ಕೇರಳದ ಜಿಹಾದಿಗಳಿಂದ ‘ಸ್ವತಂತ್ರ ಮಲಬಾರ್’ ರಾಜ್ಯದ ಬೇಡಿಕೆ

ಜಮ್ಮು-ಕಾಶ್ಮೀರ, ಖಾಲಿಸ್ತಾನ, ಈಶಾನ್ಯ ಭಾರತದ ಕೆಲವು ರಾಜ್ಯಗಳು ಮತ್ತು ಈಗಿನ ಕೇರಳದಲ್ಲಿ ಸ್ವತಂತ್ರ ರಾಜ್ಯದ ಆಗ್ರಹ ಕೇಳಿಬರುವುದು, ಇದು ಸ್ವಾತಂತ್ರ್ಯ ನಂತರದ ಇಲ್ಲಿಯ ವರೆಗಿನ ಸರಕಾರಗಳ ವೈಫಲ್ಯದ ದ್ಯೋತಕವಾಗಿದೆ, ಎಂದು ಯಾರಿಗಾದರೂ ಅನಿಸಿದರೆ ಆಶ್ಚರ್ಯವೇನಿಲ್ಲ ! ಇವೆಲ್ಲ ಸ್ಥಳಗಳಲ್ಲಿ ಮತಾಂಧರು ಮತ್ತು ರಾಷ್ಟ್ರಘಾತಕರಿಂದ ಈ ಆಗ್ರಹ ಕೇಳಿ ಬರುತ್ತಿದೆ. ಹೀಗೆ ಆಗ್ರಹಿಸುವವರು ಬಂದೂಕು ಹಿಡಿಯುವ ಮೊದಲೇ ಕೇಂದ್ರ ಸರಕಾರವು ಆ ಬಗ್ಗೆ ಕಟ್ಟುನಿಟ್ಟಿನ ವ್ಯವಸ್ಥೆ ಮಾಡುವುದು ಆವಶ್ಯಕವಾಗಿದೆ !

ಹಿಂದೂಗಳು ಹಿಂದೂ ರಾಷ್ಟ್ರದ ಬಗ್ಗೆ ಕೇವಲ ಉಲ್ಲೇಖಿಸಿದರೂ ಆಕಾಶಪಾತಾಳ ಒಂದು ಮಾಡುವ ಪ್ರಗತಿ(ಅಧೋಗತಿ)ಪರರು, ಸಾಮ್ಯವಾದಿಗಳು, ಕಾಂಗ್ರೆಸ್, ಪ್ರಸಾರಮಾಧ್ಯಮಗಳು ಮುಂತಾದ ಜಿಹಾದಿಗಳ ‘ಸ್ವತಂತ್ರ ಮಲಬಾರ’ ರಾಜ್ಯದ ಬೇಡಿಕೆಯ ಬಗ್ಗೆ ಒಂದು ಶಬ್ದ ಮಾತನಾಡುವುದಿಲ್ಲವೆಂಬುದನ್ನು ಗಮನದಲ್ಲಿಡಿ !

