ಭಾಗ್ಯನಗರ – ರಾಜ್ಯದಲ್ಲಿ ಕೊರೋನಾಮುಕ್ತರಾಗಿದ್ದ ೨ ರೋಗಿಗಳಿಗೆ ಪುನಃ ಕೊರೋನಾದ ಸೋಂಕು ತಗಲಿರುವ ಮಾಹಿತಿ ತೆಲಂಗಾಣ ರಾಜ್ಯದ ಆರೋಗ್ಯ ಸಚಿವ ಇತೆಲಾ ರಾಜೆಂದರ ಇವರು ನೀಡಿದರು. ಆದ್ದರಿಂದ ‘ನಾಗರಿಕರು ಭಯಪಡಬಾರದು. ಕೊರೋನಾದ ಸಾವಿನ ಪ್ರಮಾಣ ತುಂಬಾ ನಗಣ್ಯವಾಗಿದೆ. ಶೇ. ೯೯ ರಷ್ಟು ಜನರು ಗುಣಮುಖರಾಗುತ್ತಿದ್ದಾರೆ’, ಎಂದೂ ಅವರು ಹೇಳಿದರು.
(Source : News Nation)
ರಾಜೆಂದರ ತಮ್ಮ ಮಾತನ್ನು ಮುಂದುವರೆಸುತ್ತಾ, ‘ಯಾವುದೇ ವ್ಯಕ್ತಿಗೆ ಕೊರೋನಾ ಸೋಂಕು ತಗಲಿ ನಂತರ ಚೇತರಿಸಿಕೊಂಡರೇ, ಅವನಿಗೆ ಪುನಃ ಕೊರೋನಾ ಬರುವುದಿಲ್ಲ, ಎಂಬುದು ಖಚಿತವಿಲ್ಲ. ಆತನಿಗೆ ಪುನಃ ಕೊರೋನಾ ಆಗುವ ಆಪಾಯ ಇರುತ್ತದೆ’ ಎಂದು ಹೇಳಿದರು. ತೆಲಂಗಾಣದ ಈ ಮಾಹಿತಿ ಬಹಿರಂಗವಾಗುವ ಹಿಂದಿನ ದಿನ ಹಾಂಗ್‌ಕಾಂಗ್‌ನ ಸಂಶೋಧನೆಯಲ್ಲೂ ಕೊರೋನಾಮುಕ್ತನಾದವನಿಗೆ ಪುನಃ ಸೋಂಕು ಆಗಿರುವುದು ಗಮನಕ್ಕೆ ಬಂದಿತ್ತು.