ಜನರಿಗೆ ಅಪರಾಧಿಗಳಿಗಿಂತ ಪೊಲೀಸರ ಬಗ್ಗೆಯೇ ಹೆಚ್ಚು ಭಯವಾಗುತ್ತದೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ ! ಕೇವಲ ಜಾರ್ಖಂಡ್ ಒಂದರಲ್ಲೇ ಈ ಪರಿಸ್ಥಿತಿ ಇದ್ದರೆ, ದೇಶದ ಇತರ ರಾಜ್ಯಗಳಲ್ಲಿ ಇಂತಹದೇ ಸ್ಥಿತಿ ಇರಬಹುದು ಎಂಬುವುದರಲ್ಲಿ ಸಂದೇಹವಿಲ್ಲ. ಪೊಲೀಸರ ವೃತ್ತಿಯನ್ನು ಬದಲಾಯಿಸಲು ಅವರಿಗೆ ಸಾಧನೆಯನ್ನು ಕಲಿಸುವುದು ಮುಖ್ಯ !
ರಾಂಚಿ (ಝಾರ್ಖಂಡ್) – ಝಾರ್ಖಂಡ್ ರಾಜ್ಯ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಏಪ್ರಿಲ್‌ನಿಂದ ಡಿಸೆಂಬರ್ ೨೦೨೦ ರ ವರೆಗೆ ೭೯೦೭ ದೂರುಗಳು ದಾಖಲಾಗಿವೆ. ಈ ಪೈಕಿ ೧೨೦೧ ಝಾರ್ಖಂಡ್ ಪೊಲೀಸರ ವಿರುದ್ಧವೇ ದೂರುಗಳಾಗಿವೆ. ಈ ಪೈಕಿ ೧೧೪೪ ದೂರುಗಳನ್ನು ಪೊಲೀಸರು ಬಗೆಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟು ದೂರುಗಳಲ್ಲಿ ೭೩೮೫ ದೂರುಗಳನ್ನು ಬಗೆಹರಿಸಲಾಗಿದೆ. ಉಳಿದ ೫೨೨ ದೂರುಗಳ ತನಿಖೆಯನ್ನು ಮಾಡಲಾಗುತ್ತಿದೆ.
ಈ ದೂರುಗಳಲ್ಲಿ ಕರೋನಾ ಅವಧಿಯಲ್ಲಿ ಸಾಮಾಜಿಕ ಅಂತರಗಳನ್ನು ಪಾಲಿಸದಿರುವ ಬಗ್ಗೆ ಹೆಚ್ಚಿನ ಸಂಖ್ಯೆಯ ದೂರುಗಳು ಇದ್ದವು. ಮಹಿಳೆಯರ ವಿರುದ್ಧ ೪೧೬ ದೂರುಗಳು ಬಂದಿದ್ದವು. ಇತರ ದೂರುಗಳಲ್ಲಿ ಹಲ್ಲೆ, ಹಸುಗಳ ಕಳ್ಳಸಾಗಣೆ, ವಂಚನೆ, ಧಾರ್ಮಿಕ ಉದ್ವಿಗ್ನತೆಗೆ ಕಾರಣವಾಗುವ ಪೋಸ್ಟ್‌ಗಳು, ಸರಕಾರಿ ಭೂಮಿಯ ಮೇಲಿನ ಅತಿಕ್ರಮಣ, ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಇತ್ಯಾದಿಗಳಿದ್ದವು.