ಕಾಂಗ್ರೆಸ್‌ನ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರಿಂದ ಶ್ರೀ ಹನುಮಂತನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ
|
ಬೆಂಗಳೂರು – ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಿ ಪಕ್ಷದ ನಾಕಯ ಸಿದ್ಧರಾಮಯ್ಯ ಇವರು ಡಿಸೆಂಬರ ೨ ರಂದು ತಮ್ಮ ಮೂಲ ಮನೆಗೆ ಹೋಗಿದ್ದರು. ಅವರು ಅಲ್ಲಿ ಮಾಂಸಾಹಾರ ಸೇವಿಸುತ್ತಿದ್ದರು. ಗ್ರಾಮಸ್ಥರ ಪೈಕಿ ಒಬ್ಬರು ‘ಇಂದು ಹನುಮಂತನ ಜಯಂತಿ ಇದೆ’, ಎಂಬುದನ್ನು ನೆನಪಿಸಿಕೊಟ್ಟರು. ಅದಕ್ಕೆ ಸಿದ್ಧರಾಮಯ್ಯ ಅವರು ಆ ಯುವಕನಿಗೆ, ‘ನಿನಗೆ ಹನುಮಂತನ ಹುಟ್ಟಿದ ದಿನಾಂಕ ಗೊತ್ತಿದೆಯೇನು ? ಗೊತ್ತಿದ್ದರೆ ಜಯಂತಿಯನ್ನು ಆಚರಿಸಬಹುದು, ಗೊತ್ತಿಲ್ಲದಿದ್ದರೆ ಕೋಳಿ ತಿನ್ನು’, ಎಂದು ಆಕ್ಷೇಪಾರ್ಹ ಉತ್ತರ ನೀಡಿದರು. ಈ ಘಟನೆಯ ವಿಡಿಯೊ ಈಗ ಸಾಮಾಜಿಕ ಪ್ರಸಾರ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಅದಕ್ಕೆ ರಾಜ್ಯದ ಶಿಕ್ಷಣ ಸಚಿವ ಸುರೇಶ ಕುಮಾರ ಇವರು ಟ್ವೀಟ್ ಮಾಡುತ್ತಾ, ಸಿದ್ಧರಾಮಯ್ಯದಂತಹ ನಾಯಕರು ನಮ್ಮ ದೇವತೆಗಳನ್ನು, ಶ್ರದ್ಧಾಸ್ಥಾನಗಳನ್ನು ಅವಮಾನಿಸುವುದನ್ನೇ ‘ಜಾತ್ಯತೀತತೆ’ ಎಂದು ತಿಳಿದಿದ್ದಾರೆ’ ಎಂದು ಹೇಳಿದರು.
ತಾನು ಗೋಮಾಂಸವನ್ನು ಸೇವಿಸುತ್ತೇನೆ ಎಂದು ಒಪ್ಪಿದ ಸಿದ್ಧರಾಮಯ್ಯ !
ಸಿದ್ಧರಾಮಯ್ಯ ಇವರು ಡಿಸೆಂಬರ ೨೮ ರಂದು ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧದ ವಿಧೇಯಕದ ಮೇಲೆ ಚರ್ಚೆ ಮಾಡುತ್ತಾ, ನಾನು ಗೋ ಮಾಂಸವನ್ನು ತಿನ್ನುತ್ತೇನೆ ಎಂದು ನಾನು ಈ ಹಿಂದೆ ವಿಧಾನಸಭೆಯಲ್ಲಿ ಹೇಳಿದ್ದೆ. ಇದನ್ನು ಪ್ರಶ್ನಿಸುವವರು ನೀವು ಯಾರು ? ನೀವು ತಿನ್ನುವುದಿಲ್ಲ, ಇದು ನಿಮ್ಮ ಪ್ರಶ್ನೆಯಾಗಿದೆ. ನಾನು ನಿಮಗೆ ಒತ್ತಾಯಿಸುವುದಿಲ್ಲ. ನನಗೆ ಇಷ್ಟವಾಗುತ್ತದೆ ಮತ್ತು ನಾನು ತಿನ್ನುತ್ತೇನೆ. ಇದು ನನ್ನ ಅಧಿಕಾರವಾಗಿದೆ. (ಯಾರು ಏನು ತಿನ್ನಬೇಕು ಅದು ಅವರವರ ಪ್ರಶ್ನೆಯಾಗಿದ್ದರೂ, ಬಹುಸಂಖ್ಯಾತ ಧಾರ್ಮಿಕ ಹಿಂದೂಗಳ ಮತಗಳಿಂದ ಆರಿಸಿ ಬಂದು ಈ ರೀತಿಯ ಹೇಳಿಕೆಗಳನ್ನು ನೀಡುವುದು, ಇದು ಅವರನ್ನು ಆರಿಸಿದ ಹಿಂದೂಗಳಿಗೆ ನಾಚಿಕೆಯ ವಿಷಯವಾಗಿದೆ ! – ಸಂಪಾದಕ)
‘ಹನುಮಂತನು ಗುಲಾಮಗಿರಿಯ ಸಂಕೇತವಾಗಿದ್ದಾನೆ !’(ಅಂತೆ) – ಮೈಸೂರು ವಿಶ್ವವಿದ್ಯಾಲಯದ ನಿತೃತ್ತ ಪ್ರಾ. ಡಾ. ಬಿ.ಪಿ. ಮಹೇಶ
ಪ್ರಾ. ಮಹೇಶ ಇವರು ತಮ್ಮ ಕಾಲಾವಧಿಯಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಎಷ್ಟು ಹಿಂದೂದ್ವೇಷ ಹಬ್ಬಿಸಿರಬಹುದು, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ ! ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ರಾಜ್ಯದ ಬಿಜೆಪಿ ಸರಕಾರವು ಅವರ ಮೇಲೆ ಕ್ರಮ ಕೈಗೊಳ್ಳಬೇಕು !
ಮೈಸೂರು – ರಾಮ ಪ್ರಭುತ್ವದ ಸಂಕೇತವಾಗಿದ್ದರೆ ಹನುಮಂತನು ಗುಲಾಮಗಿರಿಯನ್ನು ಪ್ರತಿನಿಧಿಸುತ್ತಾನೆ. ಸಂಘ ಪರಿವಾರದವರು ಹನುಮಂತ ಜಯಂತಿಯ ಮೂಲಕ ಇಂತಹ ಸಂಸ್ಕೃತಿಯನ್ನು ಬೃಹತ್ ಪ್ರಮಾಣದಲ್ಲಿ ಹುಟ್ಟು ಹಾಕಲು ಹೊರಟಿದ್ದಾರೆ, ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಬಿ.ಪಿ. ಮಹೇಶ ಚಂದ್ರಗುರು ಇವರು ಆರೋಪಿಸಿದ್ದಾರೆ. ಅವರು ಸಿದ್ಧರಾಮಯ್ಯ ಇವರ ಹೇಳಿಕೆಯ ಬಗ್ಗೆ ವಿಚಾರಿಸಿದ ಪ್ರಶ್ನೆಗೆ ಅವರು ಉತ್ತರಿಸುವಾಗ ಈ ಮಾತನ್ನು ಹೇಳಿದರು.