ಪಿ.ಎಫ್.ಐ. ಹಾಗೂ ಎಸ್.ಡಿ.ಪಿ.ಐ. ಈ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯ

ಟ್ವಿಟರ್‌ನಲ್ಲಿ #BanPFI_StopRiots ಈ ಟ್ರೆಂಡ್ ೩ನೇ ಸ್ಥಾನದಲ್ಲಿ

  • ವಾಸ್ತವದಲ್ಲಿ ರಾಷ್ಟ್ರಪ್ರೇಮಿಗಳಿಗೆ ಈ ರೀತಿ ಒತ್ತಾಯಿಸುವ ಪ್ರಮೇಯವೇ ಬರಬಾರದು, ಬದಲಾಗಿ ಸರಕಾರ ಸ್ವತಃ ಇಂತಹವುಗಳ ಮೇಲೆ ನಿಷೇಧ ಹೇರಬೇಕು !
  • ಹಿಂದುತ್ವನಿಷ್ಠ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸುವ ಜಾತ್ಯತೀತವಾದಿಗಳು, ಪ್ರಗತಿ(ಅಧೋಗತಿ)ಪರ ಪಕ್ಷಗಳು ಹಾಗೂ ಸಂಘಟನೆಗಳು ಇಂತಹ ರಾಷ್ಟ್ರಘಾತಕ ಸಂಘಟನೆಗಳನ್ನು ನಿಷೇಧಿಸುವಂತೆ ಎಂದೂ ಒತ್ತಾಯಿಸುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಮುಂಬಯಿ – ಆಗಸ್ಟ್ ೧೧ ರಂದು ಬೆಂಗಳೂರಿನಲ್ಲಿ ಮತಾಂಧರು ಮಾಡಿದ ಗಲಭೆಯ ಹಿಂದೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’(ಪಿ.ಎಫ್.ಐ.) ಹಾಗೂ ಅದರ ರಾಜಕೀಯ ಶಾಖೆಯಾಗಿರುವ ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಈ ಪಕ್ಷಗಳು ಇರುವ ಬಗ್ಗೆ ತನಿಖೆಯಿಂದ ಬಹಿರಂಗವಾಗಿದೆ. ಕೆ.ಎಸ್. ಈಶ್ವರಪ್ಪ ಇವರೂ, ‘ಎಸ್.ಡಿ.ಪಿ.ಐ. ಈ ಪಕ್ಷವು ರಾಷ್ಟ್ರವಿರೋಧಿಯಾಗಿದ್ದು ಅದನ್ನು ನಿಷೇಧಿಸುವ ಬಗ್ಗೆ ವಿಚಾರ ಮಾಡಲಾಗುತ್ತಿದೆ’ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಈ ಎರಡೂ ಸಂಘಟನೆಗಳನ್ನು ನಿಷೇಧಿಸುವಂತೆ ರಾಷ್ಟ್ರಪ್ರೇಮಿಗಳಿಂದ ಒತ್ತಾಯ ಮಾಡಲಾಗುತ್ತಿದೆ. ಅದಕ್ಕಾಗಿ ಟ್ವಿಟರ್‌ನಲ್ಲಿ ‘#BanPFI_StopRiots’ ಈ ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಲಾಗಿತ್ತು. ಇದರಲ್ಲಿ ೩೦ ಸಾವಿರಕ್ಕೂ ಹೆಚ್ಚು ರಾಷ್ಟ್ರಪ್ರೇಮಿಗಳು ಟ್ವೀಟ್ ಮಾಡಿ ನಿಷೇಧಿಸುವಂತೆ ಒತ್ತಾಯಿಸಿದೆ.
ಹಿಂದೂ ಜನಜಾಗೃತಿ ಸಮಿತಿಯೂ ತನ್ನ ಜಾಲತಾಣದಲ್ಲಿ ಈ ಸಂಘಟನೆಯನ್ನು ನಿಷೇಧಿಸುವಂತೆ ಹಸ್ತಾಕ್ಷರ ಅಭಿಯಾನವನ್ನು ಆರಂಭಿಸಿದೆ. ಈ ಮೇಲಿನ ಟ್ರೆಂಡ್‌ನಲ್ಲಿ ಸಮಿತಿಯು ಹೆಚ್ಚಿನ ಸಂಖ್ಯೆಯಲ್ಲಿ ಹಸ್ತಾಕ್ಷರ ಮಾಡುವಂತೆ ಕರೆಯನ್ನು ನೀಡಿದೆ.

ರಾಷ್ಟ್ರಪ್ರೇಮಿಗಳು ಮಾಡಿದ ಕೆಲವು ಟ್ವೀಟ್‌ಗಳು

೧. ಓರ್ವ ರಾಷ್ಟ್ರಪ್ರೇಮಿಯು ಟ್ವೀಟ್ ಬರೆಯುತ್ತಾ, ‘ಯಾವ ಸಮಯದಲ್ಲಿ ಸಿಮಿಯ ಮೇಲೆ ನಿಷೇಧ ಹೇರಲಾಯಿತೋ, ಅದೇ ಸಮಯದಲ್ಲಿ ಪಿ.ಎಫ್.ಐ. ಮೇಲೆಯೂ ನಿಷೇಧ ಹೇರಬೇಕಿತ್ತು. ಈ ಎರಡೂ ಸಂಘಟನೆಗಳ ಕಾರ್ಯಪದ್ದತಿ ಒಂದೇಯಾಗಿದೆ. ಗೌಪ್ಯ ಪದ್ದತಿಯಿಂದ ದೇಶವನ್ನು ಒಡೆಯುವಂತೆ ಈ ಸಂಘಟನೆಯು ಸಂಚನ್ನು ರೂಪಿಸುತ್ತಿದೆ. ಇದರ ಮೇಲೆ ತಕ್ಷಣವೇ ನಿಷೇಧ ಹೇರಬೇಕು’ ಎಂದು ಹೇಳಿದರು.

೨. ಇನ್ನೋರ್ವರು, ‘೧೦೭ ರಾಜಕೀಯ ಹತ್ಯೆ, ೮೭ ಗಲಭೆ, ದ್ವೇಷ ಮೂಡಿಸುವ ಯತ್ನ, ಭಯೋತ್ಪಾದನೆಯ ಚಟುವಟಿಕೆಯ ತರಬೇತಿ, ಅಪಹರಣದ ಪ್ರಕರಣಗಳು, ಲವ್ ಜಿಹಾದ್, ಆರ್ಥಿಕ ಹಗರಣ ಇತ್ಯಾದಿ ಗಂಭೀರ ಅಪರಾಧಗಳನ್ನು ಮಾಡುವ ಈ ಸಂಘಟನೆಯ ಮೇಲೆ ಇನ್ನೂ ಏಕೆ ನಿಷೇಧ ಹೇರಲಿಲ್ಲ ?’ ಎಂದು ಕೇಳಿದ್ದಾರೆ.