‘ವರ್ಷ 2021 : ಭಾರತ ಮತ್ತು ವಿಶ್ವದ ಮುಂದಿರುವ ಸವಾಲುಗಳು’ ಈ ವಿಷಯದ ಮೇಲೆ ಆನ್‌ಲೈನ್ ವಿಶೇಷ ಚರ್ಚಾಕೂಟ !

ಮೂರನೆ ಮಹಾಯುದ್ಧವಾದಲ್ಲಿ ಅದಕ್ಕೆ ಪ್ರತ್ಯುತ್ತರ ನೀಡಲು ಭಾರತ ಸಕ್ಷಮ ! – ತಜ್ಞರ ಅಭಿಪ್ರಾಯ

ಮುಂಬರುವ ಕಾಲದಲ್ಲಿ ಮೂರನೇ ಮಹಾಯುದ್ಧವಾದರೆ, ಲಭ್ಯವಿರುವ ಭೌತಿಕ ಸಾಧನಸಾಮಗ್ರಿಗಳು ಹಾಗೂ ಸೈನ್ಯಶಕ್ತಿಯ ಆಧಾರದಲ್ಲಿ ಅದಕ್ಕೆ ಪ್ರತ್ಯುತ್ತರ ನೀಡಲು ಭಾರತ ಸಕ್ಷಮವಿದೆ, ಎಂದು ‘ವರ್ಷ 2021 : ಭಾರತ ಮತ್ತು ವಿಶ್ವದ ಮುಂದಿರುವ ಸವಾಲುಗಳು’ ಈ ಚರ್ಚಾಕೂಟದಲ್ಲಿ ತಜ್ಞ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಈ ಆನ್‌ಲೈನ್ ಚರ್ಚಾಕೂಟವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ನವ ದೆಹಲಿಯ ರಕ್ಷಣಾ ಹಾಗೂ ವಿದೇಶನೀತಿಯ ತಜ್ಞರಾದ ಶ್ರೀ. ಅಭಿಜಿತ ಅಯ್ಯರ-ಮಿತ್ರಾ, ಭಾರತ ರಕ್ಷಾ ಮಂಚ್‌ನ ರಾಷ್ಟ್ರೀಯ ಕಾರ್ಯದರ್ಶಿಗಳಾದ ಶ್ರೀ. ಅನಿಲ ಧೀರ, ಅಮೇರಿಕಾದ ಸಂಶೋಧಕರು ಹಾಗೂ ‘ಪಿಗುರುಸ್’ ಜಾಲತಾಣದ ಸಂಪಾದಕರಾದ ಶ್ರೀ. ಶ್ರೀಅಯ್ಯರ, ಅದೇ ರೀತಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಫೇಸ್‌ಬುಕ್ ಹಾಗೂ ಯೂ-ಟ್ಯೂಬ್‌ನ ಮಾಧ್ಯಮದಿಂದ 33,062 ಜನರು ಪ್ರತ್ಯಕ್ಷವಾಗಿ ವೀಕ್ಷಿಸಿದರು.

ಈ ಸಮಯದಲ್ಲಿ ರಕ್ಷಣೆ ಹಾಗೂ ವಿದೇಶನೀತಿಯ ತಜ್ಞರಾದ ಶ್ರೀ. ಅಭಿಜಿತ ಅಯ್ಯರ-ಮಿತ್ರಾ ಇವರು ಮಾತನಾಡುತ್ತಾ, , ಪ್ರತ್ಯಕ್ಷವಾಗಿ ಅಲ್ಲ; ಆದರೆ ಪರೋಕ್ಷವಾಗಿ ಚೀನಾ ಮೂರನೇ ಮಹಾಯುದ್ದಕ್ಕೆ ಕಾರಣವಾಗಬಹುದು. ಚೀನಾವು ಭಾರತದ ಮೇಲೆ ದಾಳಿ ಮಾಡಿದರೆ ಪಾಕಿಸ್ತಾನವೂ ಭಾರತದ ಮೇಲೆ ದಾಳಿ ಮಾಡಬಹುದು; ಆದರೆ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಿದರೆ ಚೀನಾವು ಪಾಕಿಸ್ತಾನಕ್ಕೆ ಸಹಾಯ ಮಾಡುವುದಿಲ್ಲ. ಚೀನಾವು ಸ್ವಾರ್ಥಿಯಾಗಿದ್ದರಿಂದ ಅದು ಎಂದೂ ತನ್ನ ಮಿತ್ರರಾಷ್ಟ್ರವೆಂದು ‘ಉತ್ತರ ಕೋರಿಯಾ’ಗೆ ಸಹಾಯಕ್ಕಾಗಿ ಧಾವಿಸಿಲ್ಲ. ಚೀನಾ ತನ್ನ ಕಡಿಮೆ ಪ್ರಮಾಣದಲ್ಲಿ ಹಾನಿಯಾಗುವುದನ್ನು ನೋಡುತ್ತದೆ ಎಂದು ಹೇಳಿದರು.