ಕೋಚಿ (ಕೇರಳ) – ೧೯೨೧ ನೇ ಇಸವಿಯಲ್ಲಿ ನಡೆದ ತಥಾಕಥಿತ ‘ಮೊಪಲಾ ಕಾಂಡಾ’ದ (ಯಾವುದನ್ನು ತಥಾಕಥಿತ ಇತಿಹಾಸಕಾರರ ಮತ್ತು ರಾಜಕಾರಣಿಗಳ ಒಂದು ಗುಂಪು ‘ಖಿಲಾಪತ ಚಳುವಳಿ’ ಎಂದು ಹೆಸರು ನೀಡಿದೆ) ೯೯ ನೇ ವರ್ಷದ ನಿಮಿತ್ತ ಕೇರಳದ ಜಿಹಾದಿಗಳಿಂದ ‘ಸ್ವತಂತ್ರ ಮಲಬಾರ’ ರಾಜ್ಯದ ಬೇಡಿಕೆಯು ತೀವ್ರವಾಗತೊಡಗಿದೆ. ಮುಸ್ಲಿಂ ಲೀಗ್‌ಗೆ ಸಂಬಂಧಿಸಿದ ‘ಮುಸ್ಲಿಮ್ ಯುಥ ಲೀಗ್’ ‘೨೦೨೧ ನೇ ಇಸವಿಯಲ್ಲಿ ಬರುವ ‘ಮೊಪಲಾ ಕಾಂಡ’ದ ಶತಮಾನೋತ್ಸವದಲ್ಲಿ ಈ ಪ್ರಮುಖ ಬೇಡಿಕೆಯು ಇರುವುದು’, ಎಂದು ಘೋಷಿಸಿದೆ. ‘ಮಲಬಾರ’ ರಾಜ್ಯದಲ್ಲಿ ಮುಸಲ್ಮಾನರು ಬಹುಸಂಖ್ಯೆಯಲ್ಲಿರುವರು. ‘ಮೊಪಲಾ’ ಎಂದು ಗುರುತಿಸಲ್ಪಡುವ ಮತಾಂಧರು ಮಾಡಿದ ಈ ಹಿಂಸಾಚಾರದಲ್ಲಿ ಸಾವಿರಾರು ಹಿಂದೂಗಳ ಹತ್ಯೆಯನ್ನು ಮಾಡಲಾಗಿತ್ತು ಮತ್ತು ಅದಕ್ಕಿಂತಲೂ ಹೆಚ್ಚು ಹಿಂದೂಗಳನ್ನು ಮತಾಂತರಿಸಲಾಗಿತ್ತು.

ಮೊಪಲಾ ಹಿಂಸಾಚಾರದ ಇತಿಹಾಸ !

