|
ಬುಲಂದಶಹರ್ (ಉತ್ತರಪ್ರದೇಶ) – ಉತ್ತರಪ್ರದೇಶದಲ್ಲಿನ ಗಾಝಿಯಾಬಾದದಲ್ಲಿ ಡಾಸನಾ ದೇವಸ್ಥಾನದಲ್ಲಿನ ಜುನಾ ಅಖಾಡಾದ ಮಹಾಮಂಡಲೇಶ್ವರ ಯತಿ ನರಸಿಂಹನಂದ ಇವರು ಮಹಮ್ಮದ್ ಪೈಗಂಬರನ್ನ ಕುರಿತು ನೀಡಿರುವ ಹೇಳಿಕೆಯಿಂದ ಉತ್ತರ ಪ್ರದೇಶದಲ್ಲಿನ ಮುಸಲ್ಮಾನರು ಅಲ್ಲಲ್ಲಿ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರೇ ಕೆಲವು ಸ್ಥಳಗಳಲ್ಲಿ ಕಲ್ಲುತೂರಾಟ ಕೂಡ ಮಾಡಿದರು. ಸಾವಿರಾರು ಮುಸಲ್ಮಾನರು ಡಾಸನಾ ದೇವಸ್ಥಾನದ ಹೊರಗೆ ಒಟ್ಟಾಗಿ ಸೇರಿ ಪ್ರತಿಭಟನೆ ನಡೆಸಿದರು. ತಡರಾತ್ರಿ ಪೊಲೀಸರು ಈ ಜನಜಂಗುಳಿಯನ್ನು ಚದುರಿಸತ್ತು. ಮೆರಠ ಮತ್ತು ಮಥೂರ ಇಲ್ಲಿ ಕೂಡ ಮುಸಲ್ಮಾನರಿಂದ ಪ್ರತಿಭಟನೆ ನಡೆಸಲಾಯಿತು. ಈ ಸಮಯದಲ್ಲಿ ಪೊಲೀಸರು ಸಂಚಲನ ನಡೆಸಿದರು. ಈ ಘಟನೆಯ ನಂತರ ಪಶ್ಚಿಮ ಉತ್ತರಪ್ರದೇಶದಲ್ಲಿ ಜಾಗರೂಕತೆಯ ಎಚ್ಚರಿಕೆ ನೀಡಲಾಗಿದೆ. ಬುಲಂದಶಹರ್ ಇಲ್ಲಿಯ ಸಿಕಂದರಾಬಾದ್ ಪೊಲೀಸ್ ಠಾಣೆಯ ಹೊರಗೆ ಮುಸಲ್ಮಾನರು ಶುಕ್ರವಾರದ ನಮಾಜದ ನಂತರ ಗಲಾಟೆ ಮಾಡಿದರು. ಆ ಸಮಯದಲ್ಲಿ ‘ಸರ್ ತನ ಸೇ ಜುದಾ’ ದ(ಶಿರಚ್ಛೇದನದ) ಘೋಷಣೆಗಳು ನೀಡಿದರು. ಆ ಸಮಯದಲ್ಲಿ ಪೊಲೀಸರು ಕೆಲವರನ್ನು ಬಂಧಿಸಿ ಪೊಲೀಸ ಠಾಣೆಗೆ ಕರೆದುಕೊಂಡು ಹೋದರು. ಅದರ ಸಿಟ್ಟಿನಿಂದ ಅವರು ಸಂಜೆ ಗಡ್ಡಿವಾಡ ಪರಿಸರದಲ್ಲಿನ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಯತಿ ನರಸಿಂಹಾನಂದ ಇವರು ೬ ದಿನಗಳ ಹಿಂದೆ ಗಾಜಿಯಾಬಾದದ ಒಂದು ಕಾರ್ಯಕ್ರಮದಲ್ಲಿ ಮಹಮ್ಮದ್ ಪೈಗಂಬರ್ ಇವರ ಕುರಿತು ಹೇಳಿಕೆ ನೀಡಿದ್ದರು. ಈ ಹೇಳಿಕೆ ಆಕ್ಷೇಪಾರ್ಹವಾಗಿದೆ ಎಂದು ಆಕ್ಷೇಪಿಸುತ್ತಾ ಮುಸಲ್ಮಾನರು ಗಾಝಿಯಬಾದ್ ಇಲ್ಲಿ ಪೊಲೀಸರಿಗೆ ದೂರು ನೀಡಿದ ನಂತರ ಅಪರಾಧ ದಾಖಲಿಸಲಾಯಿತು ಹಾಗೂ ಎರಡನೆಯ ದೂರು ಮಹಾರಾಷ್ಟ್ರದಲ್ಲಿನ ಠಾಣೆ ಜಿಲ್ಲೆಯಲ್ಲಿನ ಮುಂಬ್ರ ಪೊಲೀಸ ಠಾಣೆಯಲ್ಲಿ ದಾಖಲಿಸಲಾಗಿದೆ.
ಸಂಪಾದಕೀಯ ನಿಲುವುಮಹಮ್ಮದ್ ಪೈಗಂಬರರ ಕುರಿತು ಹೇಳಿಕೆ ನೀಡಿರುವುದರಿಂದ ಮುಸಲ್ಮಾನರು ಕೂಡಲೇ ರಸ್ತೆಗಿಳಿಯುತ್ತಾರೆ; ಆದರೆ ಮತಾಂಧ ಮುಸಲ್ಮಾನರು ಯಾವಾಗ ಯಾವುದಾದರೂ ಸ್ಥಳದಲ್ಲಿ ಹಿಂದುಗಳ ಧಾರ್ಮಿಕ ಮೆರವಣಿಗೆಯ ಮೇಲೆ ದಾಳಿ ಮಾಡುತ್ತಾರೆ ಆಗ ದೇಶದಲ್ಲಿನ ಇತರ ಸ್ಥಳಗಳಲ್ಲಿನ ಹಿಂದುಗಳು ನಿಷ್ಕ್ರಿಯವಾಗಿರುತ್ತಾರೆ ! |