ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇವರಿಂದ ನಗರಸಭೆ ಆಯುಕ್ತರಿಗೆ ಪತ್ರ

ಬೆಂಗಳೂರಿನ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿನ ರಸ್ತೆಗಳಿಗೆ ಮುಸ್ಲಿಮರ ಹೆಸರನ್ನು ಇಡಬಾರದು !

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಎನ್.ಎಸ್. ಮಂಜುನಾಥ ಪ್ರಸಾದ

ಬೆಂಗಳೂರು – ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ರಸ್ತೆಗಳಿಗೆ ಮುಸಲ್ಮಾನರ ಹೆಸರಿಡುವುದು ದ್ವಿರಾಷ್ಟ್ರ ಸಿದ್ಧಾಂತಗಳ ವಿಚಾರಸರಣಿಯಾಗಿದೆ. ‘ಮುಸ್ಲಿಂ ಲೀಗ್’ ಹಿಂದೂಗಳು ಮತ್ತು ಮುಸ್ಲಿಮರಿಗಾಗಿ ಹೇಗೆ ಪ್ರತ್ಯೇಕ ಮತದಾರರ ಪಟ್ಟಿಯನ್ನು ಕೇಳಿದ್ದರೋ ಆ ರೀತಿಯ ವಿಚಾರಸರಣಿಯದ್ದಾಗಿದೆ. ಇದು ಅಪಾಯಕಾರಿ ವಿಚಾರವಾಗಿದ್ದು ಇದನ್ನು ನಿಷೇಧಿಸಬೇಕು, ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಎನ್.ಎಸ್. ಮಂಜುನಾಥ ಪ್ರಸಾದ ಇವರಿಗೆ ಪತ್ರ ಬರೆದಿದ್ದಾರೆ.

ಈ ಪತ್ರದಲ್ಲಿ ಸೂರ್ಯರವರು, ಮುಸ್ಲಿಂ ಮಹಾತ್ಮರ ಮತ್ತು ದೇಶಭಕ್ತರ ಸಂಖ್ಯೆ ಕಡಿಮೆ ಇಲ್ಲ ಎಂದು ಹೇಳಿದ್ದಾರೆ. ಅವರ ಹೆಸರುಗಳನ್ನು ರಸ್ತೆಗಳಿಗೂ ನೀಡಬೇಕು; ಆದಾಗ್ಯೂ, ಇದರ ಹಿಂದೆ ಎರಡು ರಾಷ್ಟ್ರಗಳ ಸಿದ್ಧಾಂತಗಳ ವಿಚಾರಸರಣಿ ಬೇಡ ಎಂದು ಹೇಳಿ ಪುರಸಭೆಯು ಈ ರೀತಿ ಹೆಸರಿಸುವ ನೀತಿಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.