ಹಿಂದೂಗಳು ಎಂದಿಗೂ ಭಾರತ ವಿರೋಧಿಗಳಾಗಲು ಸಾಧ್ಯವಿಲ್ಲ ! – ಸರಸಂಘಚಾಲಕ ಡಾ. ಮೋಹನ ಭಾಗವತ್

ನವ ದೆಹಲಿ – ‘ನನ್ನ ದೇಶಭಕ್ತಿಯ ಉಗಮವು ಧರ್ಮದಿಂದ ಆಗಿದೆ. ನಾನು ಹಿಂದೂ ಆಗಿ ಜನಿಸಿದೆ, ಅಂದರೆ ನಾನು ದೇಶಭಕ್ತನಾಗಿದ್ದೇನೆ. ಅದಕ್ಕಾಗಿ ಬೇರೆ ಏನನ್ನೂ ಮಾಡುವ ಅಗತ್ಯವಿಲ್ಲ’ಎಂದು ಗಾಂಧಿಯವರ ಅಭಿಪ್ರಾಯವಿತ್ತು. ಯಾವುದೇ ಹಿಂದೂ ಭಾರತ ವಿರೋಧಿಯಾಗಲು ಸಾಧ್ಯವಿಲ್ಲ. ಅವನು ಹಿಂದೂ ಆಗಿದ್ದಾನೆ, ಅಂದರೆ ದೇಶಭಕ್ತನಾಗಿದ್ದಾನೆ. ಅದು ಆತನ ಮೂಲ ಸ್ವಭಾವವಾಗಿದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ ಭಾಗವತ ಇವರು ಇಲ್ಲಿ ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜೆ.ಕೆ. ಬಜಾಜ್ ಮತ್ತು ಎಂ.ಡಿ. ಶ್ರೀನಿವಾಸ ಅವರ ‘ದಿ ಮೇಕಿಂಗ್ ಆಫ್ ಎ ಟ್ರೂ ಪೇಟ್ರಿಯಾಟ್ : ಬ್ಯಾಗ್ರೌಂಡ್ ಆಫ್ ಗಾಂಧೀಜೀಸ್ ಹಿಂದ್ ಸ್ವರಾಜ್’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಡಾ. ಭಾಗವತ್ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ,

೧. ಗಾಂಧಿಯವರು, ‘ನಾನು ಧರ್ಮವನ್ನು ಅರ್ಥಮಾಡಿಕೊಂಡ ನಂತರವೇ ಉತ್ತಮ ದೇಶಭಕ್ತನಾಗುತ್ತೇನೆ ಮತ್ತು ಅದನ್ನು ಜನರಿಗೆ ಹೇಳಲು ಸಾಧ್ಯವಾಗುತ್ತದೆ. ಸ್ವರಾಜ್ಯವನ್ನು ಅರ್ಥಮಾಡಿಕೊಳ್ಳಲು ತನ್ನ ಸ್ವಂತ ಧರ್ಮವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ.’ ಎಂದು ಹೇಳಿದರು.

೨. ಅವನು ಹಿಂದೂ, ಅಂದರೆ ಅವನು ದೇಶಭಕ್ತನಾಗಿರುತ್ತಾನೆ. ಅವನು ನಿದ್ರಿಸುತ್ತಿರಬಹುದು, ಅವನನ್ನು ಎಚ್ಚರಗೊಳಿಸಬೇಕು; ಆದರೆ ಯಾವುದೇ ಹಿಂದೂ ಭಾರತ ವಿರೋಧಿಯಾಗಲು ಸಾಧ್ಯವಿಲ್ಲ.

ಗಾಂಧಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮವನ್ನು ಸ್ವೀಕರಿಸಲಿಲ್ಲ !

‘ಗಾಂಧಿಯವರನ್ನು ಅವರ ಆಫ್ರಿಕಾದ ಮುಸ್ಲಿಂ ಮಾಲೀಕರು, ಅದೇರೀತಿ ಅನೇಕ ಕ್ರೈಸ್ತ ಸಹೋದ್ಯೋಗಿಗಳು ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದರು; ಆದರೆ ಗಾಂಧಿ ಅದನ್ನು ಒಪ್ಪಿಕೊಳ್ಳಲಿಲ್ಲ. ನಂತರ ಅವರು ೧೯೦೫ ರಿಂದ ಹಿಂದೂ ಧರ್ಮಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡರು’, ಎಂದು ಈ ಪುಸ್ತಕದಲ್ಲಿ ಹೇಳಲಾಗಿದೆ. (‘ಗಾಂಧಿಯವರು ಹಿಂದೂ ಇರುವಾಗ ಹಿಂದೂ ಧರ್ಮಕ್ಕೆ ಎಷ್ಟು ಹಾನಿ ಮಾಡಿದರೋ, ಅಷ್ಟು ಕ್ರೈಸ್ತ ಅಥವಾ ಮುಸಲ್ಮಾನರಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲ’, ಎಂದು ಹಿಂದೂಗಳು ಅನಿಸಿದರೆ ಅದರಲ್ಲಿ ಆಶ್ಚರ್ಯವಿದೆಯೇ ? – ಸಂಪಾದಕ)