ಬಂಧನ

ಬಕರಿ ಈದ್‌ನ ಸಮಯದಲ್ಲಿ ಹಿಂಸಾಚಾರ ಮಾಡುವ ಸಂಚನ್ನು ರೂಪಿಸಿದ ನ್ಯಾಯವಾದಿ ಜಾವೇದ ಸಿದ್ಧಿಕಿಯನ್ನು ಪೊಲೀಸರು ಅಲಿಗಡ್‌ದಿಂದ ಇತ್ತೀಚೆಗೆ ಬಂಧಿಸಿದ್ದಾರೆ. ಆತನಿಂದ ಒಂದು ಪಿಸ್ತೂಲು, ೧೬೨ ಮದ್ದುಗುಂಡುಗಳು ಹಾಗೂ ಕೆಲವು ಅಕ್ಷೇಪಾರ್ಹ ಕರಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

‘ಆನ್‌ಲೈನ್ ೯ ನೆಯ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ನಿಮಿತ್ತ ಪತ್ರಿಕಾಗೋಷ್ಠಿ !

ಮೋದಿ ಸರಕಾರ ಕೇಂದ್ರದಲ್ಲಿ ಎರಡನೆಯ ಬಾರಿ ಅಧಿಕಾರಕ್ಕೆ ಬಂದ ಬಳಿಕ ಕಾಶ್ಮೀರಿ ಹಿಂದೂಗಳ ಪುನರ್ವಸತಿಯ ದೃಷ್ಟಿಯಿಂದ ಕಲಮ್ ೩೭೦ ರದ್ದುಗೊಳಿಸುವುದು, ಪೌರತ್ವ ತಿದ್ದುಪಡಿ ಕಾನೂನು (ಸಿ.ಎ.ಎ.), ಸರ್ವೋಚ್ಚ ನ್ಯಾಯಾಲಯವು ರಾಮಮಂದಿರದ ಪರವಾಗಿ ನೀಡಿದ ಐತಿಹಾಸಿಕ ತೀರ್ಪು, ಅಲ್ಲದೇ ೫ ಆಗಸ್ಟ್ ೨೦೨೦ ರಂದು ಆಯೋಜಿಸಲಾಗಿರುವ ರಾಮ ಮಂದಿರದ ಭೂಮಿ ಪೂಜೆ ಮುಂತಾದ ಸಕಾರಾತ್ಮಕ ವಿಷಯಗಳು ಘಟಿಸುತ್ತಿವೆ.

ರಾಮಮಂದಿರ ಆಗುತ್ತಿದ್ದಂತೆ ದೇಶದಿಂದ ಕೊರೋನಾ ಓಡಿ ಹೋಗುವುದು ! – ಭಾಜಪದ ಶಾಸಕಿ ಜಸಕೌರ ಮೀನಾ

ನಾವು ಆಧ್ಯಾತ್ಮಿಕ ಶಕ್ತಿಯನ್ನು ಪೂಜಿಸುವವರಾಗಿದ್ದೇವೆ. ನಾವು ಆಧ್ಯಾತ್ಮಿಕ ಶಕ್ತಿಯನುಸಾರವೇ ಮಾರ್ಗಕ್ರಮಣ ಮಾಡುತ್ತೇವೆ. ಅಯೋಧ್ಯೆಯಲ್ಲಿ ರಾಮಮಂದಿರ ಆಗುತ್ತಿದ್ದಂತೆ ಕೊರೋನಾ ದೇಶದಿಂದ ಓಡಿ ಹೋಗಲಿದೆ, ಎಂದು ದೌಸಾ ಲೋಕಸಭೆ ಚುನಾವಣಾ ಕ್ಷೇತ್ರದ ಭಾಜಪದ ಸಂಸದೆ ಜಸಕೌರ್ ಮೀನಾರವರು ಹೇಳಿಕೆಯನ್ನು ನೀಡಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಾಮಿನ ನೆತಾನ್ಯಾಹುನ ಮಗನಿಂದ ಶ್ರೀ ದುರ್ಗಾದೇವಿಯ ಅವಮಾನ ; ಭಾರತೀಯರ ವಿರೋಧದ ನಂತರ ಕ್ಷಮೆ ಯಾಚನೆ

ಇಸ್ರೇಲ್‌ನ ಪ್ರಧಾನಿ ಬೆಂಜಾಮಿನ ನೆತನ್ಯಾಹುನ ೨೯ ವರ್ಷದ ಮಗ ಯಾಯರನು ಟ್ವೀಟ್ ಮೂಲಕ ಶ್ರೀ ದುರ್ಗಾದೇವಿಯ ವಿಡಂಬನಾತ್ಮಕ ಚಿತ್ರ ಪ್ರಸಾರ ಮಾಡಿ ದೇವಿಯ ಅವಮಾನ ಮಾಡಿದ್ದನು. ಇದಕ್ಕೆ ಇಸ್ರೇಲ್‌ನಲ್ಲಿರುವ ಭಾರತೀಯ ನಾಗರಿಕರು ತೀವ್ರವಾಗಿ ಆಕ್ಷೇಪಿಸುತ್ತ ಈ ಚಿತ್ರವನ್ನು ಕೂಡಲೇ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.