ದೆಹಲಿ ಗಲಭೆಯ ಆರೋಪಿ ತಾಹಿರ್ ಹುಸೇನ್‌ನ ಕಾರ್ಪೊರೇಟರ್ ಹುದ್ದೆ ರದ್ದು

ಮಹಾನಗರ ಪಾಲಿಕೆಯ ಸಭೆಗಳಿಗೆ ಸತತ ಹಾಜರಾಗದಿದ್ದರಿಂದ ಕ್ರಮ

ನವ ದೆಹಲಿ – ಪೂರ್ವ ದೆಹಲಿಯ ಆಮ್ ಆದ್ಮಿ ಪಕ್ಷದ ವಾರ್ಡ್ ಸಂ. ೫೯-ಈ ಯ ಕಾರ್ಪೊರೇಟರ್ ಹಾಗೂ ಅಲ್ಲಿಯ ಗಲಭೆಯ ಆರೋಪಿ ತಾಹಿರ್ ಹುಸೇನ್ ಇವರನ್ನು ಕಾರ್ಪೊರೇಟರ್ ಹುದ್ದೆಯಿಂದ ತೆಗೆದುಹಾಕಲಾಗಿದೆ. ಪೂರ್ವ ದೆಹಲಿಯ ಮಹಾನಗರ ಪಾಲಿಕೆಯು ಆಗಸ್ಟ್ ೨೬ ರಂದು ನಿರ್ಧಾರ ತೆಗೆದುಕೊಂಡರು.

ದೆಹಲಿಯಲ್ಲಿ ಫೆಬ್ರವರಿ ೪ ರಂದು ಪ್ರಚಂಡ ಗಲಭೆಯಲ್ಲಿ ೫೩ ಜನ ಸಾವನ್ನಪ್ಪಿದ್ದರೇ, ೨೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಗಲಭೆಯಲ್ಲಿ ತಾಹಿರ ಹುಸೇನ್ ಇವರ ಮನೆಯ ಮಾಳಿಗೆಯಿಂದ ಪೆಟ್ರೋಲ್ ಬಾಂಬ್ ಹಾಗೂ ಕಲ್ಲುಗಳನ್ನು ಎಸೆಯಲಾಗಿತ್ತು. ಪೊಲೀಸರು ಆತನ ಮನೆಯ ಮಾಳಿಗೆಯಿಂದ ಗಲಭೆಗೆ ಉಪಯೋಗಿಸಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಚಾಂದಬಾಗ ಹಿಂಸಾಚಾರ, ಗುಪ್ತಚರ ವಿಭಾಗದ ಅಧಿಕಾರಿ ಅಂಕಿತ ಶರ್ಮಾರವರ ಹತ್ಯೆ ಇತ್ಯಾದಿ ಘಟನೆಗಳಲ್ಲಿ ತಾಹಿರನ ಹೆಸರು ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರ ಅಪರಾಧಿ ಶಾಖೆಯು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ. ಈ ಗಲಭೆಯಲ್ಲಿ ಆತನ ಹೆಸರು ಬಂದನಂತರ ಆಮ್ ಆದ್ಮಿ ಪಕ್ಷವು ತಮ್ಮ ಪಕ್ಷದಿಂದ ಉಚ್ಚಾಟನೆ ಮಾಡಿತ್ತು.