ಮಂಗಳೂರಿನಲ್ಲಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಹಿಂದೂ ಧರ್ಮವನ್ನು ಅವಮಾನಿಸುವ ಬರಹದ ನಕಲಿ ನೋಟುಗಳು ಪತ್ತೆ !

ಗರ್ಭನಿರೋಧಕಗಳೂ ಪತ್ತೆ !

ಚರ್ಚುಗಳು ಮತ್ತು ಮಸೀದಿಗಳ ಕಾಣಿಕೆ ಹುಂಡಿಗಳಲ್ಲಿ ಹೀಗೆ ಆಗಿರುವುದನ್ನು ನೀವು ಎಂದಾದರೂ ಕೇಳಿದ್ದೀರಾ ? ಹಿಂದೂ ದೇವಾಲಯಗಳನ್ನು ವಿವಿಧ ರೀತಿಯಲ್ಲಿ ಗುರಿಯಾಗಿಸಲಾಗುತ್ತಿದೆ ಮತ್ತು ಹಿಂದೂಗಳು ಇನ್ನೂ ನಿದ್ದೆಯಲ್ಲಿದ್ದಾರೆ, ಇದು ನಾಚಿಕೆಗೇಡಿನ ಸಂಗತಿ !

ಮಂಗಳೂರು – ನಗರದ ಕೆಲ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿಯಲ್ಲಿ ಧಾರ್ಮಿಕ ದ್ವೇಷವನ್ನು ಹಬ್ಬಿಸುವ ಮತ್ತು ಅವಹೇಳನಕಾರಿ ಬರಹಗಳನ್ನು ಒಳಗೊಂಡಿರುವ ನಕಲಿ ನೋಟುಗಳು ಮತ್ತು ಗರ್ಭನಿರೋಧಕಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಧಾರ್ಮಿಕ ಸಾಮರಸ್ಯವನ್ನು ಭಂಗಗೊಳಿಸುವ ಪ್ರಯತ್ನ ಎಂದು ಹೇಳಲಾಗುತ್ತದೆ. ವಿಶೇಷವೆಂದರೆ ನಗರದಲ್ಲಿ ಜಿಹಾದಿ ಭಯೋತ್ಪಾದನೆಯನ್ನು ಹರಡುವ ಬರಹಗಳು ಗೋಡೆಯ ಮೇಲೆ ಬರೆದಿರುವುದು ಪತ್ತೆಯಾದನಂತರ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ನಗರದ ೩ ಸ್ಥಳಗಳಲ್ಲಿ ಇಂತಹ ಘಟನೆಗಳು ವರದಿಯಾಗಿವೆ.

೧. ಭಗವಾನ್ ಶ್ರೀ ಬಬ್ಬುಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ೨೦೦ ರೂಪಾಯಿಗಳ ನೋಟುಗಳು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ದೇವಾಲಯದ ಸಿಬ್ಬಂದಿ ಮತ್ತು ಹಿಂದೂ ಧಾರ್ಮಿಕ ಮುಖಂಡರು ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಈ ಕೃತ್ಯದ ಹಿಂದಿನ ಅಪರಾಧಿಗಳನ್ನು ಆದಷ್ಟು ಬೇಗ ಬಂಧಿಸಬೇಕು’, ಎಂದು ಅವರು ಆಗ್ರಹಿಸಿದರು.

(Translation – It is condemned in a currency note that only Jesus Christ worshiped & killed Hindus in the hood of Bobu Swamy Temple in Mangalore. This is an offense under the IPC 295 A & Banking Regulations Act 1949. @compolmlr Immediately arrest the offenders.— Mohan Gowda)

೨. ನಕಲಿ ನೋಟುಗಳ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಅದರಲ್ಲಿ, ‘ಪ್ರತಿಯೊಬ್ಬರೂ ಯೇಸು ಕ್ರಿಸ್ತನನ್ನು ಮಾತ್ರ ಪ್ರಾರ್ಥಿಸಬೇಕು. ಪ್ರತಿಯೊಬ್ಬ ಮುಸ್ಲಿಮರನ್ನು ಹಂದಿಯನ್ನು ಕೊಲ್ಲುವಂತೆ ಕೊಲ್ಲಬೇಕು.’ ಎಂದು ಬರೆಯಲಾಗಿದೆ.

(ಈ ಮೇಲಿನ ಚಿತ್ರವನ್ನು ಯಾರ ಭಾವನೆಗಳಿಗೆ ನೋವನ್ನುಂಟುಮಾಡುವ ಉದ್ದೇಶವಾಗಿರದೆ ಕೇವಲ ನಿಜವಾದ ಸಂಗತಿಯನ್ನು ತೋರಿಸುವ ಉದ್ದೇಶವಾಗಿದೆ)