ವಾರಾಣಸಿ (ಉತ್ತರಪ್ರದೇಶ) – ಇಲ್ಲಿಯ ದೇವಸ್ಥಾನದಿಂದ ಸಾಯಿಬಾಬಾರ ಮೂರ್ತಿ ತೆರವುಗೊಳಿಸಿರುವ ಸನಾತನ ರಕ್ಷಕ ದಳದ ಪ್ರದೇಶಾಧ್ಯಕ್ಷ ಅಜಯ ಶರ್ಮ ಇವರನ್ನು ಪೊಲೀಸರು ಬಂಧಿಸಿ ದೂರು ದಾಖಲಿಸಲಾಗಿದೆ.
೧. ಪೊಲೀಸ ಉಪಾಯುಕ್ತ ಗೌರವ ಬಂನ್ಸವಾಲ್ ಇವರು, ಸನಾತನ ರಕ್ಷಕ ದಳದ ಪ್ರದೇಶಾಧ್ಯಕ್ಷ ಅಜಯ ಶರ್ಮ ಇವರನ್ನು ಶಾಂತಿ ಭಂಗಗೊಳಿಸಿರುವ ಆರೋಪದಲ್ಲಿ ಬಂಧಿಸಲಾಗಿದೆ. ಆನಂದಮಾಯಿ ದೇವಸ್ಥಾನದ ಅರ್ಚಕರು ಅಜಯ ಶರ್ಮಾ ಇವರ ವಿರುದ್ಧ ದೂರು ನೀಡಿದ ನಂತರ ಪೊಲೀಸರು ಅಪರಾಧ ದಾಖಲಿಸಿಕೊಂಡು ಧಾರ್ಮಿಕ ಪರಂಪರೆ, ಧಾರ್ಮಿಕ ಸ್ಥಳಗಳು ಅಥವಾ ಪ್ರತೀಕಗಳ ಅವಮಾನ ಮಾಡುವುದು, ಶಾಂತಿ ಭಂಗಗೊಳಿಸುವುದು ಮುಂತಾದ ಆರೋಪದ ಅಡಿಯಲ್ಲಿ ಬಂದಿಸಲಾಗಿದೆ. ಸಾಯಿ ದೇವಸ್ಥಾನದ ವ್ಯವಸ್ಥಾಪಕರು ಪೊಲೀಸ ಆಯುಕ್ತರನ್ನು ಭೇಟಿ ಮಾಡಿದರು. ಕಾಶಿಯಲ್ಲಿನ ಎಲ್ಲಾ ೭೨ ದೇವಸ್ಥಾನಗಳಿಗೆ ಸುರಕ್ಷಣೆ ನೀಡಲು ಈ ಸಮಯದಲ್ಲಿ ಆಗ್ರಹಿಸಲಾಗಿದೆ ಎಂದು ಹೇಳಿದರು.
೨. ಸನಾತನ ರಕ್ಷಕ ದಳದಿಂದ ಅಕ್ಟೋಬರ್ ೧ ರಂದು ವಾರಾಣಸಿಯಲ್ಲಿನ ೧೪ ದೇವಸ್ಥಾನಗಳಿಂದ ಸಾಯಿಬಾಬಾ ಮೂರ್ತಿ ತೆರವುಗೊಳಿಸಿದ್ದಾರೆ. ‘ಇನ್ನು ೬೦ ದೇವಸ್ಥಾನಗಳಲ್ಲಿನ ಸಾಯಿಬಾಬಾರ ಮೂರ್ತಿಗಳನ್ನು’, ತೆರೆವು ಗೊಳಿಸಲಾಗುವುದೆಂದು ಸಂಸ್ಥೆಯಿಂದ ಹೇಳಲಾಗಿದೆ. ಲಕ್ಷ್ಮಣಪುರಿ ಇಲ್ಲಿಯ ಅಖಿಲ ಭಾರತೀಯ ಹಿಂದೂ ಮಹಾಸಭೆಯಿಂದ ದೇವಸ್ಥಾನದಲ್ಲಿನ ಸಾಯಿ ಬಾಬಾರ ಮೂರ್ತಿಯನ್ನು ತೆರೆವುಗೊಳಿಸಲು ಆಗ್ರಹಿಸಿತ್ತು.
