೩ ವರ್ಷಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ
ನವ ದೆಹಲಿ – ಅಯೋಧ್ಯೆಯ ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯವು ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗಲಿದೆ. ದೇವಾಲಯದ ನಿರ್ಮಾಣ ಕಾರ್ಯವು ೩ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ತಿಳಿಸಿದೆ.
Ram temple construction to begin from Makar Sankrant#ChampatRai#NarendraModi#MakarSankranti2021#AyodhyaRamMandir #UttarPradesh #SupremeCourt pic.twitter.com/oYc2f58aKc
— United News of India (@uniindianews) January 2, 2021
೫ ಎಕರೆ ಭೂಮಿಯಲ್ಲಿ ನಿರ್ಮಾಣವಾಗಲಿರುವ ಈ ದೇವಾಲಯಕ್ಕೆ ಮೂರು ಮಹಡಿಗಳಿದ್ದು, ದೇವಾಲಯವು ೩೬೦ ಅಡಿ ಉದ್ದ, ೨೩೫ ಅಡಿ ಅಗಲ ಮತ್ತು ೧೬೧ ಅಡಿ ಎತ್ತರವನ್ನು ಹೊಂದಿರುತ್ತದೆ. ಸುಮಾರು ೪೦೦ ವರ್ಷಗಳ ಕಾಲ ಉಳಿಯುವ ಸಿಮೆಂಟ್‌ಅನ್ನು ಈ ನಿರ್ಮಾಣ ಕಾರ್ಯಕ್ಕಾಗಿ ಬಳಸಲಾಗುತ್ತದೆ. ದೇವಾಲಯದ ಮುಂಭಾಗದ ಪ್ರದೇಶದಲ್ಲಿ ೨೨ ಮೆಟ್ಟಿಲುಗಳಿದ್ದು, ಹಿರಿಯ ಮತ್ತು ಅಂಗವಿಕಲ ನಾಗರಿಕರಿಗೆ ಲಿಫ್ಟ್ ಮತ್ತು ಇಳಿಜಾರಿನ ಸೌಲಭ್ಯಗಳೂ ಇರಲಿವೆ. ಮುಖ್ಯ ದೇವಾಲಯದ ಸುತ್ತ ೬೫ ಎಕರೆ ಪ್ರದೇಶದಲ್ಲಿ ವಿವಿಧ ಕಟ್ಟಡ ನಿರ್ಮಾಣಗಳನ್ನು ಮಾಡಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.