ಶ್ರೀ ಗಣೇಶ ಪೂಜೆಯ ಬಗ್ಗೆ ನಿಮಗಿದು ತಿಳಿದಿದೆಯೇ ?
ಪೂಜೆಗಾಗಿ ಮಣೆಯ ಮೇಲೆ ಕುಳಿತುಕೊಳ್ಳುವ ಮೊದಲು ನಿಂತು ಕೊಂಡು ಭೂಮಿ ಮತ್ತು ದೇವತೆ ಗಳಿಗೆ ‘ಈ ಆಸನದ ಸ್ಥಳದಲ್ಲಿ ತಮ್ಮ ಚೈತನ್ಯಮಯ ವಾಸ್ತವ್ಯವಿರಲಿ ಎಂದು ಪ್ರಾರ್ಥನೆ ಮಾಡಬೇಕು.
ಪೂಜೆಗಾಗಿ ಮಣೆಯ ಮೇಲೆ ಕುಳಿತುಕೊಳ್ಳುವ ಮೊದಲು ನಿಂತು ಕೊಂಡು ಭೂಮಿ ಮತ್ತು ದೇವತೆ ಗಳಿಗೆ ‘ಈ ಆಸನದ ಸ್ಥಳದಲ್ಲಿ ತಮ್ಮ ಚೈತನ್ಯಮಯ ವಾಸ್ತವ್ಯವಿರಲಿ ಎಂದು ಪ್ರಾರ್ಥನೆ ಮಾಡಬೇಕು.
ಗಣೇಶ ಚತುರ್ಥಿಯನ್ನು ಕುಟುಂಬದಲ್ಲಿ ಯಾರು ಆಚರಿಸಬೇಕು, ಗಣೇಶ ಚತುರ್ಥಿಯನ್ನು ಆಚರಿಸುವುದರ ಮಹತ್ವವೇನು, ಗಣೇಶ ಚತುರ್ಥಿಯಂದು ನೂತನ ಮೂರ್ತಿಯನ್ನು ಏಕೆ ತರಬೇಕು, ಗಣೇಶ ಮೂರ್ತಿಯು ಭಂಗವಾದರೆ ಅದರ ಪರಿಹಾರಗಳೇನು ಈ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.
ಹಾಗೆಯೇ ಮೂರ್ತಿಯ ಕೆಳಗಿರುವ ಅಕ್ಕಿಯಲ್ಲಿ ಶಕ್ತಿಯಿಂದ ಸ್ಪಂದನಗಳು ಉಂಟಾದಾಗ ಮನೆಯಲ್ಲಿರುವ ಅಕ್ಕಿಯ ಸಂಗ್ರಹದಲ್ಲಿಯೂ ಶಕ್ತಿಯ ಸ್ಪಂದನಗಳು ಉಂಟಾಗುತ್ತವೆ. ಈ ರೀತಿ ಶಕ್ತಿಯುತ ಅಕ್ಕಿಯನ್ನು ವರ್ಷಪೂರ್ತಿ ಪ್ರಸಾದವೆಂದು ಸೇವಿಸಬಹುದು.
ಉತ್ಸವಮಂಟಪಕ್ಕೆ ಸಂಬಂಧಿಸಿದ ತಪ್ಪು ಆಚರಣೆಗಳು : ಮಂಟಪವನ್ನು ತಯಾರಿಸುವಾಗ ಬೆಂಕಿ ತಗಲುವ ವಸ್ತುಗಳನ್ನು ಉಪಯೋಗಿಸುವುದು, ಮೂರ್ತಿಯ ಅಲಂಕಾರ, ವಿದ್ಯುತ್ ಅಲಂಕಾರ ಇತ್ಯಾದಿಗಳಿಗಾಗುವ ಅನಾವಶ್ಯಕ ಖರ್ಚು, ಮಂಟಪಗಳಲ್ಲಿ ಜೂಜಾಡುವುದು
ಹೇ ಬುದ್ಧಿದಾತಾ, ಶ್ರೀ ಗಣೇಶಾ, ನನಗೆ ಸದ್ಬುದ್ಧಿಯನ್ನು ಪ್ರಧಾನಿಸು. ಹೇ ವಿಘ್ನಹರ್ತಾ, ನನ್ನ ಜೀವನದಲ್ಲಿ ಬರುವ ಸಂಕಟಗಳನ್ನು ನಿವಾರಿಸು. ದಿನವಿಡೀ ಉತ್ಸಾಹದಿಂದ ಕೆಲಸ-ಕಾರ್ಯಗಳನ್ನು ಮಾಡಲು ನನಗೆ ಅವಶ್ಯಕವಿದ್ದಷ್ಟು ಪ್ರಾಣಶಕ್ತಿಯನ್ನು ನೀಡು.
