ಕೊರೋನಾ ಚೀನಾದಿಂದ ಬಂದಿರುವುದನ್ನು ನಾವು ಎಂದಿಗೂ ಮರೆಯುವುದಿಲ್ಲ, ಆದ್ದರಿಂದ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಚೀನಾದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುತ್ತೇವೆ ! – ಡೊನಾಲ್ಡ್ ಟ್ರಂಪ್

ಟ್ರಂಪ್ ಇನ್ನೂ ಅಧಿಕಾರದಲ್ಲಿದ್ದಾರೆ, ಆದ್ದರಿಂದ ಈಗ ಚೀನಾದೊಂದಿಗೆ ಸಂಬಂಧವನ್ನು ಏಕೆ ಕಡಿದುಕೊಳ್ಳಬಾರದು ? ಅಥವಾ ಅವರು ಭಾರತೀಯ ರಾಜಕಾರಣಿಗಳಂತೆ ಸುಳ್ಳು ಭರವಸೆ ನೀಡಿ ಜನರನ್ನು ಮರುಳು ಮಾಡುತ್ತಿದ್ದಾರೆಯೇ ?

ವಾಷಿಂಗ್ಟನ್ (ಅಮೇರಿಕಾ) – ಚೀನಾದಿಂದ ಕೊರೋನಾ ಬಂದಿರುವುದು ನಾವು ಎಂದಿಗೂ ಮರೆಯುವುದಿಲ್ಲ. ‘ದೇಶದ ಜನರು ನಮ್ಮನ್ನು ಪುನಃ ಅಧಿಕಾರಕ್ಕೆ ತರಲು ಮತ ಚಲಾಯಿಸಿದರೆ, ಅಮೆರಿಕವು ಚೀನಾದೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳುತ್ತದೆ’ ಎಂಬ ಆಶ್ವಾಸನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅಧ್ಯಕ್ಷೀಯ ಪ್ರಚಾರದಲ್ಲಿ ಹೇಳಿದ್ದಾರೆ. ನವೆಂಬರ್ ೩ ರಂದು ಅಮೇರಿಕಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಟ್ರಂಪ್ ತಮ್ಮ ಮಾತನ್ನು ಮುಂದುವರಿಸುತ್ತಾ, ಅಮೆರಿಕದ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿದ್ದ ಸಮಯದಲ್ಲಿ ಚೀನಾದಿಂದ ಕೊರೋನಾ ಆಕ್ರಮಣವಾಯಿತು ಎಂದು ಹೇಳಿದರು. ಅವರು ಹಾಗೆ ಮಾಡಬಾರದಿತ್ತು. ನಾವು ಇಡೀ ದೇಶದ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದೇವೆ. ನಾವು ಲಕ್ಷಾಂತರ ಜೀವಗಳನ್ನು ಉಳಿಸಿದ್ದೇವೆ. ಈಗ ನಾವು ನಿರ್ಬಂಧಗಳನ್ನು ಸಡಿಲಿಸಿದ್ದೇವೆ ಎಂದು ಹೇಳಿದರು.