ಇತಿಹಾಸಕಾರ ಮತ್ತು ಐ.ಸಿ.ಎಚ್.ಆರ್.ನ ಸದಸ್ಯರಾದ ಪ್ರಾ. ಸಿ. ಇಸಾಕ್ ಇವರು, ಕೆಲವು ಇತಿಹಾಸಕಾರರು ಈ ಕಾಂಡಕ್ಕೆ ‘ಕೃಷಿಪ್ರಧಾನ ಸಂಕಟ’ ವೆಂದು ವರ್ಣಿಸಿದ್ದಾರೆ ಎಂದು ಹೇಳಿದರು. ಮಲಬಾರಿನ ಅಂದಿನ ಉಪಜಿಲ್ಲಾಧಿಕಾರಿಗಳಾದ ದಿವಾನ ಬಹಾದೂರ ಸಿ. ಗೋಪಾಲನ್ ನಾಯರ್, ಇವರು ಈ ಘಟನೆಯ ಬಗೆಗಿನ ಮಾಹಿತಿಯನ್ನು ಬರವಣಿಗೆಯ ಮೂಲಕ ವಿಶ್ವಕ್ಕೆ ನೀಡಿದ್ದಾರೆ. ಇದರಲ್ಲಿ, ಸುಮಾರು ೧೦ ಸಾವಿರ ಹಿಂದೂಗಳ ಹತ್ಯೆಯನ್ನು ಮಾಡಲಾಯಿತು ಮತ್ತು ೨೦ ಸಾವಿರ ಹಿಂದೂಗಳು ಬಲವಂತವಾಗಿ ಇಸ್ಲಾಮ್ ಧರ್ಮವನ್ನು ಸ್ವೀಕರಿಸಬೇಕಾಯಿತು; ಆದರೆ ಅದಕ್ಕೆ ‘ಕೃಷಿಕರು ಮಾಡಿದ ಬಂಡಾಯ’ ಎಂದು ಸವಿಯಾದ ಹೆಸರನ್ನು ಕೊಡಲಾಯಿತು. ಎರನಾಡುದಲ್ಲಿನ ‘ಮೊಪಲಾ’ ಇವರು ಜಮೀನುದಾರರ ಬಾಡಿಗೆದಾರರಾಗಿದ್ದರು ಮತ್ತು ಉತ್ತಮ ಬೆಳೆಯನ್ನು ಪಡೆದರೂ ಮೊಪಲಾರಿಗೆ ಜಮೀನುದಾರರು ಎಂದಿಗೂ ಯೋಗ್ಯ ಮೊಬಲಗು ನೀಡಲಿಲ್ಲ. ಅದರ ನಂತರ ಜಮೀನುದಾರರು ‘ಮೊಪಲಾಗಳು ಭೂಮಿಯನ್ನು ಖಾಲಿ ಮಾಡಬೇಕು’, ಎಂದು ವಿನಂತಿಸಿಕೊಂಡು ನ್ಯಾಯಾಲಯಕ್ಕೆ ಧಾವಿಸಿದರು. ಇದರ ಸೇಡು ತೀರಿಸಿಕೊಳ್ಳಲೆಂದೇ ಮೋಪಲಾಗಳು ಕೈಯಲ್ಲಿ ಶಸ್ತ್ರಗಳನ್ನು ಹಿಡಿದು ಶಾಂತ ಸ್ವಭಾವವೆಂದು ಗುರುತಿಸಲ್ಪಡುವ ನಂಬೂದರಿ ಮತ್ತು ನಾಯರ ಪಂಗಡದ ಹಿಂದೂಗಳ ಹತ್ಯೆ ಮಾಡಿದರು. ಆದ್ದರಿಂದ ಇದನ್ನು ‘ರೈತರ ಬಂಡಾಯ’ ಎಂದು ಹೇಳಲಾಗದು, ಎಂದು ನಮೂದಿಸಲಾಗಿದೆ. ಆರ್ಯ ಸಮಾಜದ ಪದಾಧಿಕಾರಿಗಳು ಗೋಪಾಲನ್ ನಾಯರ ಇವರ ಈ ಸಂಬಂಧದಲ್ಲಿನ ನೆನಪುಗಳ ಸಂಕಲನ ಮಾಡಿದ್ದಾರೆ. ಅದರಲ್ಲಿ ಈ ಬಂಡಾಯದಲ್ಲಿ ಮೊಪಲಾಗಳು ಕೊಂದು ಹಾಕಿದ ಅನೇಕ ಆರ್ಯಸಮಾಜದ ಸದಸ್ಯರ ಗೌರವಾರ್ಥ ಈ ಪುಸ್ತಕವನ್ನು ಪ್ರಕಾಶನ ಮಾಡಲಾಗಿದೆ.

ಮಹಾತ್ಮಾಗಾಂಧಿ ಇವರಿಂದ ಮೋಪಲಾ ಹಿಂಸಾಚಾರದ ಸಮರ್ಥನೆ !

ಮಹತ್ಮಾ ಗಾಂಧಿ ಇವರು ಬ್ರಿಟಿಶರ ವಿರುದ್ಧ ನೀಡಿದ ಸ್ವಾತಂತ್ರ್ಯ ಹೋರಾಟದ ದರ್ಜೆಯನ್ನು ಮೋಪಲಾ ಕಾಂಡಕ್ಕೆ ನೀಡಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಮುಸಲ್ಮಾನರ ಸಹಕಾರ್ಯವು ಸುನಿಶ್ಚಿತ ಮಾಡುವ ಉದ್ದೇಶದಿಂದ ಮುಸಲ್ಮಾನ ನೇತಾರರ ಒಂದು ವರ್ಗವು ಪ್ರಾರಂಭಿಸಿದ ‘ಖಿಲಾಫತ’ ಆಂದೋಲನಕ್ಕೆ ಬೆಂಬಲ ನೀಡುವ ಬೇಡಿಕೆಯನ್ನು ಮಹಾತ್ಮ ಗಾಂಧಿ ಇವರು ಮಾಡಿದರು. ಸ್ವಾತಂತ್ರ್ಯ ಚಳುವಳಿಯಲ್ಲಿನ ಆನಿ ಬೆಸೆಂಟ್, ಸಿ. ಶಂಕರ ನಾಯರ (ವೈಸರಾಯ್‌ನ ಆಗಿನ ಕಾರ್ಯಕಾರಿ ಸಮಿತಿಯಲ್ಲಿನ ಸದಸ್ಯ) ಈ ನೇತಾರರು ಖಿಲಾಫತ ಆಂದೋಲನಕ್ಕೆ ಬೆಂಬಲ ನೀಡುವ ಬಗ್ಗೆ ಗಾಂಧಿಯವರನ್ನು ವಿರೋಧಿಸಿದರು; ಆದರೆ ಅವರು ಮುಸಲ್ಮಾನರ ಮೇಲೆಯೇ ವಿಶ್ವಾಸವಿಡುವ ಮಾರ್ಗವನ್ನು ಆಯ್ದುಕೊಂಡರು. ‘ಈ ಬಂಡಾಯದಲ್ಲಿ ಬ್ರಿಟೀಶರ ಬದಲು ಬಡ ಹಿಂದೂಗಳೇ ಮುಸಲ್ಮಾನರ ಕ್ರೋಧಕ್ಕೆ ಬಲಿಯಾದರು ಮತ್ತು ಬೇಗನೇ ಅದು ಮತಾಂತರದ ಚಳುವಳಿಯಾಯಿತು. ಸ್ವಾತಂತ್ರ್ಯಕ್ಕಾಗಿ ಇದು ಎಂದಿಗೂ ಕೃಷಿಗೆ ಸಂಬಂಧಿಸಿದ ಸಂಘರ್ಷ ಅಥವಾ ಆಂದೋಲನವಾಗಿರಲಿಲ್ಲ’, ಎಂದು ಪ್ರಾ. ಇಸಾಕ್ ಇವರು ಹೇಳುವುದನ್ನೂ ಗಾಂಧಿಯವರು ಕೇಳಲಿಲ್ಲ.

(ಸೌಜನ್ಯ : neeraj atri)

ಸತ್ಯ ಇತಿಹಾಸವನ್ನು ಹತ್ತಿಕ್ಕಲಾಯಿತು !

ತಥಾಕಥಿತ ಇತಿಹಾಸಕಾರರು ಕಾರ್ಮಿಕರ ಬಂಡಾಯಕ್ಕೆ ಹಿಂದೂಗಳ ವಂಶವಿಚ್ಛೇದದ ಬದಲು ಸ್ವಾತಂತ್ರ್ಯ ಹೋರಾಟದ ಭಾಗವೆಂದು ವರ್ಣಿಸಲು ಹರಸಾಹಸಪಟ್ಟರು. ಆ ಕಾಲದ ಅಧಿಕಾರಿಗಳು ಬರೆದಿಟ್ಟ ಗುಪ್ತ ವರದಿಗಳನ್ನು ಪಕ್ಕಕ್ಕೆ ಸರಿಸಲಾಯಿತು. ಅವುಗಳ ಪೈಕಿ ಕೇವಲ ಗೋಪಾಲನ್ ನಾಯರ ಇವರ ವರದಿಯನ್ನು ಐತಿಹಾಸಿಕ ಸಾಕ್ಷಿಯೆಂದು ಬೆಳಕಿಗೆ ಬಂದಿದೆ. ಅದರ ನಂತರ ‘ಮಾತೃಭೂಮಿ’ಯ ಸಂಸ್ಥಾಪಕ ಸಂಪಾದಕರಾದ ಕೆ. ಕೇಶವ ಮೆನನ್, ಸರ್ ಸಿ. ಶಂಕರನ ನಾಯರ್ (‘ಗಾಂಧಿ ಮತ್ತು ಅರಾಜಕ’ ಪುಸ್ತಕದ ಲೇಖಕರು) ಮತ್ತು ಕೆ. ಮಾಧವನ್ ನಾಯರ್ ಇವರೇ ಕೇವಲ ಸತ್ಯಕಥನ ಮಾಡಿದರು.