‘ಪಿಗುರುಸ್’ ಜಾಲತಾಣದ ಸಂಪಾದಕರಾದ ಶ್ರೀ. ಶ್ರೀ ಅಯ್ಯರ ಅವರು ಮಾತನಾಡುತ್ತಾ, ಚೀನಾವು ಜಗತ್ತಿನ ವಿವಿಧ ತಂತ್ರಜ್ಞಾನವನ್ನು ಕದ್ದು ಅದರ ತದ್ರೂಪ (ಕಾಪಿ) ಮಾಡುತ್ತದೆ. ಅದರ ಗುಣಮಟ್ಟ ಒಳ್ಳೆಯದಿಲ್ಲ. ವಿಯೆಟ್ನಾಮ್‌ನ ಯುದ್ಧದ ನಂತರ ಚೀನಾಗೆ ಮೈದಾನದಿಂದ ಓಡಿ ಹೋಗಬೇಕಾಯಿತು. ಪ್ರತ್ಯಕ್ಷದಲ್ಲಿ ಚೀನಾವು ಯುದ್ಧದಲ್ಲಿ ಗೆಲ್ಲದೇ ಇದ್ದರಿಂದ ಯುದ್ಧದಲ್ಲಿ ಅದರ ಶಸ್ತ್ರಾಸ್ತ್ರಗಳು ಹಾಗೂ ವಿಮಾನಗಳು ಎಷ್ಟು ಉಪಯೋಗವಾಗಬಹುದು, ಇದು ಪ್ರಶ್ನೆಯಾಗಿದೆ. ಪ್ರತ್ಯಕ್ಷ ಚೀನಾಗೆ ಯುದ್ಧಕ್ಕಿಂತ ಇತರ ತಂತ್ರಜ್ಞಾನ ಹಾಗೂ ಸಾಧನಗಳ ಉಪಯೋಗವಾಗಬಹುದು ಎಂದು ಹೇಳಿದರು.

ಭಾರತ ರಕ್ಷಾ ಮಂಚ್‌ನ ರಾಷ್ಟ್ರೀಯ ಕಾರ್ಯದರ್ಶಿ ಶ್ರೀ. ಅನಿಲ್ ಧೀರ್ ಇವರು ಮಾತನಾಡುತ್ತಾ, ಪಾಕಿಸ್ತಾನದ ಪ್ರಧಾನಿ ಇವರು ಕೇವಲ ಹೆಸರಿಗಷ್ಟೆ ಇದ್ದು ಅವರ ಎಲ್ಲ ವ್ಯವಹಾರಗಳನ್ನು ಅಲ್ಲಿಯ ಪಾಕಿಸ್ತಾನದ ಸೇನೆ ನಡೆಸುತ್ತಿದೆ, ಎಂಬುದು ಜಗತ್ತಿದೆ ತಿಳಿದಿದೆ. ಮುಂಬರುವ ಕಾಲದಲ್ಲಿ ಪಾಕಿಸ್ತಾನದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಗಳಿವೆ. ಈಗ 1962 ರ ಭಾರತವಲ್ಲ, ಎಂಬುದು ಚೀನಾಗೆ ಲದಾಖನ ಪ್ರಶ್ನೆಯಿಂದ ತಿಳಿದಿದೆ. ಆದ್ದರಿಂದ ಯುದ್ಧದ ಬದಲಾಗಿ ಅದು ನೇಪಾಳ ಹಾಗೂ ಶ್ರೀಲಂಕಾವನ್ನು ಭಾರತದಿಂದ ಬೇರ್ಪಡಿಸಲು ಪ್ರಯತ್ನಿಸುತ್ತಿದೆ; ಆದರೆ ಅದು ಸಾಧ್ಯವಾಗುವುದಿಲ್ಲ; ಏಕೆಂದರೆ ಭಾರತದೊಂದಿಗೆ ನೇಪಾಳದ ಸಾಂಸ್ಕೃತಿಕ ಸಂಬಂಧ ಇರುವುದರಿಂದ ನೇಪಾಳ-ಭಾರತದ ಸ್ನೇಹ ಗಟ್ಟಿಯಾಗಿ ಉಳಿಯಲಿದೆ ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು (ಡಾ.) ಪಿಂಗಳೆಯವರು ಮಾತನಾಡುತ್ತಾ, ಜಗತ್ತಿನಾದ್ಯಂತ ವಿವಿಧ ದೇಶಗಳಿಂದ ನಡೆಯುತ್ತಿರುವ ಆರ್ಥಿಕ ವರ್ಚಸ್ಸು ಬೀರುವ ಯತ್ನ, ವಿಸ್ತಾರವಾದ, ಸ್ವಾರ್ಥ ಹಾಗೂ ಅಹಂಕಾರದಿಂದಾಗಿ ವಿಶ್ವ ಮೂರನೇ ಮಹಾಯುದ್ಧದತ್ತ ಸಾಗುತ್ತಿದೆ. ಮುಂಬರುವ ಕಾಲದಲ್ಲಿ ಮೂರನೇ ಮಹಾಯುದ್ಧವಾದರೆ ಸೈನ್ಯ ಹಾಗೂ ಸಾಧನಸಾಮಗ್ರಿಗಳಲ್ಲಿ ಭಾರತಕ್ಕಿಂತ ಹೆಚ್ಚಿರುವ ಚೀನಾ ಹಾಗೂ ಜಿಹಾದಿ ಭಯೋತ್ಪಾದಕರಿಗೆ ಸೊಪ್ಪು ಹಾಕುವ ಇಸ್ಲಾಮಿಕ್ ದೇಶಗಳ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ; ಏಕೆಂದರೆ ಧರ್ಮದ ಪರವಾಗಿ ನ್ಯಾಯ ಇರುವುದರಿಂದ ಕಡಿಮೆ ಸೈನ್ಯಬಲ ಹಾಗೂ ಸಾಧನಸಾಮಗ್ರಿಗಳು ಇರುವಾಗಲೂ ಶ್ರೀರಾಮ, ಶ್ರೀಕೃಷ್ಣ, ಆರ್ಯ ಚಾಣಕ್ಯ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ಯುದ್ಧಗಳನ್ನು ಗೆದ್ದಿದ್ದಾರೆ, ಎಂಬುದನ್ನು ಗಮನದಲ್ಲಿಡಬೇಕು ಎಂದು ಹೇಳಿದರು.