|
ವಿಜಯವಾಡ (ಆಂಧ್ರಪ್ರದೇಶ) – ಸ್ಥಳೀಯ ನೆಹರೂ ಬಸ್ ನಿಲ್ದಾಣದ ಸಮೀಪದಲ್ಲಿರುವ ಸೀತಾರಾಮ ದೇವಸ್ಥಾನದಲ್ಲಿ ಸೀತಾ ಮಾತೆಯ ವಿಗ್ರಹವನ್ನು ಧ್ವಂಸ ಮಾಡಿರುವುದು ಪತ್ತೆಯಾಗಿದೆ. ವಿಜಯನಗರಮ್ ಜಿಲ್ಲೆಯ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ೪೦೦ ವರ್ಷಗಳ ಹಳೆಯ ಭಗವಾನ್ ಶ್ರೀರಾಮನ ವಿಗ್ರಹ ಮತ್ತು ರಾಜಮುಂದ್ರಿ ಜಿಲ್ಲೆಯ ಭಗವಾನ್ ವಿಘ್ನೇಶ್ವರ ದೇವಸ್ಥಾನದಲ್ಲಿ ಭಗವಾನ್ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ವಿಗ್ರಹ ಕಳೆದ ಕೆಲವು ದಿನಗಳಲ್ಲಿ ಧ್ವಂಸವಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸುನಿಲ ದೇವಧರ್ ಇವರು ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರಿಗೆ ಛೀಮಾರಿ ಹಾಕುತ್ತಾ, ಇಂತಹ ಘಟನೆಗಳು ಹಿಂದೂಗಳ ಸಂದರ್ಭದಲ್ಲಿ ಮಾತ್ರ ಏಕೆ ನಡೆಯುತ್ತಿದೆ ? ಎಂದು ಕೇಳಿದರು.
Today in Vijayawada. This is the 126th idol which got https://t.co/u4HONPcFy7 a sitarama temple, the grilled door was locked and they thrown coconuts and damaged Sita devi. ఈరోజు విజయవాడలో సీతమ్మ వారి విగ్రహం @BJP4India @BJP4Andhra @RSSorg @VHPDigital @PMOIndia @DrMohanBhagwat pic.twitter.com/k7JvaMydYt
— Yamini Sharma Sadineni (@YaminiSharma_AP) January 3, 2021
(ಈ ಮೇಲಿನ ಚಿತ್ರವನ್ನು ಯಾರ ಭಾವನೆಗಳಿಗೆ ನೋವನ್ನುಂಟುಮಾಡುವ ಉದ್ದೇಶವಾಗಿರದೆ ಕೇವಲ ನಿಜವಾದ ಸಂಗತಿಯನ್ನು ತೋರಿಸುವ ಉದ್ದೇಶವಾಗಿದೆ)
ಜಗನ್ಮೋಹನ್ ರೆಡ್ಡಿ ಕ್ರೈಸ್ತರಾಗಿರಬಹುದು; ಆದರೆ ಹಿಂದೂಗಳನ್ನು ಮತಾಂತರಿಸಲು ಸಾಧ್ಯವಿಲ್ಲ ! – ಎನ್. ಚಂದ್ರಬಾಬು ನಾಯ್ಡು
ತೆಲುಗು ದೇಶಂ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಇವರು, ಜಗನ್ಮೋಹನ ರೆಡ್ಡಿ ಹಿಂದೂಗಳಿಗೆ ದ್ರೋಹ ಬಗೆಯುವವರು ಎಂದು ಹೇಳಿದರು. ರೆಡ್ಡಿ ಕ್ರೈಸ್ತರಾಗಿರಬಹುದು; ಆದರೆ ಹಿಂದೂಗಳನ್ನು ಮತಾಂತರಗೊಳಿಸಲು ಅವರು ಈ ಸ್ಥಾನದ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆ ಯೋಚಿಸುವುದೂ ತಪ್ಪಾಗುತ್ತದೆ. ಅಧಿಕಾರದಲ್ಲಿರುವ ಜನರು ಮತಾಂತರಗೊಳ್ಳುತ್ತಿದ್ದರೆ ಅದು ದ್ರೋಹವೇ ಆಗಿದೆ. ಅಂತಹ ಧಾರ್ಮಿಕ ಅಸಹಿಷ್ಣುತೆಯನ್ನು ಯಾರೂ ತೋರಿಸಬಾರದು ಎಂದು ಹೇಳಿದರು.