೩. ಈ ಘಟನೆಯ ನಂತರ ಮಹಾರಾಷ್ಟ್ರದಲ್ಲಿ ಇರುವ ಶಿರಡಿ ಸಾಯಿ ಟ್ರಸ್ಟ್ ನಿಂದ ಈ ರೀತಿ ಘಟನೆಯನ್ನು ತಕ್ಷಣವೇ ತಡೆಯಬೇಕೆಂದು ಆಗ್ರಹಿಸಿದೆ. ಶಿರಡಿ ಸಾಯಿ ಟ್ರಸ್ಟಿನ ಅಭಿಪ್ರಾಯ, ನಾವು ಮಹಾರಾಷ್ಟ್ರ ಸರಕಾರದ ಜೊತೆಗೆ ಮಾತನಾಡಿದ್ದೇವೆ ಮತ್ತು ಅದಕ್ಕೆ ಉತ್ತರಪ್ರದೇಶ ಸರಕಾರದ ಜೊತೆಗೆ ಈ ವಿಷಯದ ಕುರಿತು ಚರ್ಚಿಸಲು ಹೇಳಲಾಗಿದೆ. ಸಾಯಿ ಬಾಬಾರ ಮೂರ್ತಿ ತೆರೆವುಗೊಳಿಸುವುದನ್ನು ತಕ್ಷಣ ನಿಷೇಧಿಸಬೇಕು. ಇಂತಹ ಕೃತಿಯಿಂದ ಸಾಯಿ ಭಕ್ತರ ಭಾವನೆಗೆ ನೋವು ಉಂಟಾಗುತ್ತದೆ.
ಮಹಾರಾಷ್ಟ್ರದಲ್ಲಿ ನಡೆಯುವ ಚುನಾವಣೆಯನ್ನು ನೋಡಿದರೆ ಇದು ಷಡ್ಯಂತ್ರ ಇರುವುದೇ ? – ಸ್ವಾಮಿ ಜಿತೇಂದ್ರಾನಂದ ಸರಸ್ವತಿ
ಸಾಯಿಬಾಬಾರ ಮೂರ್ತಿ ೪ ರಿಂದ ೧೦ ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಸ್ಥಾಪಿಸಲಾಗಿದ್ದವು. ಯಾರು ಮೂರ್ತಿಗಳನ್ನು ತೆರವುಗೊಳಿಸಿದ್ದಾರೆ ಅವರಿಗೆ ಇದು ತಿಳಿದಿಲ್ಲವೇ ? ಅಥವಾ ಇಂದು ಶ್ರದ್ದೆಯ ರೂಪಾಂತರ ಅಂಧಃಶೃದ್ದೇಯಲ್ಲಿ ಆಗಿರುವುದರಿಂದ ಮೂರ್ತಿಗಳನ್ನು ತೆರೆವುಗೊಳಿಸಲಾಗುತ್ತಿದೆಯೇ ? ಮಹಾರಾಷ್ಟ್ರದಲ್ಲಿ ವಿಧಾನಸಭೆಯ ಚುನಾವಣೆ ನಡೆಯುವುದಿದೆ ಅದರ ಹಿನ್ನೆಲೆಯಲ್ಲಿ ಇದು ಷಡ್ಯಂತ್ರ ಇರಬಹುದೇ ?, ಎಂದು ಅಖಿಲ ಭಾರತೀಯ ಸಂತ ಸಮಿತಿಯ ಕಾರ್ಯದರ್ಶಿ ಸ್ವಾಮೀ ಜಿತೆಂದ್ರಾನಂದ ಸರಸ್ವತಿ ಇವರು ವಾರಾಣಸಿಯಲ್ಲಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು.