ಬೀರಭೂಮ್(ಬಂಗಾಲ)ದಲ್ಲಿ ದಂಡ ಕಟ್ಟಲಿಲ್ಲವೆಂದು ೭ ಪಂಚರಿಂದಲೇ ಆದಿವಾಸಿ ಮಹಿಳೆಯ ಮೇಲೆ ಬಲಾತ್ಕಾರ

ತೃಣಮೂಲ ಕಾಂಗ್ರೆಸ್ಸಿನ ಬಂಗಾಲದಲ್ಲಿ ಜಂಗಲರಾಜ್ ! ಓರ್ವ ಮಹಿಳಾ ಮುಖ್ಯಮಂತ್ರಿ ಇರುವ ರಾಜ್ಯದಲ್ಲಿ ಮಹಿಳೆಯ ಮೇಲೆ ಹೀಗೆ ಅತ್ಯಾಚಾರವಾಗುವುದು ದುರ್ದೈವ !

ಇಂತಹ ಪಂಚರನ್ನು ನಡುರಸ್ತೆಯಲ್ಲೇ ಗಲ್ಲಿಗೇರಿಸುವ ಶಿಕ್ಷೆ ನೀಡಬೇಕು, ಎಂದು ಯಾರಾದರೂ ಸರಕಾರಕ್ಕೆ ಆಗ್ರಹಿಸಿದರೇ, ಅದರಲ್ಲಿ ಆಶ್ಚರ್ಯವೇನಿಲ್ಲ !

ಬೀರಭೂಮ್(ಬಂಗಾಲ) – ಇಲ್ಲಿಯ ಮಹಮ್ಮದ ಬಾಜಾರ ಪ್ರದೇಶದಲ್ಲಿ ಓರ್ವ ಆದಿವಾಸಿ ಮಹಿಳೆಯ ಮೇಲೆ ಅನೈತಿಕ ಸಂಬಂಧದ ಆರೋಪ ಮಾಡಲಾಗಿತ್ತು ಹಾಗೂ ಪಂಚಾಯತರು ಆಕೆಗೆ ೧ ಲಕ್ಷ ರೂಪಾಯಿ ದಂಡ ನೀಡುವ ಶಿಕ್ಷೆಯನ್ನು ಹೇಳಿದ್ದರು; ಆದರೆ ಇಷ್ಟು ದಂಡ ತುಂಬಲು ಸಾಧ್ಯವಾಗಲಿಲ್ಲ. ದಂಡವನ್ನು ತುಂಬದೇ ಇದ್ದರಿಂದ ಪಂಚರೇ ಆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದರು. ಈ ಪ್ರಕರಣದಲ್ಲಿ ೪ ಜನರನ್ನು ಬಂಧಿಸಲಾಗಿದ್ದು, ೩ ಆರೋಪಿಗಳು ಪರಾರಿಯಾಗಿದ್ದಾರೆ.
ಮಹಿಳೆ ಹಾಗೂ ಆಕೆಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದ ಯುವಕನಿಗೆ ೧ ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ೫೦ ಸಾವಿರ ದಂಡವನ್ನು ತುಂಬಿದ ನಂತರ ಯುವಕನನ್ನು ಬಿಡುಗಡೆ ಮಾಡಲಾಗಿತ್ತು, ಹಾಗೂ ಮಹಿಳೆಗೆ ಕೇವಲ ೧೦ ಸಾವಿರ ರೂಪಾಯಿ ತುಂಬಿಸಲು ಸಾಧ್ಯವಾಯಿತು. ದಂಡದ ಸಂಪೂರ್ಣ ಹಣ ತುಂಬಿಸದೇ ಇದ್ದರಿಂದ ಆಕೆಗೆ ೭ ಜನರು ಬಲವಂತವಾಗಿ ಕಾಡಿಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಿದರು.