ಪಿ.ಎಫ್.ಐ. ಹಾಗೂ ಎಸ್.ಡಿ.ಪಿ.ಐ. ಈ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯ

ಆಗಸ್ಟ್ ೧೧ ರಂದು ಬೆಂಗಳೂರಿನಲ್ಲಿ ಮತಾಂಧರು ಮಾಡಿದ ಗಲಭೆಯ ಹಿಂದೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’(ಪಿ.ಎಫ್.ಐ.) ಹಾಗೂ ಅದರ ರಾಜಕೀಯ ಶಾಖೆಯಾಗಿರುವ ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಈ ಪಕ್ಷಗಳು ಇರುವ ಬಗ್ಗೆ ತನಿಖೆಯಿಂದ ಬಹಿರಂಗವಾಗಿದೆ.

ದೆಹಲಿ ಗಲಭೆಯ ಆರೋಪಿ ತಾಹಿರ್ ಹುಸೇನ್‌ನ ಕಾರ್ಪೊರೇಟರ್ ಹುದ್ದೆ ರದ್ದು

ಪೂರ್ವ ದೆಹಲಿಯ ಆಮ್ ಆದ್ಮಿ ಪಕ್ಷದ ವಾರ್ಡ್ ಸಂ. ೫೯-ಈ ಯ ಕಾರ್ಪೊರೇಟರ್ ಹಾಗೂ ಅಲ್ಲಿಯ ಗಲಭೆಯ ಆರೋಪಿ ತಾಹಿರ್ ಹುಸೇನ್ ಇವರನ್ನು ಕಾರ್ಪೊರೇಟರ್ ಹುದ್ದೆಯಿಂದ ತೆಗೆದುಹಾಕಲಾಗಿದೆ. ಪೂರ್ವ ದೆಹಲಿಯ ಮಹಾನಗರ ಪಾಲಿಕೆಯು ಆಗಸ್ಟ್ ೨೬ ರಂದು ನಿರ್ಧಾರ ತೆಗೆದುಕೊಂಡರು.

ಚೆನ್ನೈಯ ಯುವತಿಯನ್ನು ಬ್ರಿಟನ್‌ನಿಂದ ಅಪಹರಿಸಿ ಬಾಂಗ್ಲಾದೇಶಕ್ಕೆ ಕೊಂಡೊಯ್ದ ಬಾಂಗ್ಲಾದೇಶಿ ಮತಾಂಧ

ಕೆಲವು ಬಾಂಗ್ಲಾದೇಶಿ ಮತಾಂಧರು ಚೆನ್ನೈಯ ಯುವತಿಯನ್ನು ಬ್ರಿಟನ್‌ನಿಂದ ಅಪಹರಿಸಿ ಆಕೆಯನ್ನು ಬಾಂಗ್ಲಾದೇಶಕ್ಕೆ ಕರೆದುಕೊಂಡು ಹೋಗಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೀಡಿತೆಯ ಪೋಷಕರು ೨೨ ಮೇ ೨೦೨೦ ರಂದು ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದರು. ಅಲ್ಲಿಂದ ಈ ಪ್ರಕರಣವು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾಯಿಸಲಾಯಿತು.

ಬೀರಭೂಮ್(ಬಂಗಾಲ)ದಲ್ಲಿ ದಂಡ ಕಟ್ಟಲಿಲ್ಲವೆಂದು ೭ ಪಂಚರಿಂದಲೇ ಆದಿವಾಸಿ ಮಹಿಳೆಯ ಮೇಲೆ ಬಲಾತ್ಕಾರ

ಇಲ್ಲಿಯ ಮಹಮ್ಮದ ಬಾಜಾರ ಪ್ರದೇಶದಲ್ಲಿ ಓರ್ವ ಆದಿವಾಸಿ ಮಹಿಳೆಯ ಮೇಲೆ ಅನೈತಿಕ ಸಂಬಂಧದ ಆರೋಪ ಮಾಡಲಾಗಿತ್ತು ಹಾಗೂ ಪಂಚಾಯತರು ಆಕೆಗೆ ೧ ಲಕ್ಷ ರೂಪಾಯಿ ದಂಡ ನೀಡುವ ಶಿಕ್ಷೆಯನ್ನು ಹೇಳಿದ್ದರು; ಆದರೆ ಇಷ್ಟು ದಂಡ ತುಂಬಲು ಸಾಧ್ಯವಾಗಲಿಲ್ಲ. ದಂಡವನ್ನು ತುಂಬದೇ ಇದ್ದರಿಂದ ಪಂಚರೇ ಆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದರು.

