|
ವಿಜಯನಗರಮ್ (ಆಂಧ್ರಪ್ರದೇಶ) – ಸ್ಥಳೀಯ ನೆಲ್ಲಿಮರಲಾದಲ್ಲಿಯ ರಾಮತೀರ್ಥ ಎಂಬಲ್ಲಿರುವ ಬೆಟ್ಟದ ಮೇಲಿರುವ ಬೋಡಿಕೊಂಡಾ ಕೋದಂಡರಾಮ ದೇವಸ್ಥಾನದ ಶ್ರೀರಾಮನ ವಿಗ್ರಹವನ್ನು ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿದ್ದಾರೆ. ಅವರು ದೇವಾಲಯದ ಗರ್ಭಗುಡಿಯ ಬಾಗಿಲಿನ ಬೀಗ ಮುರಿದು ಪ್ರವೇಶಿಸಿ ಶ್ರೀ ರಾಮನ ವಿಗ್ರಹದ ತಲೆಯನ್ನು ತುಂಡಿರಿಸಿದ್ದಾರೆ. ಈ ವಿಗ್ರಹವು ೪೦೦ ವರ್ಷ ಹಳೆಯದ್ದಾಗಿದೆ. ಮುರಿದ ತಲೆಯನ್ನು ಕೊಳದಲ್ಲಿ ವಿಸರ್ಜನೆ ಮಾಡಲಾಯಿತು. ಈ ದೇವಾಲಯದಲ್ಲಿ ಸಿತಾಮಾತೆ ಮತ್ತು ಲಕ್ಷ್ಮಣನ ವಿಗ್ರಹಗಳಿವೆ. ಈ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಯು, ‘ವಿಗ್ರಹದ ಧ್ವಂಸದ ಕೃತ್ಯದ ಹಿಂದೆ ಪಿತೂರಿ ಇದೆ. ಆದರೆ, ನಾವು ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ’ ಎಂದಿದ್ದಾರೆ. ಈ ಹಿಂದೆ ರಾಜ್ಯದ ಚಿತ್ತೂರು ಜಿಲ್ಲೆಯ ಶಿವನ ದೇವಾಲಯದ ಮೇಲೆ ನಡೆದ ದಾಳಿಯಲ್ಲಿ ನಂದಿಯ ವಿಗ್ರಹವನ್ನು ಒಡೆದುಹಾಕಲಾಗಿತ್ತು.
Thread-
Repeat attacks on Hindu temples in Andhra Pradesh are reminiscent of actions of 16th century ruthless St. Xavier in Goa who destroyed temples & carried out forced conversions & Taliban's destruction of giant Buddha statues in Bamiyan.
Join me & #CondemBeheadingLordRamIdol pic.twitter.com/hbeRhv17Qi— Sunil Deodhar (@Sunil_Deodhar) December 30, 2020
೧. ಜನಸೇನಾ ಪಕ್ಷದ ಮುಖಂಡ ಪವನ ಕಲ್ಯಾಣ ಇವರು, ಈ ಕೆಲಸವು ಹುಚ್ಚನಿಂದ ಆಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಧಾರ್ಮಿಕವಾಗಿ ಹುಚ್ಚರಾಗಿರುವವರು ಈ ಕೆಲಸವನ್ನು ಮಾಡಿರಬಹುದು. ಇಂತಹ ಘಟನೆಗಳ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಆದುದರಿಂದಲೇ ಈ ಘಟನೆ ನಡೆದಿದೆ. ರಾಜ್ಯದಲ್ಲಿ ನಿರಂತರವಾಗಿ ದೇವಾಲಯಗಳ ಮೇಲೆ ಇಂತಹ ದಾಳಿಗಳು ನಡೆಯುತ್ತಿರುವಾಗ ಮುಖ್ಯಮಂತ್ರಿ ಏಕೆ ಸ್ಪಂದಿಸುತ್ತಿಲ್ಲ ? ಅವರು ಏಕೆ ಮೌನವಾಗಿದ್ದಾರೆ ? ಎಂದು ಕೇಳಿದ್ದಾರೆ.
(ಸೌಜನ್ಯ : Rashtriya News Network)
(ಈ ಮೇಲೆ ಪ್ರಕಾಶಿಸಿರುವ ಚಿತ್ರ ಯಾರ ಭಾವನೆಗಳಿಗೆ ನೋವನ್ನು ತರುವ ಉದ್ದೇಶವಾಗಿರದೆ ನಿಜ ಸ್ಥಿತಿಯನ್ನು ತಿಳಿಸುವ ಉದ್ದೇಶವಾಗಿದೆ ಅದಕ್ಕಾಗಿ ಪ್ರಕಾಶಿಸಲಾಗಿದೆ)
೨. ತೆಲುಗು ದೇಶಂ ಪಕ್ಷದ ಸ್ಥಳೀಯ ಮುಖಂಡ ಎಸ್. ರವಿಶೇಖರ್ ಮತ್ತು ಅವರ ಕಾರ್ಯಕರ್ತರು ಘಟನೆಯ ನಂತರ ಪ್ರತಿಭಟನೆ ನಡೆಸಿದರು. ಅದೇರೀತಿ ದೇವಾಲಯದ ರಕ್ಷಣೆ ಮತ್ತು ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಪಾವನಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮತ್ತು ದೇವಾಲಯದ ರಕ್ಷಣೆ ಬಗ್ಗೆ ಕೋರಿದ್ದಾರೆ.