ನವ ದೆಹಲಿ : ದೇಶದಲ್ಲಿ ನಡೆಯುತ್ತಿರುವ ಸಾಮೂಹಿಕ ಮತಾಂತರವನ್ನು ನಿಲ್ಲಿಸಬೇಕು. ಮದುವೆಗಾಗಿ ಬಲವಂತವಾಗಿ ಮತಾಂತರಗೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸರಕಾರಗಳು ಜಾರಿಗೆ ತಂದಿರುವ ಲವ್ ಜಿಹಾದ್ ವಿರೋಧಿ ಕಾನೂನುಗಳನ್ನು ಬೆಂಬಲಿಸಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದರು.
ರಾಜನಾಥ ಸಿಂಗ್ ತಮ್ಮ ಮಾತನ್ನು ಮುಂದುವರೆಸುತ್ತ, ನಮ್ಮ ಪ್ರಕಾರ, ಮತಾಂತರ ಏಕೆ ಆಗಬೇಕು ? ಅನೇಕ ಸ್ಥಳಗಳಲ್ಲಿ ಸಾಮೂಹಿಕ ಮತಾಂತರಗಳು ನಡೆಯುತ್ತಿರುವುದನ್ನು ನಾನು ನೋಡುತ್ತೇನೆ. ಇದು ನಿಲ್ಲಬೇಕು. ಮದುವೆಗಾಗಿ ಮತಾಂತರವನ್ನು ಒತ್ತಾಯಿಸುವುದು ಒಪ್ಪುವಂತಹದ್ದಲ್ಲ ಎಂದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ನೀವು ಬಲವಂತವಾಗಿ, ಆಮಿಷವನ್ನು ತೋರಿಸುವುದರ ಮೂಲಕವೂ ಮತಾಂತರಗೊಳ್ಳುವ ಅನೇಕ ಸಂದರ್ಭಗಳನ್ನು ನೋಡಿರಬಹುದು. ಸ್ವಾಭಾವಿಕವಾಗಿ ಮದುವೆಯಾಗುವುದು ಮತ್ತು ಬಲವಂತವಾಗಿ, ಆಮಿಷಗಳನ್ನು ತೋರಿಸುವುದು, ಮತಾಂತರ ಮಾಡಿಸಿ ಮದುವೆ ಆಗುವುದು, ಇವುಗಳ ನಡುವೆ ದೊಡ್ಡ ಅಂತರವಿದೆ. ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರಗಳು ಕಾನೂನನ್ನು ರೂಪಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಿಜವಾದ ಹಿಂದೂ ಎಂದಿಗೂ ಜಾತಿ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದು ನಾನು ನಂಬುತ್ತೇನೆ ಎಂದು ಹೇಳಿದರು.