ಭಾರತಕ್ಕೆ ಶ್ರೀಲಂಕಾ ರಾಷ್ಟ್ರಪತಿ ದಿಸಾ ನಾಯಕೆಯವರ ಭರವಸೆ
ಕೊಲಂಬೊ (ಶ್ರೀಲಂಕಾ) – ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಶ್ರೀಲಂಕಾದ ನೂತನ ರಾಷ್ಟ್ರಪತಿ ಅನುರ ಕುಮಾರ ದಿಸಾ ನಾಯಕೆ ಅವರನ್ನು ಭೇಟಿ ಮಾಡಿದರು. ಈ ಸಭೆಯಲ್ಲಿ, ‘ಸಮೃದ್ಧ ಶ್ರೀಲಂಕಾದ ಅವರ ಕನಸನ್ನು ನನಸಾಗಿಸಲು ಮತ್ತು ಜನರ ಆಕಾಂಕ್ಷೆಗಳನ್ನು ಈಡೇರಿಸಲು ಭಾರತದ ಆರ್ಥಿಕ ನೆರವು ಮುಖ್ಯವಾಗಿದೆ. “ಭಾರತದ ಹಿತಾಸಕ್ತಿಗಳನ್ನು ಪರಿಗಣಿಸಿ, ಶ್ರೀಲಂಕಾದ ಭೂಪ್ರದೇಶವನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಲು ಯಾರಿಗೂ ಅವಕಾಶ ನೀಡುವುದಿಲ್ಲ” ಎಂದು ಅಧ್ಯಕ್ಷ ದಿಸಾ ನಾಯಕೆ ಹೇಳಿದರು. ಈ ಸಮಯದಲ್ಲಿ, ಭಾರತವು ಶ್ರೀಲಂಕಾಕ್ಕೆ ಅದರ ಆರ್ಥಿಕತೆಯನ್ನು ಪುನರ್ನಿರ್ಮಿಸಲು ನಿರಂತರ ಬೆಂಬಲ ನೀಡುವ ಭರವಸೆ ನೀಡಿತು. “ದ್ವಿಪಕ್ಷೀಯ ಸಾಲ ಪುನರ್ ರಚನೆಯ ಕುರಿತು ಭಾರತವು ಶ್ರೀಲಂಕಾದೊಂದಿಗೆ ಸೌಹಾರ್ದಯುತ ಒಪ್ಪಂದವನ್ನು ಮಾಡಿಕೊಳ್ಳುತ್ತದೆ ಮತ್ತು ಖಾಸಗಿ ಬಾಂಡ್ ಹೊಂದಿರುವ (ಹೋಲ್ಡರ್) ಸಾಲ ಪುನರ್ ರಚನೆಯ ಬಗ್ಗೆ ಭಾರತ ಶ್ರೀಲಂಕೆಯೊಂದಿಗಿನ ಒಪ್ಪಂದವನ್ನು ಬೆಂಬಲಿಸುವುದು’ ಎಂದೂ ಅವರು ಭರವಸೆ ನೀಡಿದರು.
ಸಂಪಾದಕೀಯ ನಿಲುವುದಿಸಾನಾಯಕೆ ಚೀನಾದ ಪರ ಮತ್ತು ಭಾರತ ವಿರೋಧಿಯಾಗಿದ್ದಾರೆಂದು ಹೇಳಲಾಗುತ್ತದೆ. ಆದ್ದರಿಂದ ಅವರ ಹೇಳಿಕೆಯ ಮೇಲೆ ನಾವು ಎಷ್ಟರಮಟ್ಟಿಗೆ ವಿಶ್ವಾಸವಿಡಬಹುದು ? ಭಾರತವು ಶ್ರೀಲಂಕಾಕ್ಕೆ ಸಂಬಂಧಿಸಿದಂತೆ ಜಾಗರೂಕತೆಯಿಂದ ಇರುವುದು ಸೂಕ್ತವಾಗಿದೆ ! |