ಝಾರಖಂಡ ಪೊಲೀಸರ ಟ್ವಿಟ್ಟರ್ ಖಾತೆಯಲ್ಲಿ ಪೊಲೀಸರ ವಿರುದ್ಧವೇ ಹೆಚ್ಚಿನ ದೂರುಗಳು !
ಝಾರ್ಖಂಡ್ ರಾಜ್ಯ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಏಪ್ರಿಲ್‌ನಿಂದ ಡಿಸೆಂಬರ್ ೨೦೨೦ ರ ವರೆಗೆ ೭೯೦೭ ದೂರುಗಳು ದಾಖಲಾಗಿವೆ. ಈ ಪೈಕಿ ೧೨೦೧ ಝಾರ್ಖಂಡ್ ಪೊಲೀಸರ ವಿರುದ್ಧವೇ ದೂರುಗಳಾಗಿವೆ. ಈ ಪೈಕಿ ೧೧೪೪ ದೂರುಗಳನ್ನು ಪೊಲೀಸರು ಬಗೆಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟು ದೂರುಗಳಲ್ಲಿ ೭೩೮೫ ದೂರುಗಳನ್ನು ಬಗೆಹರಿಸಲಾಗಿದೆ. ಉಳಿದ ೫೨೨ ದೂರುಗಳ ತನಿಖೆಯನ್ನು ಮಾಡಲಾಗುತ್ತಿದೆ.