ಬಂದಿದೆ ಹಬ್ಬ ಶ್ರೀ ಗಣೇಶನ, ಧರ್ಮಶಾಸ್ತ್ರ ಅರಿತು ಪಡೆಯೋಣ ಅವನ ಕೃಪಾಶೀರ್ವಾದ !

ಭಾದ್ರಪದ ಪಕ್ಷ ಚತುರ್ಥಿ (೩೧.೮.೨೦೨೨)

೧. ಶ್ರೀ ಗಣೇಶ ಚತುರ್ಥಿಯ ಮಹತ್ವ

ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುರ್ಣಿಮೆಯವರೆಗಿನ ೧೨೦ ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಹೆಚ್ಚು ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರು ತ್ತವೆ. ಈ ಕಾಲದಲ್ಲಿ ಅವುಗಳ ತೀವ್ರತೆಯೂ ಹೆಚ್ಚಿರುತ್ತದೆ. ಈ ತೀವ್ರತೆಯ ಕಾಲದಲ್ಲಿ, ಅಂದರೆ ಭಾದ್ರಪದ ಶುಕ್ಲ ಚತುರ್ಥಿಯಿಂದ ಅನಂತ ಚತುರ್ದಶಿಯ ವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಯಮಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ.

ಶ್ರೀ ಗಣೇಶ ಚತುರ್ಥಿಯ ದಿನ ಹಾಗೆಯೇ ಗಣೇಶೋತ್ಸವದ ದಿನಗಳಲ್ಲಿ ಗಣೇಶತತ್ತ್ವವು ದಿನನಿತ್ಯದ ತುಲನೆಯಲ್ಲಿ ಪೃಥ್ವಿಯ ಮೇಲೆ ಒಂದು ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ಸಮಯದಲ್ಲಿ ಮಾಡಿದ ಗಣೇಶನ ಉಪಾಸನೆಯಿಂದ ಗಣೇಶತತ್ತ್ವದ ಹೆಚ್ಚು ಲಾಭವಾಗುತ್ತದೆ.

೨. ಶಾಸ್ತ್ರೋಕ್ತ ವಿಧಿ ಮತ್ತು ರೂಢಿಗಳ ಅವಧಿ

ಶಾಸ್ತ್ರಾನುಸಾರ ಭಾದ್ರಪದ ಶುಕ್ಲ ಚತುರ್ಥಿಗೆ ಮಣ್ಣಿನಿಂದ ಮಾಡಿದ ಶ್ರೀ ಗಣೇಶಮೂರ್ತಿಯನ್ನು ತಯಾರಿಸಬೇಕು. ಅದನ್ನು ಎಡ ಕೈಯಲ್ಲಿಟ್ಟು ಸಿದ್ಧಿವಿನಾಯಕನ ಹೆಸರಿನಲ್ಲಿ ಮೂರ್ತಿಗೆ ಪ್ರಾಣಪ್ರತಿಷ್ಠೆ ಮತ್ತು ಪೂಜೆ ಮಾಡಬೇಕು ಹಾಗೂ ಕೂಡಲೇ ಅದನ್ನು ವಿಸರ್ಜನೆ ಮಾಡಬೇಕು. ಕುಲಾಚಾರಕ್ಕನುಸಾರ ಶ್ರೀ ಗಣೇಶ ಮೂರ್ತಿಯನ್ನು ಒಂದೂವರೆ, ಐದು, ಏಳು, ಹತ್ತು ಅಥವಾ ಹನ್ನೊಂದು ದಿನ ಪೂಜಿಸುತ್ತಾರೆ ಹಾಗೂ ಎರಡನೇ, ಐದನೇ, ಏಳನೇ ಅಥವಾ ಹತ್ತನೇ ದಿನ ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ.

೩. ಮೂರ್ತಿಯ ಸ್ಥಾಪನೆ ಮಾಡುವ ಮೊದಲು ಆಸನದ ಮೇಲೆ ಸ್ವಲ್ಪ ಅಕ್ಕಿಯನ್ನು ಯಾಕೆ ಇಡುತ್ತಾರೆ ?

