ಭಾರತದ ಗಡಿಯಲ್ಲಿ ಮತ್ತೆ ನುಸುಳುತ್ತಿರುವ ಚೀನಾ !

ಚೀನಾವು ವಿಶ್ವಾಸದ್ರೋಹಿಯಾಗಿದೆ, ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಆದ್ದರಿಂದ, ಇಂತಹ ಚೀನಾಕ್ಕೆ ತಕ್ಕ ಪಾಠವನ್ನು ಕಲಿಸಲು ಅವರಿಂದ ಆಕ್ರಮಣವಾಗಲಿ ಎಂದು ಕಾಯದೆ ಭಾರತವು ಕ್ರಮ ತೆಗೆದುಕೊಳ್ಳಬೇಕು !

ನವ ದೆಹಲಿ – ಭಾರತದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದಂತೆ, ಅನೇಕ ದೇಶಗಳು ಸಹಾಯ ಹಸ್ತ ಚಾಚಿದೆ. ಚೀನಾವು ಸಹ ಸಹಾಯ ಮಾಡುವುದಾಗಿ ಭರವಸೆ ನೀಡಿದೆ; ಆದರೆ, ವಿಶ್ವಾಸಘಾತುಕ ಚೀನಾ ಪೂರ್ವ ಲಡಾಖ್‍ಗೆ ನುಸುಳಿದೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ. ಚೀನಾದ ಪಡೆಗಳು ಇಲ್ಲಿ ಶಾಶ್ವತ ನಿವಾಸಗಳು ಮತ್ತು ಡಿಪೋಗಳನ್ನು ಸಹ ನಿರ್ಮಿಸಿವೆ. ಇದು ಮತ್ತೊಮ್ಮೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಿದೆ.