‘ರೇಲ್ ಯಾತ್ರಿ’ ಜಾಲತಾಣದಿಂದ ೭ ಲಕ್ಷ ಪ್ರಯಾಣಿಕರ ಗೌಪ್ಯ ಮಾಹಿತಿ ಬಹಿರಂಗ

ನವ ದೆಹಲಿ – ‘ರೇಲ್ ಯಾತ್ರಿ’ ಈ ಜಾಲತಾಣದಿಂದ ೭ ಲಕ್ಷ ಪ್ರಯಾಣಿಕರ ಗೌಪ್ಯ ಮಾಹಿತಿ(ಡಾಟಾ) ಬಹಿರಂಗಗೊಂಡಿದೆ. ಇದರಲ್ಲಿ ಡೆಬಿಟ್ ಕಾರ್ಡ್, ಯು.ಪಿ.ಐ. ಡಾಟಾ ಹಾಗೂ ವೈಯಕ್ತಿಕ ಮಾಹಿತಿಗಳು ಸೇರಿವೆ. ವೈಯಕ್ತಿಕ ಮಾಹಿತಿಯಲ್ಲಿ ಹೆಸರು, ಸಂಚಾರವಾಣಿ ಸಂಖ್ಯೆ, ವಿ-ಅಂಚೆ ವಿಳಾಸ ಹಾಗೂ ಡೆಬಿಟ್ ಕಾರ್ಡ್ ಸಂಖ್ಯೆ ಸೇರಿವೆ. ‘ರೇಲ್ ಯಾತ್ರಿ’ ಜಾಲತಾಣವು ಮಾತ್ರ ಮಾಹಿತಿ ಬಹಿರಂಗವಾಗಿರುವುದನ್ನು ಅಲ್ಲಗಳೆದಿದೆ; ಆದರೆ ‘ಇದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ’, ಎಂದೂ ಹೇಳಿದೆ.