ಚೀನಾದೊಂದಿಗಿನ ಚರ್ಚೆ ವಿಫಲಗೊಂಡರೆ ಸೇನಾ ಕಾರ್ಯಾಚರಣೆಯ ಬಗ್ಗೆ ವಿಚಾರ ಮಾಡುವೆವು ! – ಸಿ.ಡಿ.ಎಸ್. ಬಿಪಿನ್ ರಾವತ್‌ರಿಂದ ಚೀನಾಗೆ ಎಚ್ಚರಿಕೆ

ಚೀನಾಗೆ ಮಾತಿನ ಭಾಷೆ ಅರ್ಥವಾಗದಿದ್ದರೆ ಶಸ್ತ್ರದ ಭಾಷೆಯಲ್ಲಿ ತಿಳಿಸಬೇಕು, ಇದೇ ನೀತಿ ಯೋಗ್ಯವಾಗಿದೆ ಹಾಗೂ ಇದೇ ನೀತಿಯನ್ನು ಕೃತಿಗೆ ತರುವುದು ದೇಶದ ಸುರಕ್ಷತೆಗೆ ಯೋಗ್ಯವಾಗಿದೆ !

ನವ ದೆಹಲಿ – ಲಡಾಖನಲ್ಲಿ ಚೀನಾದ ಸೈನಿಕರಿಗೆ ಹಿಂದೆ ಸರಿಯಲು ವಿವಿಧ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿದೆ; ಆದರೆ ಸೇನೆ ಹಾಗೂ ರಾಜತಾಂತ್ರಿಕ ಚರ್ಚೆ ವಿಫಲವಾದರೆ, ಸೇನಾ ಕಾರ್ಯಾಚರಣೆಯ ವಿಚಾರ ಮಾಡಲಾಗುವುದು, ಎಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿ.ಡಿ.ಎಮ್.) ಜನರಲ್ ಬಿಪಿನ ರಾವತ್ ಇವರು ಎಚ್ಚರಿಕೆಯನ್ನು ನೀಡಿದ್ದಾರೆ. ಅವರು ಒಂದು ವಾರ್ತಾವಾಹಿಯಲ್ಲಿನ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.

ಚೀನಾದ ಸೈನಿಕರು ಇನ್ನೂ ಲಡಾಖನ ಪೆಗಾಂಗ್ ನೆಲೆಯ ಪರಿಸರದಲ್ಲಿ ನೆಲೆಯೂರಿದ್ದಾರೆ. ಅವರು ಫಿಂಗರ್ ೫ ರಿಂದ ಹಿಂದೆ ಸರಿಯಲು ಸಿದ್ಧರಿಲ್ಲ. ‘ಸೈನ್ಯದ ಬಳಿ ಪರ್ಯಾಯವೇನಿದೆ ?’ ಈ ಪ್ರಶ್ನೆಗೆ ಉತ್ತರಿಸಲು ರಾವತ್ ಇವರು ನಿರಾಕರಿಸಿದರು. (ಇದರ ಬಗ್ಗೆ ಅವರು ಮಾತನಾಡಬೇಕು ಎಂದು ಹೇಗೆ ಅಪೇಕ್ಷಿಸಲು ಸಾಧ್ಯ? ಸೈನ್ಯದ ಯಾವುದೇ ಕಾರ್ಯಾಚರಣೆಯ ಮಾಹಿತಿಯನ್ನು ಬಹಿರಂಗ ಪಡಿಸುವುದಿಲ್ಲ, ಇದು ಪ್ರಸಾರ ಮಾಧ್ಯಮಗಳು ಯಾವಾಗಲೂ ಗಮನದಲ್ಲಿಡಬೇಕು ! – ಸಂಪಾದಕರು) ಚೀನಾವು ಅಲ್ಲಿ ಕ್ಷಿಪಣಿ, ಟ್ಯಾಂಕ್, ಯುದ್ಧ ವಿಮಾನ ನೇಮಿಸಿದೆ. ಅದರಂತೆ ಭಾರತವೂ ಅದೇರೀತಿಯಲ್ಲಿ ಸಿದ್ಧತೆಯನ್ನು ಮಾಡಿದೆ. ಇಲ್ಲಿನ ವಾದವನ್ನು ಪರಿಹರಿಸಲು ಭಾರತ ಮತ್ತು ಚೀನಾಗಳ ಮಧ್ಯೆ ಕಳೆದ ಹಲವು ವಾರಗಳಿಂದ ಅನೇಕಬಾರಿ ಸೈನ್ಯ ಅಧಿಕಾರಿಗಳೊಂದಿಗೆ ಚರ್ಚೆಯಾಗಿದೆ; ಆದರೆ ಇಲ್ಲಿಯವರೆಗೆ ಪರಿಹಾರ ಸಿಕ್ಕಿಲ್ಲ.