ಶ್ರೀ ಗಣೇಶ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಿಂದ ಉತ್ತರ ಪೂಜೆಯ ವರೆಗಿನ ಎಲ್ಲ ವಿಧಿಗಳನ್ನು ಯೋಗ್ಯ ರೀತಿಯಲ್ಲಿ ಹೇಗೆ ಮಾಡಬೇಕು, ಗಣೇಶ ಪೂಜೆಗಾಗಿ ಯಾವ ವಸ್ತುಗಳು ಎಷ್ಟು ಪ್ರಮಾಣದಲ್ಲಿರಬೇಕು, ಎಂಬ ಕುರಿತು ವಿವೇಚನೆಯನ್ನು ಈ ಕಿರುಗ್ರಂಥದಲ್ಲಿ ಅರ್ಥಸಹಿತ ಕೊಡಲಾಗಿದೆ.
ದೇವತೆಗಳ ಹೆಸರಿನ ಅಥವಾ ರೂಪದ ರಂಗೋಲಿಯನ್ನು ಬಿಡಿಸದೇ, ಸ್ವಸ್ತಿಕ ಅಥವಾ ಬಿಂದುಗಳಿಂದ ರಂಗೋಲಿಯನ್ನು ಬಿಡಿಸಬೇಕು.
ಶ್ರೀ ಗಣೇಶನು ಕುಂಭಾಸುರನನ್ನು ವಧಿಸಲು ಭೀಮನಿಗೆ ಖಡ್ಗವನ್ನು ನೀಡಿದನು. ಭೀಮನು ಆ ಖಡ್ಗದಿಂದ ಕುಂಭಾಸುರನನ್ನು ವಧಿಸಿ ಅಗಸ್ತಿಋಷಿಗಳ ಯಜ್ಞದಲ್ಲಿನ ವಿಘ್ನವನ್ನು ದೂರಗೊಳಿಸಿದನು. ‘ಕುಂಭಾಶಿ ಹೆಸರು ಕುಂಭಾಸುರನ ಹೆಸರಿನಿಂದ ಪ್ರಚಲಿತವಾಗಿರಬಹುದು’, ಎನ್ನುತ್ತಾರೆ.
ಮೂರ್ತಿಯನ್ನು ತರುವಾಗ ಅದರ ಮೇಲೆ ರೇಷ್ಮೆ, ಹತ್ತಿ ಖಾದಿಯ ಸ್ವಚ್ಛ ಬಟ್ಟೆಯನ್ನು ಹಾಕಬೇಕು. ಮೂರ್ತಿಯನ್ನು ಮನೆಗೆ ತರುವಾಗ ಮೂರ್ತಿಯ ಮುಖವು ತರುವವನ ಕಡೆಗೆ ಮತ್ತು ಬೆನ್ನು ಮುಂದಿನ ಬದಿಗಿರಬೇಕು. ಮೂರ್ತಿಯ ಮುಂಭಾಗದಿಂದ ಸಗುಣ ತತ್ತ್ವ ಮತ್ತು ಹಿಂಭಾಗದಿಂದ ನಿರ್ಗುಣ ತತ್ತ್ವ ಪ್ರಕ್ಷೇಪಿಸುತ್ತಿರುತ್ತದೆ.
ಇದರಲ್ಲಿ ಧಾತುವಿನ (ಲೋಹದ), ಮಣ್ಣಿನ ಪ್ರತಿಮೆಯನ್ನು ಮಾಡಿ ಅಥವಾ ಕಾಗದದ ಮೇಲೆ ಶ್ರೀ ಲಕ್ಷ್ಮೀಯ ಚಿತ್ರವನ್ನು ಬಿಡಿಸಿ, ಮತ್ತೆ ಕೆಲವು ಕಡೆಗಳಲ್ಲಿ ನದಿ ದಡದಿಂದ ಐದು ಸಣ್ಣ ಕಲ್ಲುಗಳನ್ನು ತಂದು ಅವುಗಳನ್ನು ಗೌರಿ ಎಂದು ಪೂಜಿಸುತ್ತಾರೆ.