ಪಾಕಿಸ್ತಾನವು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದ ನಾಗರಿಕರನ್ನು ಪ್ರಾಣಿಗಳಂತೆ ನೋಡಿಕೊಳ್ಳುತ್ತಿದೆ !

ಪಾಕ್ ಆಕ್ರಮಿತ ಕಾಶ್ಮೀರದ ಕಾರ್ಯಕರ್ತನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ತಮ್ಮ ಮೇಲಿನ ದೌರ್ಜನ್ಯವನ್ನು ಮಂಡಿಸಿದರು !

ಭಾರತದಲ್ಲಿರುವ ಪಾಕಿಸ್ತಾನಿ ಪ್ರೇಮಿಗಳು ಈ ಬಗ್ಗೆ ಮಾತನಾಡುವರೇ ? ಭಾರತದಲ್ಲಿ ತಿಂದು ಪಾಕಿಸ್ತಾನವನ್ನು ಹೊಗಳುವವರು ಪಾಕಿಸ್ತಾನದ ನಿಜವಾದ ಮನಸ್ಥಿತಿ ತಿಳಿದುಕೊಳ್ಳುವರೇ ?

ಜೆನೆವಾ (ಸ್ವಿಟ್ಜರ್ಲೆಂಡ್) – ಪಾಕಿಸ್ತಾನವು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದ ಜನರನ್ನು ಪ್ರಾಣಿಗಳಂತೆ ನೋಡಿಕೊಳ್ಳುತ್ತಿದೆ. ಪಾಕಿಸ್ತಾನ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ ಮತ್ತು ನಮ್ಮ ಧ್ವನಿಯನ್ನು ಅದುಮಿಡಲು ಪ್ರಯತ್ನಿಸುತ್ತಿದೆ; ಆದರೆ ನಮ್ಮ ಧ್ವನಿ ಕೇಳಿಕೊಳ್ಳಬಹುದು, ಎಂಬ ವಿಶ್ವಾಸ ನಮಗಿದೆ, ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಅಲ್ಲಿಯ ಕಾರ್ಯಕರ್ತ ಸಜ್ಜಾದ್ ರಾಜಾ ಹೇಳಿದ್ದಾರೆ. ಈ ಬಾರಿ ಅವರು ಕಣ್ಣೀರು ಹಾಕಿದರು. ‘ಈ ದೌರ್ಜನ್ಯವನ್ನು ತಡೆಯಲು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತು ಮುಂದಾಗಬೇಕು’, ಎಂದು ಅವರು ವಿನಂತಿಸಿದರು.

ಸಜ್ಜಾದ್ ರಾಜಾ ತಮ್ಮ ಮಾತನ್ನು ಮುಂದುವರಿಸುತ್ತಾ,

೧. ‘ಆಜಾದ್ ಕಾಶ್ಮೀರ ಚುನಾವಣಾ ಕಾಯ್ದೆ’ಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಾಗರಿಕರಿಗೆ ಅವರ ಎಲ್ಲಾ ಸಾಂವಿಧಾನಿಕ, ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಕಸಿದುಕೊಂಡಿದೆ.

೨. ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವುದರಿಂದ ಮನೆಯಲ್ಲಿ ನಮ್ಮನ್ನು ‘ದೇಶದ್ರೋಹಿಗಳು’ ಎಂದು ಘೋಷಿಸಿದ್ದಾರೆ. ನಮ್ಮ ರಾಜಕೀಯ ಅಂಶಗಳನ್ನು ಅನಧಿಕೃತವೆಂದು ಘೋಷಿಸಲಾಗುತ್ತಿದೆ. ಆದ್ದರಿಂದ ನಮ್ಮ ಜನರನ್ನು ಕೊಲ್ಲಲು ಪಾಕಿಸ್ತಾನ ಸೈನಿಕರಿಗೆ ಸ್ವತಂತ್ರ ಸಿಗುತ್ತಿದೆ.

೩. ಜಮ್ಮು ಮತ್ತು ಕಾಶ್ಮೀರದ ಗಡಿಯ ಎರಡೂ ಬದಿಗಳಲ್ಲಿಯ ಯುವಕರನ್ನು ಕೆರಳಿಸಲು ಪಾಕಿಸ್ತಾನವು ಕೆಲಸ ಮಾಡುತ್ತಿದೆ. ಅವರನ್ನು ಭಾರತದೊಂದಿಗೆ ಹೋರಾಡಲು ಸಿದ್ಧ ಮಾಡುತ್ತಿದೆ.

೪. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಉಗ್ರರಿಗೆ ಆಶ್ರಯ ನೀಡುತ್ತಿದ್ದು ಅಲ್ಲಿ ಇನ್ನೂ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.