ಪೂಜೆಗಿಂತ ಮೊದಲು, ಮೂರ್ತಿಯನ್ನು ಸ್ಥಾಪನೆ ಮಾಡಬೇಕಾಗಿರುವ ಮಣೆಯ ಮೇಲೆ ಅಕ್ಕಿಯನ್ನಿಟ್ಟು ಅದರ ಮೇಲೆ ಮೂರ್ತಿಯನ್ನಿಡು ತ್ತಾರೆ. ತಮ್ಮ ತಮ್ಮ ಪದ್ಧತಿಗನುಸಾರ ಸ್ವಲ್ಪ ಅಕ್ಕಿಯನ್ನಿಡುತ್ತಾರೆ ಅಥವಾ ಅಕ್ಕಿಯ ಸಣ್ಣ ರಾಶಿಯನ್ನು ಮಾಡುತ್ತಾರೆ. ಮೂರ್ತಿಯನ್ನು ಅಕ್ಕಿಯ ಮೇಲಿಡುವುದರಿಂದ ಮುಂದಿನಂತೆ ಲಾಭವಾಗುತ್ತದೆ. ಮೂರ್ತಿಯಲ್ಲಿ ಗಣಪತಿಯ ಆವಾಹನೆ ಮಾಡಿ ಅದನ್ನು ಪೂಜಿಸುವುದರಿಂದ ಮೂರ್ತಿಯಲ್ಲಿ ಶಕ್ತಿಯು ಬರುತ್ತದೆ. ಅದರಿಂದ ಅಕ್ಕಿಯು ಶಕ್ತಿಯುತವಾಗುತ್ತದೆ. ಸಮಾನ ಕಂಪನ ಸಂಖ್ಯೆಯ ಎರಡು ತಂಬೂರಿಗಳ ಎರಡು ತಂತಿಗಳಿದ್ದರೆ ಒಂದು ತಂತಿಯಿಂದ ಧ್ವನಿಯನ್ನು ಹೊರಡಿಸಿದರೆ ಎರಡನೆಯ ತಂತಿಯಿಂದಲೂ ಅಂತಹ ಧ್ವನಿಯೇ ಹೊರಡುತ್ತದೆ. ಹಾಗೆಯೇ ಮೂರ್ತಿಯ ಕೆಳಗಿರುವ ಅಕ್ಕಿಯಲ್ಲಿ ಶಕ್ತಿಯಿಂದ ಸ್ಪಂದನಗಳು ಉಂಟಾದಾಗ ಮನೆಯಲ್ಲಿರುವ ಅಕ್ಕಿಯ ಸಂಗ್ರಹದಲ್ಲಿಯೂ ಶಕ್ತಿಯ ಸ್ಪಂದನಗಳು ಉಂಟಾಗುತ್ತವೆ. ಈ ರೀತಿ ಶಕ್ತಿಯುತ ಅಕ್ಕಿಯನ್ನು ವರ್ಷಪೂರ್ತಿ ಪ್ರಸಾದವೆಂದು ಸೇವಿಸಬಹುದು.

೪. ಗಣೇಶ ಚತುರ್ಥಿಯ ದಿನ ಚಂದ್ರನ ದರ್ಶನವನ್ನು ಪಡೆದುಕೊಳ್ಳದಿರುವುದು

ಮನಸ್ಸಿನ ಚಂಚಲತೆಯು ಸುಮಾರು ಒಂದು ವರ್ಷದವರೆಗೆ ಉಳಿಯುತ್ತದೆ. ಮನಸ್ಸಿನ ಚಂಚಲತೆಯ ಪ್ರಚಂಡ ಪ್ರಭಾವದಿಂದಾಗಿ ಯಾವುದಾದರೊಂದು ಘಟನೆಯು ಘಟಿಸುವ ಮೊದಲೇ ಅದು ಘಟಿಸಿ ಹೋಗಿದೆ ಎಂಬ ತಪ್ಪುತಿಳುವಳಿಕೆ ಅಥವಾ ಗಾಳಿ ಸುದ್ದಿ ಹರಡುವ ಸಾಧ್ಯತೆ ಇರುತ್ತದೆ. ಇದನ್ನೇ ಯಾವುದಾದರೊಂದು ಅಡಚಣೆಯನ್ನು ಮೈಮೇಲೆ ಎಳೆದುಕೊಳ್ಳುವುದು ಎಂದು ಹೇಳುತ್ತಾರೆ. ಈ ಕಾರಣಕ್ಕಾಗಿ ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡುವುದು ಅಶುಭವೆಂದು ತಿಳಿದುಕೊಳ್ಳುತ್ತಾರೆ.

೫. ಜ್ಯೋತಿಷ್ಯ ಮತ್ತು ಚಂದ್ರದರ್ಶನ

ಗಣೇಶ ಚತುರ್ಥಿಯ ದಿನದಂದು ಯಾವ ವ್ಯಕ್ತಿಯ ರಾಶಿಯಲ್ಲಿ ಯಾವುದೇ ಸ್ಥಾನದಲ್ಲಿ ಚಂದ್ರನಿದ್ದರೆ ಅವನು ಚಂದ್ರದರ್ಶನವನ್ನು ಮಾಡಲೇಬಾರದು. ಇಂತಹ ವ್ಯಕ್ತಿಯು ನೀರಿನಲ್ಲಿ ಕಾಣಿಸುವ ಚಂದ್ರನ ಪ್ರತಿಬಿಂಬವನ್ನು ಸಹ ನೋಡಬಾರದು. ಏಕೆಂದರೆ ನೀರಿನಿಂದ ನೆನೆದಿರುವ ಮಣ್ಣಿನಲ್ಲಿಯೂ ಪ್ರಜನನ ಶಕ್ತಿಯು ಹೆಚ್ಚಾಗಿರುವುದರಿಂದ ಅಲ್ಲಿಯೂ ಪ್ರಚಂಡ ಪ್ರಮಾಣದಲ್ಲಿ ರಜೋಗುಣವು ನಿರ್ಮಾಣವಾಗಿರುತ್ತದೆ. (ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆ ನಿರ್ಮಿತ ‘ಶ್ರೀ ಗಣಪತಿ’ ಗ್ರಂಥವನ್ನು ಓದಿ.)