ದೇಶದಲ್ಲಿ ವಾಸಿಸುವ ಒಂದು ಸಮುದಾಯಕ್ಕೆ ತಾವು ದೇಶಭಕ್ತರೆಂದು ಸಾಬೀತುಪಡಿಸಲು ಆಯುಷ್ಯ ಪೂರ್ತಿ ಕಳೆಯಬೇಕಾಗಿದೆ ! – ಅಸದುದ್ದೀನ್ ಒವೈಸಿ

‘ವಂದೇ ಮಾತರಮ್’ ಎಂದು ಹೇಳದವರು, ಜಿಹಾದಿ ಭಯೋತ್ಪಾದಕರನ್ನು ಬಹಿರಂಗವಾಗಿ ವಿರೋಧಿಸದವರು; ಬಾಬರ್ ಮತ್ತು ಔರಂಗಜೇಬರನ್ನು ಬೆಂಬಲಿಸುವವರಿಗೆ ‘ಈ ದೇಶ ನಮ್ಮದು ಎಂದೆನಿಸುವುದು’, ’ಅವರು ದೇಶಭಕ್ತರು’ ಎಂದು ಹೇಗೆ ಒಪ್ಪಿಕೊಳ್ಳಬಹುದು ? ಕಾಶ್ಮೀರದಿಂದ ೪.೫ ಲಕ್ಷ ಹಿಂದೂಗಳನ್ನು ಹೊರಹಾಕಿದವರನ್ನು ದೇಶಭಕ್ತರೆಂದು ಹೇಗೆ ಒಪ್ಪಿಕೊಳ್ಳಬೇಕು ?

ಭಾಗ್ಯನಗರ (ತೆಲಂಗಾಣಾ) – ಒಂದು ಧರ್ಮದ ಅನುಯಾಯಿಗಳಿಗೆ ತನ್ನಿಂದತಾನೆ ದೇಶಭಕ್ತಿಯ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದ್ದು, ಇನ್ನೋಂದಕ್ಕೆ ‘ಭಾರತದಲ್ಲಿ ವಾಸಿಸಲು ಹಾಗೂ ತಮ್ಮನ್ನು ಭಾರತೀಯರು ಎಂದು ಕರೆಯುವ ಹಕ್ಕಿದೆ’, ಎಂದು ಸಾಬೀತುಪಡಿಸಲು ತಮ್ಮ ಇಡೀ ಜೀವನವನ್ನು ಕಳೆಯಬೇಕಾಗುತ್ತದೆ ಎಂದು ಎಂ.ಐ.ಎಂ.ನ ಅಧ್ಯಕ್ಷ ಹಾಗೂ ಸಂಸದ ಅಸದುದ್ದೀನ್ ಒವೈಸಿಯವರು ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಆಧರಿಸಿ ಟೀಕಿಸಿದ್ದಾರೆ.

ಓವೈಸಿ ತಮ್ಮ ಮಾತನ್ನು ಮುಂದುವರೆಸುತ್ತಾ,

೧. ೧. ‘ಹೆಚ್ಚಿನ ಭಾರತೀಯರು, ಯಾವುದೇ ಧರ್ಮದವರಾಗಿರಲಿ, ದೇಶಭಕ್ತರಾಗಿದ್ದಾರೆ’, ಎಂದು ಭಾವಿಸುವುದು ತಾರ್ಕಿಕವಾಗಿದೆ. ಆದರೆ ಕೇವಲ ಹಿಂದೂಗಳಿಗೆ ದೇಶಭಕ್ತರು ಎಂದು ಪ್ರಮಾಣಪತ್ರ ನೀಡುವುದು ಇದು ಕೇವಲ ಸಂಘದ ಅಜ್ಞಾನವೇ.

೨. ಗಾಂಧಿಯನ್ನು ಹತ್ಯೆ ಮಾಡಿದ ಗೋಡ್ಸೆ ಬಗ್ಗೆ ಏನು ಹೇಳುವುದು ? ನೆಲ್ಲಿ ಹತ್ಯಾಕಾಂಡ, ೧೯೮೪ ರ ಸಿಖ್ ವಿರೋಧಿ ಗಲಭೆಗಳು ಮತ್ತು ೨೦೦೨ ರ ಗುಜರಾತ್ ಗಲಭೆಗಳಿಗೆ ಕಾರಣಕರ್ತರಾದ ಜನರ ಬಗ್ಗೆ ಏನು ಹೇಳುವುದು ? ಸರಸಂಘಚಾಲಕ ಡಾ. ಮೋಹನ್ ಭಾಗವತ್ ಉತ್ತರಿಸುತ್ತಾರೆಯೇ ? (೧೯೪೭ ರಲ್ಲಿ ಭಾರತದ ವಿಭಜನೆ, ಆ ಸಮಯದಲ್ಲಿ ಹತ್ತು ಲಕ್ಷ ಹಿಂದೂಗಳ ವಂಶನಾಶ, ಹಿಂದೂ ಮಹಿಳೆಯರ ಮೇಲಾದ ಅತ್ಯಾಚಾರ, ಸ್ವಾಮಿ ಶ್ರದ್ಧಾನಂದರ ಹತ್ಯೆ, ಕೇರಳದಲ್ಲಿ ಮೊಪಲಾ ಮುಸ್ಲಿಮರಿಂದ ಹಿಂದೂಗಳ ಹತ್ಯಾಕಾಂಡದ ಬಗ್ಗೆ ಓವೈಸಿ ಉತ್ತರಿಸುತ್ತಾರೆಯೇ ? – ಸಂಪಾದಕರು)