ದಮೋಹ (ಮಧ್ಯಪ್ರದೇಶ) ಗೋವುಗಳ ಕಳ್ಳಸಾಗಣೆಯನ್ನು ತಡೆಯಲು ಪ್ರಯತ್ನಿಸಿದ ಹಿಂದೂ ಯುವಕನ ಹತ್ಯೆಗೈದ ಮತಾಂಧರು !

  • ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ಇರುವಾಗ, ಮೇಲಾಗಿ ಗೋಹತ್ಯೆ ನಿಷೇಧವಿದ್ದಾಗ ಇಂತಹ ಘಟನೆಗಳು ನಡೆಯುತ್ತವೆ ಎಂದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

  • ಮತಾಂಧರ ದೌರ್ಜನ್ಯವನ್ನು ತಡೆಯಲು, ಹಿಂದೂಗಳು ದೈಹಿಕವಾಗಿ ಸದೃಢರಾಗುವುದರ ಜೊತೆಗೆ ಸಾಧನೆ ಮಾಡುವ ಮೂಲಕ ತಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಆವಶ್ಯಕ !
ಆಂದೋಲನ ಮಾಡುತ್ತಿರುವ ಹಿಂದುತ್ವನಿಷ್ಠ ಸಂಘಟನೆ

ದಮೋಹ (ಮಧ್ಯಪ್ರದೇಶ) – ಕೆಲವು ಜನರು ಇಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿರುವಾಗ, ಇಬ್ಬರು ಯುವಕರು ತಡೆಯಲು ಪ್ರಯತ್ನಿಸಿದರು. ಆ ಸಮಯದಲ್ಲಿ ಕಟುಕರು ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದರು. ಇದರಲ್ಲಿ ಅಜಯ ಮುಡಾ ಎಂಬ ಯುವ ಶಿಕ್ಷಕನು ಮೃತಪಟ್ಟನು. ಈ ಘಟನೆ ಡಿಸೆಂಬರ್ ೨೮ ರ ರಾತ್ರಿ ನಡೆದಿದೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದವು. ‘ಒಂದು ವೇಳೆ ಮತಾಂಧರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ, ಆಂದೋಲನ ನಡೆಸಲಾಗುವುದು’, ಎಂದು ಅವರು ಎಚ್ಚರಿಸಿದ್ದಾರೆ. ರಿಯಾಜ್, ಶಮೀಮ್, ಕಯ್ಯೂಮ್ ಮತ್ತು ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೃತಪಟ್ಟವರ ಸಂಬಂಧಿಕರು ಯುವಕನ ಮೃತದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ಘಂಟಾಘರ್‌ಗೆ ಕೊಂಡೊಯ್ದ ನಂತರ ಹಿಂದುತ್ವನಿಷ್ಠರು ನ್ಯಾಯ ಒದಗಿಸಲು ಆಂದೋಲನವನ್ನು ಪ್ರಾರಂಭಿಸಿದರು. ಯುವಕನ ಶವವನ್ನು ಆಂಬುಲೆನ್ಸ್‌ನಿಂದ ಇಳಿಸಲು ಪೊಲೀಸರು ನಿರಾಕರಿಸಿದಾಗ ಅವರಲ್ಲಿ ವಾಗ್ವಾದ ನಡೆಯಿತು. ಅದರ ನಂತರ ಹಿಂದುತ್ವನಿಷ್ಠರು ಶವವನ್ನು ಅಂಬೇಡ್ಕರ್ ಚೌಕ್‌ಗೆ ತೆಗೆದುಕೊಂಡು ಅಲ್ಲಿ ಆಂದೋಲನ ಮಾಡಿದರು. (ನ್ಯಾಯ ಪಡೆಯಲು ಹಿಂದೂಗಳಿಗೆ ಯಾವಾಗಲೂ ಏಕೆ ಆಂದೋಲನ ನಡೆಸಬೇಕಾಗುತ್ತದೆ ? – ಸಂಪಾದಕ) ಎಲ್ಲಿಯವರೆಗೆ ಮತಾಂಧರ ಬಂಧನ ಆಗುವುದಿಲ್ಲವೋ, ಅಲ್ಲಿಯ ವರೆಗೆ ಶವದ ಅಂತ್ಯಕ್ರಿಯೆ ಮಾಡಲಾಗುವುದಿಲ್ಲ ಎಂದು ಹಿಂದುತ್ವನಿಷ್ಠರು ಹೇಳುತ್ತಿದ್ದರು, ಪೊಲೀಸರು ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದ ನಂತರ ಅಂತ್ಯಕ್ರಿಯೆ ನಡೆಯಿತು. (ಹಿಂದೂಗಳು ಪೊಲೀಸರನ್ನು ನಂಬದೆ ನ್ಯಾಯ ನಡೆಯುವವರೆಗೂ ಪೊಲೀಸರ ಬೆಂಬೆತ್ತುವಿಕೆ ಮಾಡುವುದು ಅಪೇಕ್ಷಿತವಿದೆ ! – ಸಂಪಾದಕ)