ಮಾಧ್ಯಮಗಳ ವಾರ್ತೆಗಳನ್ನು ಮಾಡುವುದನ್ನು ತಡೆಯಲು ಸಾಧ್ಯವಿಲ್ಲ !

ವಿಚಾರಣೆಯ ವೇಳೆ ನ್ಯಾಯಾಲಯ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಮಾಧ್ಯಮಗಳು ವಾರ್ತೆಗಳನ್ನು ಮಾಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸರ್ವೋಚ್ಚ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ಕಪಾಳಮೋಕ್ಷ ಮಾಡಿದೆ.

ದೇಶದಲ್ಲಿ ಕೂಡಲೇ ಸಂಚಾರ ನಿಷೇಧ ಜಾರಿಗೆ ತನ್ನಿ !

ಕೊರೋನಾ ಸೋಂಕು ಒಂದು ವ್ಯಕ್ತಿಯಿಂದ ಮತ್ತೊಂದು ವ್ಯಕ್ತಿಗೆ ಹರಡುತ್ತದೆ. ಇಂತಹ ಸಮಯದಲ್ಲಿ ನಿಷೇಧವನ್ನು ಹೇರುವ ಮೂಲಕ ಸೋಂಕಿನ ಸರಪಳಿಯನ್ನು ಮುರಿಯುವುದು ಅತ್ಯಂತ ಯೋಗ್ಯವಾದ ಮಾರ್ಗವಾಗಿದೆ ಎಂದು ಹೇಳಿದರು.

ಆಮ್ಲಜನಕದ ಬಗ್ಗೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಉಚ್ಚನ್ಯಾಯಾಲಯ !

ಈಗ ನೀರು ತಲೆಯ ಮೇಲಿಂದ ಹೋಗಿದೆ. ಈಗ ನಮಗೆ ಕಾರ್ಯಾಚರಣೆ ಬೇಕಾಗಿದೆ. ನೀವು ಈಗ ಎಲ್ಲ ವ್ಯವಸ್ಥೆಯನ್ನು ಮಾಡಲಿದ್ದೀರಿ. ಹೇಗಾದರೂ ಮಾಡಿ ದೆಹಲಿಗೆ ಇಂದು ೪೯೦ ಮೆಟ್ರಿಕ್ ಟನ್ ಆಮ್ಲಜನಕವನ್ನು ಒದಗಿಸುವಂತೆ ದೆಹಲಿ ಉಚ್ಚ ನ್ಯಾಯಾಲಯವು ಕೇಂದ್ರಕ್ಕೆ ಆದೇಶ ನೀಡುವ ಮೂಲಕ ತರಾಟೆಗೆ ತೆಗೆದುಕೊಂಡಿದೆ

ಭಾರತದ ಗಡಿಯಲ್ಲಿ ಮತ್ತೆ ನುಸುಳುತ್ತಿರುವ ಚೀನಾ !

ಚೀನಾವು ವಿಶ್ವಾಸದ್ರೋಹಿಯಾಗಿದೆ, ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಆದ್ದರಿಂದ, ಇಂತಹ ಚೀನಾಕ್ಕೆ ತಕ್ಕ ಪಾಠವನ್ನು ಕಲಿಸಲು ಅವರಿಂದ ಆಕ್ರಮಣವಾಗಲಿ ಎಂದು ಕಾಯದೆ ಭಾರತವು ಕ್ರಮ ತೆಗೆದುಕೊಳ್ಳಬೇಕು !

ರಾಷ್ಟ್ರನಿಷ್ಠ ಮತ್ತು ಹಿಂದುತ್ವದ ಪಕ್ಷವನ್ನು ಮಂಡಿಸುತ್ತಿದ್ದ ಪತ್ರಕರ್ತ ರೋಹಿತ್ ಸರ್ದಾನ ನಿಧನ

ಖ್ಯಾತ ಪತ್ರಕರ್ತ ಮತ್ತು ನಿರೂಪಕ ರೋಹಿತ್ ಸರ್ದಾನ ನೋಯ್ಡಾದ ಮೆಟ್ರೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ೪೨ ವರ್ಷವಾಗಿತ್ತು. ಅವರು ಕೊರೋನಾದ ಸೋಂಕಿಗೆ ಒಳಗಾಗಿದ್ದರು; ಆದರೆ ನಂತರ ಅವರ ವರದಿಯು ನಕಾರಾತ್ಮಕ ಬಂದಿತ್ತು. ನಂತರ ಅವರಿಗೆ ೨೯ ಎಪ್ರಿಲ್ ರಾತ್ರಿ ಉಸಿರಾಟದ ತೊಂದರೆಯಾಗತೊಡಗಿದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಭಾರತದ ಪರಿಸ್ಥಿತಿ ಹದಗೆಟ್ಟಿರುವುದರಿಂದ ಜಗತ್ತು ಸಹಾಯ ಮಾಡಬೇಕು !’(ಅಂತೆ)

