ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡಿದ ಪ್ರಕರಣದಲ್ಲಿ ಪ್ರಾಧ್ಯಾಪಕ ಭಗವಾನ್ ಇವರಿಗೆ ನ್ಯಾಯಾಲಯದಿಂದ ಸಮನ್ಸ ಜಾರಿ

ನ್ಯಾಯವಾದಿ ಸೌ. ಮೀರಾ ರಾಘವೇಂದ್ರ ಇವರಿಂದ ಕ್ರಿಮಿನಲ್ ಮೊಕದ್ದಮೆ ಧಾಖಲು !

ಹಿಂದೂ ಧರ್ಮದ ರಕ್ಷಣೆಗಾಗಿ ಕೃತಿಶೀಲವಾಗಿರುವವನ್ಯಾಯವಾದಿ ಸೌ. ಮೀರಾ ರಾಘವೇಂದ್ರ ಇವರಿಂದ ಎಲ್ಲೆಡೆಯ ನ್ಯಾಯವಾದಿಗಳು ಆದರ್ಶವನ್ನು ಪಡೆದುಕೊಳ್ಳಬೇಕು !

ಮೈಸೂರು – ಹಿಂದೂ ಧರ್ಮವೇ ಇಲ್ಲ. ವೇದ, ಪುರಾಣ, ಸಂಸ್ಕೃತ, ಎಲ್ಲಿಯೂ ಸಹ ಹಿಂದೂ ಶಬ್ದದ ಉಲ್ಲೇಖವಿಲ್ಲ. ಈಗ ಹೇಳುವ ಧರ್ಮವು ವೈದಿಕ ಬ್ರಾಹ್ಮಣರ ಧರ್ಮವಾಗಿದೆ. ಮನುಸ್ಮೃತಿಯಲ್ಲಿ ಶೂದ್ರರು ಬ್ರಾಹ್ಮಣರ ಗುಲಾಮರಾಗಿದ್ದಾರೆ, ವೈಶ್ಯರು ಅವರ ಮಕ್ಕಳು ಎಂದು ಉಲ್ಲೇಖಿಸಲಾಗಿದೆ ಎಂದು ಇದನ್ನು ಸ್ವೀಕರಿಸಬೇಕೇನು ? ಅದನ್ನು ಸ್ವೀಕರಿಸಿದರೆ ಅದು ನಮ್ಮ ಸ್ವಾಭಿಮಾನಕ್ಕೆ ದಕ್ಕೆ(ಅಪಮಾನ). ಅದಕ್ಕೆ ಅದನ್ನು ಬಹಿಷ್ಕರಿಸಿ ಎಂದು ಪ್ರಾಧ್ಯಾಪಕ ಕೆ. ಎಸ್. ಭಗವಾನ್‌ರು ಇಲ್ಲಿಯ ಒಂದು ಕಾರ್ಯಕ್ರಮದಲ್ಲಿ ಕರೆ ನೀಡಿದ್ದರು.

ಇದರ ವಿರುದ್ಧ ಬೆಂಗಳೂರು ಉಚ್ಚ ನ್ಯಾಯಾಲಯದ ನ್ಯಾಯವಾದಿ ಸೌ. ಮೀರಾ ರಾಘವೇಂದ್ರ ಇವರು ಬೆಂಗಳೂರು ಮಹಾನಗರ ದಂಡಾಧಿಕಾರಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಅವರ ಮೇಲೆ ಭಾರತೀಯ ದಂಡ ಸಂಹಿತೆ ೫೦೫, ೨೯೮ ಪ್ರಕಾರ ಪ್ರಕರಣವನ್ನು ದಾಖಲಿಸಲಾಗಿದೆ. ನ್ಯಾಯಾಲಯದಿಂದ ಪ್ರಾ. ಭಗವಾನ್‌ರಿಗೆ ಸಮನ್ಸ್ ಕಳಿಸಲಾಗಿದೆ.