ದೇಶದಲ್ಲಿ ಕೂಡಲೇ ಸಂಚಾರ ನಿಷೇಧ ಜಾರಿಗೆ ತನ್ನಿ !

‘ಕೋವಿಡ್ ಟಾಸ್ಕ್ ಫೋರ್ಸ್’ನ ಸದಸ್ಯರಿಂದ ಕೇಂದ್ರ ಸರಕಾರಕ್ಕೆ ಸಲಹೆ

ವಿ.ಕೆ. ಪಾಲ್

ನವ ದೆಹಲಿ – ಸಂಚಾರ ನಿಷೇಧ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಜನರಿಗೆ ತಿಳಿಸಬೇಕಾಗಿದೆ ಎಂದು ನಾವು ಕಳೆದ ಕೆಲವು ದಿನಗಳಿಂದ ಹೇಳುತ್ತಿದ್ದೇವೆ. ನಾವು ಪ್ರಸ್ತುತ ಭಾಗಶಃ ನಿಷೇಧವನ್ನು ಹೇರಿದ್ದೇವೆ. ಹಾಗೆ ಅಲ್ಲ, ರಾಷ್ಟ್ರವ್ಯಾಪಿ ಸಂಚಾರ ನಿಷೇಧವನ್ನು ಹೇರಬೇಕು; ಏಕೆಂದರೆ ದೇಶಾದ್ಯಂತ ಕೊರೋನಾ ಸೋಂಕು ಹೆಚ್ಚುತ್ತಿದೆ. ಎಂದು ‘ಕೋವಿಡ್ ಟಾಸ್ಕ್ ಫೋರ್ಸ್’ನ ಸದಸ್ಯರು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದ್ದಾರೆ. ವಿ.ಕೆ. ಪಾಲ್ ಇವರು ಈ ಟಾಸ್ಕ್ ಫೋರ್ಸ್‍ನ ಮುಖ್ಯಸ್ಥರಾಗಿದ್ದು ಅವರು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಹಿತಿ ನೀಡುತ್ತಿರುತ್ತಾರೆ. ಟಾಸ್ಕ್ ಫೋರ್ಸ್‍ನಲ್ಲಿ ಏಮ್ಸ್ ಮತ್ತು ಐಸಿಎಂಆರ್ ನಂತಹ ಸಂಸ್ಥೆಗಳ ತಜ್ಞರು ಒಳಗೊಂಡಿದ್ದಾರೆ.

‘ನಾವು ಪರಿಸ್ಥಿತಿಯನ್ನು ತಪ್ಪು ದೃಷ್ಟಿಕೋನದಿಂದ ನೋಡುತ್ತಿದ್ದೇವೆ’ ಎಂದು ಈ ಫೋರ್ಸ್‍ನ ಸದಸ್ಯರೊಬ್ಬರು ಹೇಳಿದರು. ಆರೋಗ್ಯ ವ್ಯವಸ್ಥೆಯನ್ನು ಉತ್ತಮಗೊಳಿಸಲು ಒಂದು ಮಿತಿ ಇರುತ್ತದೆ. ನಾವು ಆಮ್ಲಜನಕದ ಪೂರೈಕೆಯನ್ನು ಸುಧಾರಿಸಿದ್ದೇವೆ; ಆದರೆ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯನ್ನು ಗಮನಿಸಿದರೆ, ಇನ್ನೂ ಆಮ್ಲಜನಕದ ಕೊರತೆಯಿದೆ. ಕೊರೋನಾ ಸೋಂಕು ಒಂದು ವ್ಯಕ್ತಿಯಿಂದ ಮತ್ತೊಂದು ವ್ಯಕ್ತಿಗೆ ಹರಡುತ್ತದೆ. ಇಂತಹ ಸಮಯದಲ್ಲಿ ನಿಷೇಧವನ್ನು ಹೇರುವ ಮೂಲಕ ಸೋಂಕಿನ ಸರಪಳಿಯನ್ನು ಮುರಿಯುವುದು ಅತ್ಯಂತ ಯೋಗ್ಯವಾದ ಮಾರ್ಗವಾಗಿದೆ ಎಂದು ಹೇಳಿದರು.