|
ರಾಯಬರೇಲಿ (ಉತ್ತರ ಪ್ರದೇಶ) – ಸಲೋನ್ ಪ್ರದೇಶದ ರತಾಸೊ ಗ್ರಾಮದ ನಿವಾಸಿ ಮೊಹಮ್ಮದ್ ಅನ್ವರ್ ಅವರು ೨೦೨೦ ರ ಸೆಪ್ಟೆಂಬರ್‌ನಲ್ಲಿ ಸ್ವೇಚ್ಛೆಯಿಂದ ಇಸ್ಲಾಮನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕಾರಿಸಿದ್ದರು. ಅವರು ‘ದೇವ ಪ್ರಕಾಶ ಪಟೇಲ್’ ಎಂದು ಹೆಸರಿಟ್ಟುಕೊಂಡಿದ್ದರು. ಅದರ ನಂತರ ಅವರು ತಮ್ಮ ಜಮೀನಿನಲ್ಲಿ ದೇವಾಲಯವನ್ನು ನಿರ್ಮಿಸಲು ಪ್ರಾರಂಭಿಸಿದರು. ಇದನ್ನು ಅರಿತ ಮತಾಂಧ ಸರ್ಪಂಚ ಮತ್ತು ಅವನ ಸಹಚರರು ದೇವ ಪ್ರಕಾಶ ಪಟೇಲ್ ಮತ್ತು ಅವರ ಮೂವರು ಮಕ್ಕಳು ಮಲಗಿದ್ದಾಗ ಮನೆಯ ಬಾಗಿಲನ್ನು ಹೊರಗಿನಿಂದ ಬೀಗ ಹಾಕಿ, ಮನೆಗೆ ಬೆಂಕಿ ಹಚ್ಚಿ ಜೀವಂತವಾಗಿ ಸುಡಲು ಪ್ರಯತ್ನಿಸಿದರು. ಈ ಸಮಯದಲ್ಲಿ, ದೇವ ಪ್ರಕಾಶ ಪಟೇಲ್ ಹಿಂದಿನ ಬಾಗಿಲನ್ನು ಮುರಿದು ತಮ್ಮ ಮತ್ತು ಮಕ್ಕಳ ಪ್ರಾಣವನ್ನು ಉಳಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಸರ್ಪಂಚ ತಾಹಿರ್, ರೆಹಾನ್ ಅಲಿಯಾಸ್ ಸೋನು, ಅಲಿ ಅಹಮದ್, ಇಮ್ತಿಯಾಜ್ ಮತ್ತು ಇತರರು ಸೇರಿ ಸ್ಥಳೀಯ ಮದರಸಾದ ಕೆಲವು ಜನರ ವಿರುದ್ಧ ಅಪರಾಧವನ್ನು ದಾಖಲಿಸಿ ಅವರಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
Uttar Pradesh: Muslim man's family reverts to Hinduism in Rae Bareli, members of madarsa, village head try to burn them alive https://t.co/lniZes7LDJ
— OpIndia.com (@OpIndia_com) January 4, 2021
ದೇವ ಪ್ರಕಾಶ ಪಟೇಲ್ ತಮ್ಮ ಜಮೀನಿನಲ್ಲಿ ದೇವಾಲಯವನ್ನು ನಿರ್ಮಿಸುತ್ತಿದ್ದು, ಮತಾಂಧರಿಗೆ ಆಕ್ರೋಶವಿತ್ತು. ಆದ್ದರಿಂದಲೇ ಅವರು ದೇವ ಪ್ರಕಾಶ ಪಟೇಲ್ ಅವರನ್ನು ಕೊಲ್ಲಲು ಪ್ರಯತ್ನಿಸಿದರು. ಈ ಘಟನೆಯ ನಂತರ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ದೇವ ಪ್ರಕಾಶ ಪಟೇಲ್ ಅವರನ್ನು ಭೇಟಿಯಾಗಿ ನ್ಯಾಯ ಒದಗಿಸುವ ಭರವಸೆ ನೀಡಿದರು. ಅದೇರೀತಿ ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗದಳದ ಕಾರ್ಯಕರ್ತರೂ ಸಹ ಅವರನ್ನು ಭೇಟಿ ಮಾಡಿದರು.