ಹಿಂದೂಗಳು ಆಪತ್ಕಾಲದ ಸಮಯದಲ್ಲಿ ಇಂತಹ ಶ್ರದ್ಧೆಯನ್ನು ಇಡಲು ಪ್ರಯತ್ನಿಸಿದರೆ, ಈಶ್ವರ ಖಂಡಿತವಾಗಿಯೂ ಅವರನ್ನು ರಕ್ಷಿಸುತ್ತಾನೆ; ಆದರೆ ಅದಕ್ಕಾಗಿ ಇಂದಿನಿಂದಲೇ ಪ್ರಯತ್ನಗಳನ್ನು ಮಾಡಬೇಕು!
ಕರ್ಣಾವತಿ (ಗುಜರಾತ) – ಸೂರತ್‌ನ ೩೬ ವರ್ಷದ ಮಹಿಳೆ ದಯಾಬೆನ್ ಭರತಭಾಯಿ ಬುಧೇಲಿಯಾ ಅವರ ಮೆದುಳಿನಲ್ಲಿ ಗೆಡ್ಡೆ ಇದ್ದು ಅದನ್ನು ತೆಗೆದುಹಾಕಲು ಯಶಸ್ವಿ ‘ಓಪನ ಸರ್ಜರಿ’ ನಡೆಸಲಾಯಿತು. ಅವರಿಗೆ ’ಅವೇಕ್ ಅನೆಸ್ಥೆಸಿಯಾ’ ನೀಡಲಾಯಿತು. ಈ ಕಾರಣದಿಂದಾಗಿ, ಅವರು ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಎಚ್ಚರವಿದ್ದರು. ಅವರು ಶಸ್ತ್ರಚಿಕಿತ್ಸೆಯ ಒಂದು ಕಾಲು ಘಂಟೆಯಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ನಿರಂತರವಾಗಿ ಪಠಿಸುತ್ತಿದ್ದರು. ಈ ಬಗ್ಗೆ ಶಸ್ತ್ರಚಿಕಿತ್ಸೆ ಮಾಡಿದ ಡಾ. ಕಲ್ಪೇಶ್ ಷಾ ಅವರು, ‘ನಾನು ಇಲ್ಲಿಯವರೆಗೆ ೯ ಸಾವಿರ ಕ್ಕೂ ಹೆಚ್ಚು ‘ಓಪನ ಸರ್ಜರಿ’ಗಳನ್ನು ಮಾಡಿದ್ದೇನೆ; ಆದರೆ ಆ ಸಮಯದಲ್ಲಿ ರೋಗಿಯೊಬ್ಬರು ಮೊದಲ ಬಾರಿಗೆ ಗೀತೆಯ ಶ್ಲೋಕಗಳನ್ನು ಪಠಿಸುತ್ತಿರುವುದನ್ನು ನಾನು ನೋಡಿದೆ. ಶಸ್ತ್ರಚಿಕಿತ್ಸೆಯ ನಂತರ, ದಯಾಬೆನ್ ಅವರನ್ನು ೩ ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಯಿತು.’ ಶಸ್ತ್ರಚಿಕಿತ್ಸೆ ಮಾಡುವಾಗ ಗೀತೆಯ ಶ್ಲೋಕವನ್ನು ಹೇಳಲು ದಯಾಬೇನ್ ಅವರು ವೈದ್ಯರಲ್ಲಿ ಅನುಮತಿಯನ್ನು ಕೇಳಿದ್ದರು ಹಾಗೂ ಅದಕ್ಕೆ ವೈದ್ಯರು ಒಪ್ಪಿಗೆ ನೀಡಿದ್ದರು.
(ಸೌಜನ್ಯ : TV9 Gujarati)
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಶ್ರೀಕೃಷ್ಣನು ನಮ್ಮ ಪಕ್ಕದಲ್ಲಿ ನಿಂತಿದ್ದಾನೆಂದು ಅನಿಸುತ್ತಿತ್ತು ! – ದಯಾಬೆನ್ ಅವರ ಗಂಡ
ದಯಾಬೆನ್ ಅವರ ಗಂಡ ಭರತ್‌ಭಾಯಿಯವರು, ‘ಈ ಶಸ್ತ್ರ ಚಿಕಿತ್ಸೆಯ ಬಗ್ಗೆ ನಮಗೆ ಭಯವಿತ್ತು, ಆದರೆ ದೇವರ ಮೇಲೆ ಶ್ರದ್ಧೆಯೂ ಇತ್ತು. ದಯಾಬೇನ್ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಶ್ಲೋಕಗಳನ್ನು ಪಠಿಸುತ್ತಿದ್ದಾಗ, ಶ್ರೀಕೃಷ್ಣನು ಸ್ವತಃ ಬಂದು ಅವರ ಪಕ್ಕದಲ್ಲಿ ನಿಂತಿದ್ದಾನೆಂದು ಅನಿಸುತ್ತಿತ್ತು.
ದಯಬೇನ್ ಅವರು, ನನಗೆ ಬಾಲ್ಯದಿಂದಲೂ ನನ್ನ ಪೋಷಕರಿಂದ ಗೀತೆಯ ಜ್ಞಾನ ಸಿಗುತ್ತಿತ್ತು. ನನಗೆ ದೇವರ ಮೇಲೆ ಸಂಪೂರ್ಣ ಶ್ರದ್ಧೆ ಇದೆ. ನನ್ನ ಮಕ್ಕಳಲ್ಲಿಯೂ ನಾನು ಇದೇ ಸಂಸ್ಕಾರಗಳನ್ನು ನಿರ್ಮಿಸಿದ್ದೇನೆ ಎಂದು ಹೇಳಿದರು.