US Yemen Attack : ಅಮೇರಿಕ ಸೈನ್ಯದಿಂದ ಎಮೆನ್ ಮೇಲೆ ದಾಳಿ !

  • ಹುತಿ ಭಯೋತ್ಪಾದಕರ ೧೫ ನೆಲೆಗಳ ಮೇಲೆ ಗುರಿ

  • ವ್ಯಾಪಾರಿ ನೌಕೆಯ ಮೇಲೆ ದಾಳಿ ನಿಲ್ಲಿಸುವುದಕ್ಕಾಗಿ ಅಮೇರಿಕಾದಿಂದ ಕೃತಿ

ಸನಾ (ಎಮೆನ್) – ಅಮೇರಿಕ ಸೈನ್ಯದಿಂದ ಎಮೆನ್ ನಲ್ಲಿನ ಹುತಿ ಭಯೋತ್ಪಾದಕರ ಹಿಡಿತದಲ್ಲಿರುವ ೧೫ ಸ್ಥಳಗಳ ಮೇಲೆ ದಾಳಿ ನಡೆಸಿದೆ. ಕೆಂಪು ಸಮುದ್ರ ಮತ್ತು ಎಮೆನ್ ಕೊಲ್ಲಿಯಲ್ಲಿ ಹುತಿ ಭಯೋತ್ಪಾದಕರು ಅಮೇರಿಕಾ ಮತ್ತು ಬ್ರಿಟಿಷ ವ್ಯಾಪಾರಿ ನೌಕೆಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸುವುದಕ್ಕಾಗಿ ಅಮೆರಿಕ ಸೈನ್ಯವು ದಾಳಿ ಆರಂಭಿಸಿದೆ. ಈ ದಾಳಿಯ ಗುರಿ ಹುತಿಗಳ ಕ್ಷಮತೆಯನ್ನು ಕುಗ್ಗಿಸುವುದು ಎಂದಾಗಿದೆ.

೧. ಅಮೇರಿಕಾದ ಈ ದಾಳಿಯ ನಂತರ ಎಮೆನ್ ನ ರಾಜಧಾನಿ ಸನಾ ಸಹಿತ ಬಹಳಷ್ಟು ಸ್ಥಳಗಳಲ್ಲಿ ಸ್ಫೋಟ ಆಗಿರುವ ಮಾಹಿತಿ ಬೆಳಕಿಗೆ ಬಂದಿದೆ.

೨. ಇಸ್ರೈಲ್-ಹಮಾಸ ಹೋರಾಟದ ಸಮಯದಲ್ಲಿ ಗಾಝಾವನ್ನು ಬೆಂಬಲಿಸಿ ಹುತಿ ಭಯೋತ್ಪಾದಕರು ನವಂಬರ್ ೨೦೨೩ ರಿಂದ ಕೆಂಪು ಸಮುದ್ರದಲ್ಲಿ ವ್ಯಾಪಾರ ನೌಕೆಗಳ ಮೇಲೆ ದಾಳಿ ಮಾಡುತ್ತಿದ್ದರು.

೩. ಇಸ್ರೈಲ್ ನಿಂದ ಕೂಡ ಎಮೆನನಲ್ಲಿ ಹುತಿ ಭಯೋತ್ಪಾದಕರ ಮೇಲೆ ದಾಳಿ ಮುಂದುವರೆಸಿತ್ತು. ಹುತಿ ಭಯೋತ್ಪಾದಕರು ಇತ್ತೀಚಿಗೆ ಇಸ್ರೈಲ್ ಮೇಲೆ ಕ್ರೂಜ್ ಕ್ಷಿಪಣಿ ಹಾರಿಸಿತ್ತು.

೪. ಹುತಿ ಭಯೋತ್ಪಾದಕರು ಇಲ್ಲಿಯವರೆಗೆ ೧೦೦ ವ್ಯಾಪಾರಿ ನೌಕೆಗಳ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ೨ ನೌಕೆಗಳು ಧ್ವಂಸವಾಗಿ ಮುಳುಗಿ ಹೋಗಿವೆ. ಹಾಗೂ ಹುತಿ ಬಂಡಾಯಗಾರರು ಎಮೆನ್ ಕಣಿವೆಯಲ್ಲಿ ಎರಡು ವ್ಯಾಪಾರಿ ನೌಕೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಧ್ವಂಸಗೊಳಿಸಿತ್ತು.

೫. ಕೆಲವು ದಿನಗಳ ಹಿಂದೆ ಹುತಿ ಭಯೋತ್ಪಾದಕರು ಅಮೆರಿಕಾದ ಯುದ್ಧ ನೌಕೆಯ ಮೇಲೆ ದಾಳಿ ನಡೆಸಿತ್ತು. ಈ ಭಯೋತ್ಪಾದಕರು ಇಸ್ರೈಲ್ ಮೇಲೆ ಕೂಡ ಕ್ಷಿಪಣಿ ಹಾರಿಸಿದ್ದಾರೆ.

ಸಂಪಾದಕೀಯ ನಿಲುವು

ಯಾವಾಗ ಅಮೆರಿಕಾದ ಹಿತದ ಅಂಶ ಎದುರಾತ್ತದೆ, ಆಗ ಅದು ಯಾವುದೇ ವಿಚಾರ ಮಾಡದೇ ನೇರ ದಾಳಿ ಮಾಡಿ ಶತ್ರುಗಳಿಗೆ ಪಾಠ ಕಲಿಸುತ್ತದೆ. ಭಾರತ ಹೀಗೆ ಆಕ್ರಮಣಕಾರಿ ನೀತಿ ಯಾವಾಗ ಅವಲಂಬಿಸುವುದು ?