ಆಂಧ್ರಪ್ರದೇಶದ ಮತ್ತೊಂದು ದೇವಾಲಯದಲ್ಲಿ ವಿಗ್ರಹಗಳ ಧ್ವಂಸ !

ಕಳೆದ ೧೯ ತಿಂಗಳಲ್ಲಿ ದೇವಾಲಯಗಳ ಮೇಲೆ ೧೨೦ ದಾಳಿಗಳು : ಸಿಬಿಐ ತನಿಖೆಗೆ ಆಗ್ರಹ

ಆಂಧ್ರಪ್ರದೇಶ ಭಾರತದಲ್ಲಿ ಅಲ್ಲ ಪಾಕಿಸ್ತಾನದಲ್ಲಿದೆ ಎಂದು ಯಾರಿಗಾದರು ಅನಿಸಿದರೆ ಅದರಲ್ಲಿ ತಪ್ಪು ತಿಳಿಯಬಾರದು ! ಈ ಬಗ್ಗೆ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಮಧ್ಯಪ್ರವೇಶಿಸಿ ದೇವಾಲಯಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ರಾಜಮಂದ್ರಿ (ಆಂಧ್ರಪ್ರದೇಶ) – ಕ್ರೈಸ್ತ ಮಿಶನರಿಗಳ ಹಿಡಿತದಲ್ಲಿರುವ ರಾಜಮಂದ್ರಿ ಜಿಲ್ಲೆಯ ವಿಘ್ನೇಶ್ವರ ದೇವಸ್ಥಾನದಲ್ಲಿ ಭಗವಾನ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ವಿಗ್ರಹವನ್ನು ಅಪರಿಚಿತ ವ್ಯಕ್ತಿಗಳು ಧ್ವಂಸ ಮಾಡಿರುವ ಘಟನೆ ಡಿಸೆಂಬರ ೩೧ ರ ರಾತ್ರಿ ಸಮಯದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಈ ವಿಗ್ರಹದ ಎರಡೂ ಕೈಗಳು ಕಡಿಯಲಗಿದೆ. ‘ಇಲ್ಲಿಂದ ಯಾವುದೇ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಲ್ಲ. ಇದರರ್ಥವಿಗ್ರಹವನ್ನು ಧ್ವಂಸ ಮಾಡುವುದೇ ಆರೋಪಿಗಳ ಮುಖ್ಯ ಉದ್ದೇಶವಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ನಂತರ ಆರೋಪಿಗಳನ್ನು ಹುಡುಕಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ. ಎರಡು ದಿನಗಳ ಹಿಂದೆ ರಾಜ್ಯದ ವಿಜಯನಗರಮ್‌ನಲ್ಲಿನ ಶ್ರೀ ರಾಮ ದೇವಸ್ಥಾನದಲ್ಲಿ ಭಗವಾನ್ ರಾಮನ ವಿಗ್ರಹದ ಶಿರವನ್ನು ತುಂಡು ಮಾಡಿದ ಘಟನೆ ನಡೆದಿತ್ತು.

೧. ಈ ಘಟನೆಯ ನಂತರ, ಬಿಜೆಪಿಯು ‘ರಾಜ್ಯದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ನಿಷ್ಕ್ರಿಯರಾಗಿದ್ದಾರೆ ಮತ್ತು ಆರೋಪಿಗಳನ್ನು ಬೆಂಬಲಿಸುತ್ತಿದ್ದಾರೆ’, ಎಂದು ಆರೋಪಿಸಿದೆ.

೨. ಕಳೆದ ಒಂದೂವರೆ ವರ್ಷಗಳಿಂದ ರಾಜ್ಯದ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಜನಸೇನಾ ಮುಖ್ಯಸ್ಥ ಹಾಗೂ ತೆಲುಗು ನಟ ಪವನ ಕಲ್ಯಾಣ್ ಒತ್ತಾಯಿಸಿದ್ದಾರೆ.

(ಸೌಜನ್ಯ : NTV Telugu)

(ಈ ಮೇಲಿನ ಚಿತ್ರವನ್ನು ಯಾರ ಭಾವನೆಗಳಿಗೆ ನೋವನ್ನುಂಟುಮಾಡುವ ಉದ್ದೇಶವಾಗಿರದೆ ಕೇವಲ ನಿಜವಾದ ಸಂಗತಿಯನ್ನು ತೋರಿಸುವ ಉದ್ದೇಶವಾಗಿದೆ)

೩. ಜಗನ್ಮೋಹನ್ ಸರಕಾರದಲ್ಲಿ ದೇವರುಗಳು ಸಹ ಸುರಕ್ಷಿತವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಅಧ್ಯಕ್ಷ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಕಳೆದ ೧೯ ತಿಂಗಳಲ್ಲಿ ರಾಜ್ಯದಲ್ಲಿಯ ದೇವಾಲಯಗಳ ಮೇಲೆ ೧೨೦ ಕ್ಕೂ ಹೆಚ್ಚು ದಾಳಿಗಳು ನಡೆದಿವೆ. ಇತ್ತೀಚೆಗೆ ಪೀಠಪುರಮ್‌ನಲ್ಲಿ ೬ ವಿಗ್ರಹಗಳನ್ನು ಧ್ವಂಸ ಮಾಡಲಾಯಿತು. ಬೆಜವಾಡಾ ಕನಕ ದುರ್ಗಾ ದೇವಸ್ಥಾನದ ರಥದ ಮೇಲಿದ್ದ ೩ ಹುಲಿಗಳ ವಿಗ್ರಹಗಳನ್ನು ಧ್ವಂಸ ಮಾಡಲಾಯಿತು. ಅಮರಾವತಿಯಲ್ಲಿರುವ ದೇವಾಲಯದ ರಥಕ್ಕೆ ಬೆಂಕಿ ಹಚ್ಚಲಾಗಿತ್ತು; ಈ ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಿಲ್ಲ. ಆಗಲೇ ಸರಕಾರ ಕ್ರಮ ಕೈಗೊಂಡಿದ್ದರೆ, ಈ ಮುಂದಿನ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಹೇಳಿದರು.