ದೆಹಲಿಯ ಹನುಮಾನ್ ದೇವಾಲಯವನ್ನು ಕಾನೂನುಬಾಹಿರವೆಂದು ಘೋಷಿಸಿ ನೆಲಸಮ ಮಾಡಿದ ಆಡಳಿತ !

ವಿ.ಹಿಂ.ಪ ನಿಂದ ವಿರೋಧ !

ದೆಹಲಿಯ ಆಮ್ ಆದ್ಮಿ ಸರಕಾರಕ್ಕೆ ಅಕ್ರಮ ಮದರಸಾಗಳು, ಮಸೀದಿಗಳು, ಮಜಾರ ಇತ್ಯಾದಿಗಳನ್ನು ಕೆಡವಲು ಧೈರ್ಯವಿದೆಯೇ ?

ನವ ದೆಹಲಿ – ಸ್ಥಳೀಯ ಚಾಂದನಿ ಚೌಕ್‌ನಲ್ಲಿರುವ ಹನುಮಾನ್ ದೇವಸ್ಥಾನವನ್ನು ದೆಹಲಿ ಸರಕಾರದ ಆಡಳಿತವರ್ಗವು ಕಾನೂನು ಬಾಹಿರವೆಂದು ಹೇಳಿ ನೆಲಸಮ ಮಾಡಿದೆ. ಇದನ್ನು ವಿಶ್ವ ಹಿಂದೂ ಪರಿಷತ್ತು ವಿರೋಧಿಸಿದೆ. ವಿ.ಹಿಂ.ಪ.ನ ವಕ್ತಾರರಾದ ವಿನೋದ ಬಂಸಲ ಇವರು, ‘ಈ ಅತ್ಯಂತ ಅವಮಾನಕರ ಘಟನೆ ಔರಂಗಜೇಬ್ ಆಡಳಿತವನ್ನು ನೆನಪಿಸಿತು.

ಕಳೆದ ಒಂದೂವರೆ ತಿಂಗಳಿನಿಂದ ದೇವಾಲಯವನ್ನು ರಕ್ಷಿಸುವಂತೆ ಸರಕಾರವನ್ನು ಕೋರಲಾಗುತ್ತಿತ್ತು; ಕೊನೆಯಲ್ಲಿ ಆಡಳಿತವು ಅದನ್ನು ನೆಲಸಮ ಮಾಡಿದೆ.

(ಸೌಜನ್ಯ : Punjab Kesari TV)

(ಈ ಮೇಲಿನ ಚಿತ್ರವನ್ನು ಯಾರ ಭಾವನೆಗಳಿಗೆ ನೋವನ್ನುಂಟುಮಾಡುವ ಉದ್ದೇಶವಾಗಿರದೆ ಕೇವಲ ನಿಜವಾದ ಸಂಗತಿಯನ್ನು ತೋರಿಸುವ ಉದ್ದೇಶವಾಗಿದೆ)

ದೇವಾಲಯವನ್ನು ನೆಲಸಮ ಮಾಡಬಾರದು ಎಂದು ಸರಕಾರ ನ್ಯಾಯಾಲಯದಲ್ಲಿ ಅರ್ಜಿಯೂ ಸಲ್ಲಿಸಲಿಲ್ಲ ಮತ್ತು ವಿ.ಹಿಂ.ಪ. ನೊಂದಿಗೆ ಚರ್ಚಿಸಲು ಸಮಯವೂ ನೀಡಲಿಲ್ಲ.’ ‘ಹಿಂದೂ ಸಮಾಜದ ಬಗೆಗಿನ ಈ ತಾರತಮ್ಯ ಮತ್ತು ದುರ್ಲಕ್ಷ್ಯ ಎಷ್ಟು ದಿನ ಮುಂದುವರಿಯಲಿದೆ ?’, ಎಂಬ ಪ್ರಶ್ನೆಯನ್ನೂ ಅವರು ಕೇಳಿದರು.