ಬೆಳ್ತಂಗಡಿ – ಬೆಳ್ತಂಗಡಿಯ ಉಜಿರೆಯಲ್ಲಿ ಇಂದು ಗ್ರಾಮಪಂಚಾಯತ್ ಚುನಾವಣೆಯ ಮತ ಎಣಿಕೆ ಸಮಯದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪಾಕಿಸ್ತಾನಪರ ಘೋಷಣೆ ಕೂಗಿರುವ ಘಟನೆ ನಡೆದಿರುವುದು ದೇಶದ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಘಟನೆಯಾಗಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ಕೋಮುಸೂಕ್ಷ್ಮ ಪ್ರದೇಶವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಭಯೋತ್ಪಾದನಾ ಚಟುವಟಿಕೆಗೆ ಪ್ರೇರಣೆ ನೀಡುವ ಗೋಡೆ ಬರಹಗಳನ್ನು ಬರೆದಿರುವ ಘಟನೆಗಳು ಜರುಗಿತ್ತು. ಇದಲ್ಲದೆ ಇದೇ ಜಿಲ್ಲೆಯಲ್ಲಿ ಅನೇಕ ಭಯೋತ್ಪಾದನಾ ಚಟುವಟಿಕೆಗೆ ಕುಮ್ಮಕ್ಕು ನೀಡುವವರನ್ನು ಬಂಧಿಸಿದ ಘಟನೆಗಳು ಸಹ ನಡೆದಿದೆ. ಇದರಿಂದ ಜಿಲ್ಲೆ ಅನೇಕ ಪ್ರಕಾರದ ಕೋಮುಗಲಭೆಗಳನ್ನು ಕಂಡಿದೆ. ಹೀಗಿರುವಾಗ ಪುನಃ ಬೆಳ್ತಂಗಡಿಯಲ್ಲಿ ಈ ರೀತಿ ಘೋಷಣೆ ಕೂಗುವುದು, ಭಾರತದಲ್ಲಿದ್ದು ಶತ್ರುರಾಷ್ಟ್ರದ ಪರ ಕೆಲಸ ಮಾಡುವವರು ಹೇಗೆ ಕಾರ್ಯ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಇಂತಹ ದೇಶದ್ರೋಹಿಗಳ ಮೇಲೆ ಅತ್ಯಂತ ಕಠೋರ ಕಾರ್ಯಚರಣೆ ಆಗಬೇಕಾಗಿದೆ. ಅಲ್ಲದೇ ಇಂತಹ ಘಟನೆಗಳು ಮೇಲಿಂದ ಮೇಲೆ ಆಗುತ್ತಿರುವುದನ್ನು ಸರಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕೂಡಲೇ ಇದರ ಬಗ್ಗೆ ತನಿಖೆ ನಡೆಸಬೇಕು ಹಾಗೂ ಇಂತಹ ಘಟನೆಗಳ ಮೂಲಕ್ಕೆ ಹೋಗಿ ಇದರ ಹಿಂದೆ ಯಾವ ಸಂಘಟನೆ ಇದೆ, ಯಾರೆಲ್ಲ ವ್ಯಕ್ತಿಗಳಿದ್ದಾರೆ ಎಂಬುದರ ಆಳವಾದ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರಿಗೆ ಕಠಿಣ ಕ್ರಮೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತಿದೆ.