ನವ ದೆಹಲಿ – ‘ದಿಲ್ಲಿ ರೈಟ್ಸ್ ೨೦೨೦ : ದ ಅನ್ ಟೋಲ್ಡ ಸ್ಟೋರಿ’ (ದೆಹಲಿ ಗಲಭೆ ೨೦೨೦ : ಹೇಳದಿರುವ ಕಥೆ) ಈ ಪುಸ್ತಕದ ಪ್ರಕಾಶನವನ್ನು ಎಡಪಂಥಿ ಹಾಗೂ ಇಸ್ಲಾಮ್‌ವಾದಿಗಳ ಒತ್ತಡದಿಂದಾಗಿ ಪ್ರಕಾಶಕ ‘ಬ್ಲೂಮ್ಸ್‌ಬ್ಯುರಿ ಇಂಡಿಯಾ’ವು ಹಿಂದೆ ಸರಿದ ನಂತರ ಈಗ ‘ಗರುಡ ಪ್ರಕಾಶನ’ವು ಈ ಪುಸ್ತಕವನ್ನು ಪ್ರಕಾಶಿಸಲಿದೆ.
ನ್ಯಾಯವಾದಿ ಮೊನಿಕಾ ಅರೋರಾ, ಸೋನಾಲಿ ಚಿತಳಕರ ಹಾಗೂ ಪ್ರೇರಣಾ ಮಲ್ಹೋತ್ರಾ ಇವರು ಈ ಪುಸ್ತಕವನ್ನು ಬರೆದಿದ್ದಾರೆ. ಲೇಖಕರು ಮಾಡಿದ ಸಂಶೋಧನೆ ಹಾಗೂ ತೆಗೆದುಕೊಂಡಿದ್ದ ಸಂದರ್ಶನದ ಮೇಲಾಧರಿಸಿದ ಈ ಪುಸ್ತಕವು ಮುಂದಿನ ತಿಂಗಳು ಪ್ರಕಾಶನಗೊಳ್ಳಲಿತ್ತು. ಈಗ ಅದು ಅಂಕುರ ಪಾಠಕ ಇವರ ಜಂಟಿಯಾಗಿ ಸಂಕ್ರಾಂತ ಸೋನು ಇವರು ಸ್ಥಾಪಿಸಿದ ‘ಗರುಡ ಪ್ರಕಾಶನ’ ಈ ಭಾರತೀಯ ಪ್ರಕಾಶನ ಸಂಸ್ಥೆ ಪ್ರಕಟಿಸಲಿದೆ.
As per peoples sentiments, we are going ahead with @GarudaPrakashan
LET THE TRUTH BE REVEALED#DelhiRiotsTheUntoldStory https://t.co/G0NnHdf9jl— Monika Arora (@advmonikaarora) August 23, 2020
ಪುಸ್ತಕದ ಲೇಖಕಿ ನ್ಯಾಯವಾದಿ ಮೊನಿಕಾ ಅರೋರಾ ಇವರು, ‘ಜನರ ಬೇಡಿಕೆಯಂತೆ ಈ ಪುಸ್ತಕದ ಪ್ರಕಾಶನವು ‘ಗರುಡ ಪ್ರಕಾಶನ’ ಮಾಡಲಿದೆ. ‘ಬ್ಲೂಮ್ಸ್‌ಬ್ಯುರಿ ಇಂಡಿಯಾ’ ಇದು ಕೇವಲ ದೂರವಾಣಿ ಕರೆ ಮಾಡಿ ‘ಪುಸ್ತಕವನ್ನು ಹಿಂಪಡೆಯಲಾಗಿದೆ’, ಎಂಬ ಮಾಹಿತಿಯನ್ನು ನೀಡಿತ್ತು. ಆದರೆ ಒಪ್ಪಂದವನ್ನು ಅಂತ್ಯಗೊಳಿಸಲು ಅನೌಪಚಾರಿಕವಾಗಿ ಪತ್ರವನ್ನು ಕಳುಹಿಸಿಲ್ಲ’, ಎಂದಿದ್ದಾರೆ. ಈ ಪುಸ್ತಕ ಆಂಗ್ಲ ಹಾಗೂ ಹಿಂದಿ ಭಾಷೆಗಳಲ್ಲಿ ಪ್ರಕಾಶನವಾಗುವುದು ಎಂದು ಈ ಸಮಯದಲ್ಲಿ ಮಾಹಿತಿ ನೀಡಿದರು.
Announcement:
It's official now: @GarudaPrakashan is going to bring the book of @advmonikaarora ji, #DelhiRiotsUntoldStory in English and Hindi both.
Pre-buy links will be shared with you soon.
Keep following us!
Thank you all for putting your trust in Garuda.— Garuda (@GarudaPrakashan) August 23, 2020