ಬಿಜೆಪಿಯಿಂದ ಎಸ್.ಡಿ.ಪಿ.ಐ ಮೇಲೆ ಆರೋಪ !
ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇದ್ದಾಗ, ಅಂತಹ ಘೋಷಣೆ ಕೂಗಲು ಯಾರಿಗೂ ಧೈರ್ಯ ಇರಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !
ಬೆಂಗಳೂರು – ರಾಜ್ಯದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮತ ಎಣಿಕೆ ಮಾಡುವಾಗ ಪಾಕಿಸ್ತಾನ ಪರ ಘೋಷಣೆ ನೀಡುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ರಾಜ್ಯದ ಉಜಿರೆಯಲ್ಲಿ ಮತ ಎಣಿಸುವ ಸಮಯದಲ್ಲಿ ಪಾಕಿಸ್ತಾನ ಪರ ಘೋಷಣೆ ನೀಡುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ಸೌಜನ್ಯ : TIMES NOW)
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಪಕ್ಷವಾದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಮೆರವಣಿಗೆಯ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಜೊತೆಗೆ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಉಜಿರೆ: ಪಾಕಿಸ್ತಾನ ಜಿಂದಾಬಾದ್ ಘೋಷಣೆ #grampanchayatelections #karnataka #ElectionResults2020
ಸುದ್ದಿ ವಿವರ: https://t.co/Qd0wzkUHuX pic.twitter.com/8PwO7uGdr2— ಪ್ರಜಾವಾಣಿ | Prajavani (@prajavani) December 30, 2020
ಎಸ್.ಡಿ.ಪಿ.ಐ.ನ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹೈದರ್ ಅಲಿ ಈ ಆರೋಪಗಳನ್ನು ನಿರಾಕರಿಸಿದ್ದಾರೆ.