ತೆಲಂಗಾಣಾದಲ್ಲಿ ಕೊರೋನಾಮುಕ್ತರಾಗಿದ್ದ ೨ ರೋಗಿಗಳಿಗೆ ಪುನಃ ಕೊರೋನಾದ ಸೋಂಕು

ರಾಜ್ಯದಲ್ಲಿ ಕೊರೋನಾಮುಕ್ತರಾಗಿದ್ದ ೨ ರೋಗಿಗಳಿಗೆ ಪುನಃ ಕೊರೋನಾದ ಸೋಂಕು ತಗಲಿರುವ ಮಾಹಿತಿ ತೆಲಂಗಾಣ ರಾಜ್ಯದ ಆರೋಗ್ಯ ಸಚಿವ ಇತೆಲಾ ರಾಜೆಂದರ ಇವರು ನೀಡಿದರು. ಆದ್ದರಿಂದ ‘ನಾಗರಿಕರು ಭಯಪಡಬಾರದು. ಕೊರೋನಾದ ಸಾವಿನ ಪ್ರಮಾಣ ತುಂಬಾ ನಗಣ್ಯವಾಗಿದೆ. ಶೇ. ೯೯ ರಷ್ಟು ಜನರು ಗುಣಮುಖರಾಗುತ್ತಿದ್ದಾರೆ’, ಎಂದೂ ಅವರು ಹೇಳಿದರು.

‘ರೇಲ್ ಯಾತ್ರಿ’ ಜಾಲತಾಣದಿಂದ ೭ ಲಕ್ಷ ಪ್ರಯಾಣಿಕರ ಗೌಪ್ಯ ಮಾಹಿತಿ ಬಹಿರಂಗ

‘ರೇಲ್ ಯಾತ್ರಿ’ ಈ ಜಾಲತಾಣದಿಂದ ೭ ಲಕ್ಷ ಪ್ರಯಾಣಿಕರ ಗೌಪ್ಯ ಮಾಹಿತಿ(ಡಾಟಾ) ಬಹಿರಂಗಗೊಂಡಿದೆ. ಇದರಲ್ಲಿ ಡೆಬಿಟ್ ಕಾರ್ಡ್, ಯು.ಪಿ.ಐ. ಡಾಟಾ ಹಾಗೂ ವೈಯಕ್ತಿಕ ಮಾಹಿತಿಗಳು ಸೇರಿವೆ. ವೈಯಕ್ತಿಕ ಮಾಹಿತಿಯಲ್ಲಿ ಹೆಸರು, ಸಂಚಾರವಾಣಿ ಸಂಖ್ಯೆ, ವಿ-ಅಂಚೆ ವಿಳಾಸ ಹಾಗೂ ಡೆಬಿಟ್ ಕಾರ್ಡ್ ಸಂಖ್ಯೆ ಸೇರಿವೆ. ‘ರೇಲ್ ಯಾತ್ರಿ’ ಜಾಲತಾಣವು ಮಾತ್ರ ಮಾಹಿತಿ ಬಹಿರಂಗವಾಗಿರುವುದನ್ನು ಅಲ್ಲಗಳೆದಿದೆ;

ಇಸ್ಲಾಮ್‌ವಾದಿಗಳ ಒತ್ತಡದಿಂದ ‘ದಿಲ್ಲಿ ರೈಟ್ಸ್ ೨೦೨೦ : ದ ಅನ್ ಟೋಲ್ಡ ಸ್ಟೋರಿ’ ಪುಸ್ತಕದ ಪ್ರಕಾಶನದಿಂದ ‘ಬ್ಲೂಮ್ಸ್‌ಬ್ಯುರಿ ಇಂಡಿಯಾ’ವು ಹಿಂದೆಸರಿದ ನಂತರ ಈಗ ‘ಗರುಡ ಪ್ರಕಾಶನ’ದಿಂದ ಪ್ರಕಾಶನ

‘ದಿಲ್ಲಿ ರೈಟ್ಸ್ ೨೦೨೦ : ದ ಅನ್ ಟೋಲ್ಡ ಸ್ಟೋರಿ’ (ದೆಹಲಿ ಗಲಭೆ ೨೦೨೦ : ಹೇಳದಿರುವ ಕಥೆ) ಈ ಪುಸ್ತಕದ ಪ್ರಕಾಶನವನ್ನು ಎಡಪಂಥಿ ಹಾಗೂ ಇಸ್ಲಾಮ್‌ವಾದಿಗಳ ಒತ್ತಡದಿಂದಾಗಿ ಪ್ರಕಾಶಕ ‘ಬ್ಲೂಮ್ಸ್‌ಬ್ಯುರಿ ಇಂಡಿಯಾ’ವು ಹಿಂದೆ ಸರಿದ ನಂತರ ಈಗ ‘ಗರುಡ ಪ್ರಕಾಶನ’ವು ಈ ಪುಸ್ತಕವನ್ನು ಪ್ರಕಾಶಿಸಲಿದೆ.

