ದಾಳಿ ಮಾಡಿದವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ !
ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರವಿದ್ದಾಗ ಮತಾಂಧರು ಈ ರೀತಿ ದಾಳಿ ಮಾಡಲು ಧೈರ್ಯ ಮಾಡಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !
ಮಥುರಾ (ಉತ್ತರ ಪ್ರದೇಶ) – ಸ್ಥಳೀಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಯಲ್ಲಿ ಕಳ್ಳತನದ ಪ್ರಕರಣದ ನಂತರ ೪೦ ರಿಂದ ೫೦ ಮತಾಂಧರ ಗುಂಪೊಂದು ಕಚೇರಿಯ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದೆ. ಇದರಲ್ಲಿ ಇಬ್ಬರು ಸ್ವಯಂಸೇವಕರು ಗಾಯಗೊಂಡಿದ್ದಾರೆ. ದಾಳಿಕೋರರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿತ್ತು. ಈ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಕಚೇರಿ ನಿರ್ಮಾಣ ಹಂತದಲ್ಲಿದ್ದು ಇದಕ್ಕೆ ಬೇಕಾದ ವಸ್ತುಗಳನ್ನು ರಸ್ತೆಯ ಬಳಿ ಇಡಲಾಗಿತ್ತು. ಈ ವಸ್ತುಗಳನ್ನು ಕದಿಯುವಾಗ ಆಜಾಂಪುರದ ಚಾಂದ್ ಬಾಬು ಸಿಕ್ಕಿಬಿದ್ದ. ಕೆಲವು ಗಂಟೆಗಳ ನಂತರ ಆತನನ್ನು ಬಿಡುಗಡೆ ಮಾಡಲಾಯಿತು. ನಂತರ ಸಂಜೆ ೪೦ ರಿಂದ ೫೦ ಜನರ ಗುಂಪೊಂದು ಸಂಘದ ಕಚೇರಿಯ ಮೇಲೆ ದಾಳಿ ನಡೆಸಿ ಅದನ್ನು ಧ್ವಂಸಮಾಡಿತು. (ಮತಾಂಧರ ಉದ್ಧಟತನ ನೋಡಿ ! – ಸಂಪಾದಕ) ಕಚೇರಿಯ ಮೇಲಿನ ದಾಳಿಯ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಸಂಘ ಮತ್ತು ಬಿಜೆಪಿಯ ಪದಾಧಿಕಾರಿಗಳು ಸ್ಥಳಕ್ಕೆ ಧಾವಿಸಿದರು ಮತ್ತು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.