ದಾವಣಗೆರೆಯಲ್ಲಿ ದೇಶವಿರೋಧಿ ಪೋಸ್ಟ್ ಮಾಡಿದ ಸನಾವುಲ್ಲಾ ಈ ಪೊಲೀಸ್ ಪೇದೆಯ ವಿಚಾರಣೆ ಮಾಡುವಂತೆ ಆದೇಶ !

‘ರಕ್ಷಣಾ ಖಾತೆಯಲ್ಲಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಅಲ್ಪಸಂಖ್ಯಾತರನ್ನು ಸೇರಿಸಿ’, ಎಂದು ಬೇಡಿಕೆ ಮಾಡುವ ಜಾತ್ಯತೀತವಾದಿಗಳಿಗೆ ಇದರ ಬಗ್ಗೆ ಏನು ಹೇಳಲಿಕ್ಕಿದೆ ?

ಮಹಾರಾಷ್ಟ್ರ ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ಪೊಲೀಸ್ ಪಡೆಯಲ್ಲಿ ಸಂಖ್ಯೆಯನ್ನು ಹೆಚ್ಚಿಸಲು ಅವರಿಗೆ ತರಬೇತಿಯನ್ನು ನೀಡಲಾಗುವುದು. ಕರ್ನಾಟಕದ ಈ ವಾರ್ತೆಯಿಂದ ಅವರು ಹೇಗೆ ಕಾರ್ಯ ಮಾಡಬಹುದು, ಎಂಬುದನ್ನು ಗಮನದಲ್ಲಿಟ್ಟುಕೊಂಡು ಇತರ ರಾಜ್ಯ ಸರಕಾರಗಳು ಈಗಲೇ ಜಾಗರೂಕರಾಗಿರಬೇಕು !

ದಾವಣಗೆರೆ – ಸಾಮಾಜಿಕ ಪ್ರಸಾರ ಮಾಧ್ಯಮದಲ್ಲಿ ದೇಶವಿರೋಧಿ ಪೋಸ್ಟ್ ಪ್ರಸಾರ ಮಾಡಿದ ಪ್ರಕರಣದಲ್ಲಿ ಇಲ್ಲಿಯ ಬಸವನಗರ ಪೊಲೀಸ್ ಠಾಣೆಯ ಪೇದೆ ಸನಾವುಲ್ಲಾನ ವಿಚಾರಣೆಯನ್ನು ಮಾಡುವಂತೆ ಆದೇಶ ನೀಡಲಾಗಿದೆ. ಸನಾವುಲ್ಲಾನನ್ನು ಇದೇ ರೀತಿಯಲ್ಲಿ ೨೦೧೪ ರಲ್ಲಿ ಪೋಸ್ಟ್ ಮಾಡಿದ ಪ್ರಕರಣದಲ್ಲಿ ಅಮಾನತ್ತು ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. (ಅದೇ ಸಮಯದಲ್ಲಿ ಆ ಪೇದೆಯ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದರೇ, ಇಂದು ಈ ಸ್ಥಿತಿ ಬರುತ್ತಿರಲಿಲ್ಲ ! – ಸಂಪಾದಕರು) ಸನಾವುಲ್ಲಾನು ‘೨೦೦೮ ಬ್ಯಾಚ್ ಪೊಲೀಸ್ ಟೀಮ್’ ಈ ವಾಟ್ಸ್‌ಅಪ್ ಗುಂಪಿನಲ್ಲಿ ‘ಪಾವರ್ ಆಫ್ ಪಾಕಿಸ್ತಾನ ’ ಹೆಸರಿನ ಪೋಸ್ಟ್ ಮಾಡಿದ್ದಾನೆ. (ತಿನ್ನುವುದು ಭಾರತದ ಅನ್ನ ಹಾಗೂ ಪಾಕಿಸ್ತಾನವನ್ನು ಹೊಗಳುವುದು, ಇದೇ ಮತಾಂಧರ ನಿಜವಾದ ರೂಪವಾಗಿದೆ. ಇಂತಹವರನ್ನು ಪಾಕಿಸ್ತಾನಕ್ಕೆ ಕಳುಹಿಸಿ ! – ಸಂಪಾದಕರು)