ಚೀನಾದೊಂದಿಗಿನ ಚರ್ಚೆ ವಿಫಲಗೊಂಡರೆ ಸೇನಾ ಕಾರ್ಯಾಚರಣೆಯ ಬಗ್ಗೆ ವಿಚಾರ ಮಾಡುವೆವು ! – ಸಿ.ಡಿ.ಎಸ್. ಬಿಪಿನ್ ರಾವತ್‌ರಿಂದ ಚೀನಾಗೆ ಎಚ್ಚರಿಕೆ

ಲಡಾಖನಲ್ಲಿ ಚೀನಾದ ಸೈನಿಕರಿಗೆ ಹಿಂದೆ ಸರಿಯಲು ವಿವಿಧ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿದೆ; ಆದರೆ ಸೇನೆ ಹಾಗೂ ರಾಜತಾಂತ್ರಿಕ ಚರ್ಚೆ ವಿಫಲವಾದರೆ, ಸೇನಾ ಕಾರ್ಯಾಚರಣೆಯ ವಿಚಾರ ಮಾಡಲಾಗುವುದು, ಎಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿ.ಡಿ.ಎಮ್.) ಜನರಲ್ ಬಿಪಿನ ರಾವತ್ ಇವರು ಎಚ್ಚರಿಕೆಯನ್ನು ನೀಡಿದ್ದಾರೆ. ಅವರು ಒಂದು ವಾರ್ತಾವಾಹಿಯಲ್ಲಿನ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.

ಕೇರಳದ ಜಿಹಾದಿಗಳಿಂದ ‘ಸ್ವತಂತ್ರ ಮಲಬಾರ್’ ರಾಜ್ಯದ ಬೇಡಿಕೆ

೧೯೨೧ ನೇ ಇಸವಿಯಲ್ಲಿ ನಡೆದ ತಥಾಕಥಿತ ‘ಮೊಪಲಾ ಕಾಂಡಾ’ದ (ಯಾವುದನ್ನು ತಥಾಕಥಿತ ಇತಿಹಾಸಕಾರರ ಮತ್ತು ರಾಜಕಾರಣಿಗಳ ಒಂದು ಗುಂಪು ‘ಖಿಲಾಪತ ಚಳುವಳಿ’ ಎಂದು ಹೆಸರು ನೀಡಿದೆ) ೯೯ ನೇ ವರ್ಷದ ನಿಮಿತ್ತ ಕೇರಳದ ಜಿಹಾದಿಗಳಿಂದ ‘ಸ್ವತಂತ್ರ ಮಲಬಾರ’ ರಾಜ್ಯದ ಬೇಡಿಕೆಯು ತೀವ್ರವಾಗತೊಡಗಿದೆ.

ದಾವಣಗೆರೆಯಲ್ಲಿ ದೇಶವಿರೋಧಿ ಪೋಸ್ಟ್ ಮಾಡಿದ ಸನಾವುಲ್ಲಾ ಈ ಪೊಲೀಸ್ ಪೇದೆಯ ವಿಚಾರಣೆ ಮಾಡುವಂತೆ ಆದೇಶ !

ಸಾಮಾಜಿಕ ಪ್ರಸಾರ ಮಾಧ್ಯಮದಲ್ಲಿ ದೇಶವಿರೋಧಿ ಪೋಸ್ಟ್ ಪ್ರಸಾರ ಮಾಡಿದ ಪ್ರಕರಣದಲ್ಲಿ ಇಲ್ಲಿಯ ಬಸವನಗರ ಪೊಲೀಸ್ ಠಾಣೆಯ ಪೇದೆ ಸನಾವುಲ್ಲಾನ ವಿಚಾರಣೆಯನ್ನು ಮಾಡುವಂತೆ ಆದೇಶ ನೀಡಲಾಗಿದೆ. ಸನಾವುಲ್ಲಾನನ್ನು ಇದೇ ರೀತಿಯಲ್ಲಿ ೨೦೧೪ ರಲ್ಲಿ ಪೋಸ್ಟ್ ಮಾಡಿದ ಪ್ರಕರಣದಲ್ಲಿ ಅಮಾನತ್ತು ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.