ಚೀನಾದ ನಿವೃತ್ತ ಸೈನ್ಯಾಧಿಕಾರಿ ಯೋಚಿಸಿದಂತೆ ಭಾರತ ಮಾಡಬೇಕು ಮತ್ತು ಅಕ್ಸಾಯ್ ಚಿನ್ ಹಾಗೂ ಟಿಬೆಟ್ ಅನ್ನು ಚೀನಾದಿಂದ ಮುಕ್ತಗೊಳಿಸಬೇಕು ಎಂದು ಜನರಿಗೆ ಅನಿಸುತ್ತದೆ !
ಬೀಜಿಂಗ್ (ಚೀನಾ) – ಭಾರತವು ಗಡಿಯಲ್ಲಿ ತನ್ನ ಸೈನ್ಯದ ಸಂಖ್ಯೆಯನ್ನು ೫೦ ಸಾವಿರದಿಂದ ೧ ಲಕ್ಷಕ್ಕೆ ಹೆಚ್ಚಿಸಿದೆ. ಸೈನ್ಯವು ಚೀನಾದ ಗಡಿಯಿಂದ ೫೦ ಕಿ.ಮೀ ದೂರದಲ್ಲಿ ನೇಮಿಸಿದೆ. ಕೆಲವೇ ಗಂಟೆಗಳಲ್ಲಿ ಅವರು ಇದ್ದಕ್ಕಿದ್ದಂತೆ ಆಕ್ರಮಣ ಮಾಡಿ ಚೀನಾವನ್ನು ಪ್ರವೇಶಿಸಬಹುದು. ಆದ್ದರಿಂದ ಚೀನಾ ಜಾಗರೂಕರಾಗಿರಬೇಕು ಎಂದು ಚೀನಾದ ನಿವೃತ್ತ ಲೆಫ್ಟಿನೆಂಟ್ ಜನರಲ್ ವಾಂಗ್ ಹಾಂಗ್ಗುವಾಂಗ್ ಲೇಖನವೊಂದರಲ್ಲಿ ತಿಳಿಸಿದ್ದಾರೆ. ಲಿ ಜಿಯಾನ್ ಅವರ ರಕ್ಷಣೆಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಖಾತೆಯ ಲೇಖನದಲ್ಲಿ ವಾಂಗ್ ಹಾಂಗ್ಗುವಾಂಗ್ ಈ ಭೀತಿ ವ್ಯಕ್ತಪಡಿಸಿದ್ದಾರೆ.
ವಾಂಗ್ ಇವರು, ನಿಯಂತ್ರಣ ರೇಖೆಯ ಉದ್ದಕ್ಕೂ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತಕ್ಕೆ ೫೦,೦೦೦ ಸೈನಿಕರ ಅಗತ್ಯವಿದೆ ಎಂದು ವಾಂಗ್ ಹೇಳಿದರು; ಆದರೆ ಈಗ ಚಳಿಗಾಲದ ಮೊದಲು ಸೈನ್ಯವನ್ನು ಕಡಿಮೆಗೊಳಿಸುವ ಬದಲು ಭಾರತ ಲಢಾಖನಲ್ಲಿ ಒಂದು ಲಕ್ಷ ಸೈನಿಕರನ್ನು ನಿಯೋಜಿಸಿದೆ. ಯುದ್ಧದ ಅಪಾಯ ಹೆಚ್ಚಾಗಿದೆ. ತೈವಾನ್ ರಾಜ್ಯದ ಘಟನೆಗಳು ಮತ್ತು ಮುಂಬರುವ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಿಂದಾಗಿ ಭಾರತಕ್ಕೆ ಏನಾದರೂ ದೊಡ್ಡದ್ದನ್ನು ಮಾಡಲು ಅವಕಾಶವನ್ನು ನೀಡುತ್ತದೆ ಎಂದು ವಾಂಗ್ ಆತಂಕ ವ್ಯಕ್ತಪಡಿಸಿದರು.