ಭಾರತವು ಪ್ರಸ್ತುತ ಕೊರೋನಾ ಸಾಂಕ್ರಾಮಿಕದ ಎರಡನೇ ಅಲೆಯನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಆಮ್ಲಜನಕ, ಹಾಸಿಗೆಗಳು, ವೆಂಟಿಲೇಟರ್ ಇತ್ಯಾದಿಗಳ ಕೊರತೆಯನ್ನು ಎದುರಿಸುತ್ತಿದೆ.

ಕರ್ನಾಟಕದ ಪ್ರಸಿದ್ಧ ಗೋಕರ್ಣ ದೇವಾಲಯದ ಆಡಳಿತ ನಿರ್ವಹಣೆ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯ ಸಮಿತಿಗೆ !

ಕರ್ನಾಟಕದ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ಈಗ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಇವರ ಅಧ್ಯಕ್ಷತೆಯ ಸಮಿತಿಯು ನಿರ್ವಹಿಸಲಿದೆ. ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಮಧ್ಯಂತರ ಆದೇಶ ಹೊರಡಿಸಿದೆ.

ಹಾಟ್ ಸ್ಪ್ರಿಂಗ್ಸ್, ಗೊಗ್ರಾ ಮತ್ತು ದೆಪ್ಸಾಂಗ್‌ನಿಂದ ಹಿಂದೆ ಸರಿಯಲು ಚೀನಾದಿಂದ ನಕಾರ

ಚೀನಾವು ಪೂರ್ವ ಲಡಾಖ್‌ನ ಹಾಟ್ ಸ್ಪ್ರಿಂಗ್ಸ್, ಗೊಗ್ರಾ ಮತ್ತು ದೆಪ್ಸಾಂಗ್‌ನಲ್ಲಿ ಗಡಿಯಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದೆ ಎಂದು ತಿಳಿದುಬಂದಿದೆ. ಕಳೆದ ವಾರ ನಡೆದ ೧೧ ನೇ ಸುತ್ತಿನ ಮಿಲಿಟರಿ ಮಟ್ಟದ ಮಾತುಕತೆಯಲ್ಲಿ ಭಾರತ ಮತ್ತು ಚೀನಾ ೧೩ ಗಂಟೆಗಳ ಕಾಲ ಚರ್ಚೆ ನಡೆಸಿವೆ.

ದೆಹಲಿಯ ಸ್ಮಶಾನಭೂಮಿಯಲ್ಲಿ ಸ್ಥಳ ಇಲ್ಲದ್ದರಿಂದ ವಾಹನಗಳ ನಿಲುಗಡೆಯ ಸ್ಥಳದಲ್ಲಿ ೧೫ ಜನರ ಅಂತ್ಯಕ್ರಿಯೆ

ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೨,೬೧,೫೦೦ ಹೊಸ ಕೊರೋನಾ ರೋಗಿಗಳು ಪತ್ತೆಯಾಗಿದ್ದ್ದಾರೆ, ಹಾಗೂ ಕೊರೋನಾದಿಂದ ೧,೫೦೧ ಜನರು ಸಾವನ್ನಪ್ಪಿದ್ದಾರೆ. ಹೆಚ್ಚುತ್ತಿರುವ ಸಾವುಗಳಿಂದಾಗಿ, ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಸ್ಥಳವಿಲ್ಲ ಎಂಬುದು ಬೆಳಕಿಗೆ ಬಂದಿದೆ.

ಕುಂಭಮೇಳ ಸಾಂಕೇತಿಕವಾಗಿರಲಿ !

ಹರಿದ್ವಾರದ ಮಹಾಕುಂಭ ಮೇಳದಲ್ಲಿ ಹೆಚ್ಚುತ್ತಿರುವ ಕೊರೋನದ ಸಾಂಕ್ರಾಮಿಕವನ್ನು ನೋಡುತ್ತಾ ಕುಂಭಮೇಳವನ್ನು ಸಾಂಕೇತಿಕವಾಗಿರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಅವರು ಈ ಬಗ್ಗೆ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿಯವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದರು. ಈ ವಿಷಯದ ಮಾಹಿತಿಯನ್ನು ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ ತಿಳಿಸಿದ್ದಾರೆ.