ಆಗಸ್ಟ್ ೩೧ ರಿಂದ ಇರುವ ಶ್ರೀ ಗಣೇಶೋತ್ಸವದ ನಿಮಿತ್ತ …
ಅ. ಪೂಜೆಯ ಮೊದಲು ಮಡಿವಸ್ತ್ರ ಅಥವಾ ಪೀತಾಂಬರ ಅಥವಾ ಮಡಿವಸ್ತ್ರ (ಧೋತರ) ಮತ್ತು ಉತ್ತರೀಯವನ್ನು ಧರಿಸಿರಬೇಕು.
ಆ. ಪೂಜೆಯನ್ನು ಆರಂಭಿಸುವ ಮೊದಲು ಮನೆಯಲ್ಲಿನ ಹಿರಿಯರಿಗೆ ಮತ್ತು ಪುರೋಹಿತರಿಗೆ ನಮಸ್ಕಾರ ಮಾಡಿ ಅವರ ಆಶೀರ್ವಾದ ಪಡೆಯಬೇಕು.
ಇ. ಪೂಜೆಗಾಗಿ ಮಣೆಯ ಮೇಲೆ ಕುಳಿತುಕೊಳ್ಳುವ ಮೊದಲು ನಿಂತು ಕೊಂಡು ಭೂಮಿ ಮತ್ತು ದೇವತೆ ಗಳಿಗೆ ‘ಈ ಆಸನದ ಸ್ಥಳದಲ್ಲಿ ತಮ್ಮ ಚೈತನ್ಯಮಯ ವಾಸ್ತವ್ಯವಿರಲಿ ಎಂದು ಪ್ರಾರ್ಥನೆ ಮಾಡಬೇಕು.
ಈ. ಪೂಜೆ ಮಾಡುವಾಗ ‘ದೇವತೆಯು ತಮ್ಮೆದುರಿಗೆ ಪ್ರತ್ಯಕ್ಷ ಪ್ರಕಟವಾಗಿ ಆಸೀನಳಾಗಿದ್ದಾಳೆ ಮತ್ತು ನಾವು ಅನನ್ಯ ಶರಣಾಗತ ಭಾವದಿಂದ ಮಾಡುತ್ತಿರುವ ಪೂಜೆಯನ್ನು ಅವಳು ಸ್ವೀಕರಿಸುತ್ತಿದ್ದಾಳೆ, ಎಂಬ ಭಾವವನ್ನಿಡಬೇಕು ಮತ್ತು ಈ ಭಾವದಿಂದ ಪ್ರತಿಯೊಂದು ಉಪಚಾರವನ್ನು ದೇವತೆಯ ಚರಣಗಳಲ್ಲಿ ಅರ್ಪಿಸಬೇಕು.
ಉ. ಪ್ರತಿದಿನ ಬೆಳಗ್ಗೆ ಮೂರ್ತಿಯ ಮೇಲಿನ ನೈರ್ಮಾಲ್ಯವನ್ನು ತೆಗೆದು ಶೋಡಷೋಪಚಾರ ಪೂಜೆಯನ್ನು ಮಾಡಬೇಕು. ಸಾಯಂಕಾಲ ಶೋಡ ಷೋಪಚಾರ ಪೂಜೆ ಅಥವಾ ಪಂಚೋಪಚಾರ ಪೂಜೆ ಮಾಡಬೇಕು.
ಊ. ಪೂಜೆಯಲ್ಲಿನ ಶ್ಲೋಕ ಅಥವಾ ಮಂತ್ರವನ್ನು ಉಚ್ಚರಿಸಲು ಬರದವರು ಕೇವಲ ನಾಮಮಂತ್ರ ಉಚ್ಚರಿಸಿ ದೇವತೆಗೆ ಉಪಚಾರ ಸಮರ್ಪಿಸಬೇಕು, ಉದಾ. (ಆಸನಕ್ಕಾಗಿ ಅಕ್ಷತೆ ಅರ್ಪಿಸುವಾಗ) ‘ಶ್ರೀ ಮಹಾಗಣಪತಯೇ ನಮಃ| ಆಸನಾರ್ಥೇ ಅಕ್ಷತಾನ್ ಸಮರ್ಪಯಾಮಿ ||, ಎಂದು ಹೇಳಬೇಕು.
ಋ. ಪಾದ್ಯ, ಅರ್ಘ್ಯ, ಪಂಚಾಮೃತ ಇತ್ಯಾದಿ ಉಪಚಾರ ಗಳನ್ನು ಎರಡೆರಡು ದೂರ್ವೆಯೊಂದಿಗೆ ಮಾಡಬೇಕು. ಒಂದು ಉಪಚಾರ ಮುಗಿದ ಮೇಲೆ ಕೈಯಲ್ಲಿರುವ ದೂರ್ವೆಯನ್ನು ತಟ್ಟೆಯಲ್ಲಿ ವಿಸರ್ಜಿಸಿ ಮುಂದಿನ ಉಪಚಾರಕ್ಕಾಗಿ ಹೊಸ ದೂರ್ವೆಯನ್ನು ತೆಗೆದುಕೊಳ್ಳಿ.
ಎ. ಮಣ್ಣಿನ ಮೂರ್ತಿಗೆ ಪಾದ್ಯ, ಅರ್ಘ್ಯ, ಅಭಿಷೇಕ ಇತ್ಯಾದಿ ಉಪಚಾರಗಳನ್ನು ಮಾಡುವಾಗ ದೂರ್ವೆಯಿಂದ ಪ್ರೋಕ್ಷಣೆ ಮಾಡಬೇಕು. ಧಾತು ವಿನ ಮೂರ್ತಿಯಿದ್ದಲ್ಲಿ ಮೂರ್ತಿಯ ಮೇಲೆ ಉಪಚಾರಗಳನ್ನು ಮಾಡಬಹುದು.
ಶ್ರೀಗಣೇಶ ಮೂರ್ತಿಯ ಅಲಂಕಾರ ಹೀಗಿರಲಿ !ಇತ್ತೀಚೆಗೆ ಗಣೇಶೋತ್ಸವಕ್ಕಾಗಿ ಮಾಡಲಾಗುವ ಅಲಂಕಾರಕ್ಕಾಗಿ ವಿವಿಧ ರೀತಿಯ ಬಣ್ಣಗಳಿಂದ ಹಾಗೂ ಮಿನುಗುವ ಕಾಗದ, ಥರ್ಮಾಕೋಲ್, ಪ್ಲಾಸ್ಟಿಕ್ ಮುಂತಾದವುಗಳನ್ನು ಉಪಯೋಗಿಸಲಾಗುತ್ತದೆ. ಅಲ್ಲದೇ ಬಣ್ಣಬಣ್ಣದ ವಿದ್ಯುತ್ ದೀಪಗಳ ಮಾಲೆಯನ್ನೂ ಬಳಸಲಾಗುತ್ತದೆ. ಈ ವಸ್ತುಗಳನ್ನು ಕೃತಕ ಹಾಗೂ ರಾಸಾಯನಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಹಾಗಾಗಿ ಈ ವಸ್ತುಗಳಲ್ಲಿ ರಜ-ತಮದ ಪ್ರಮಾಣವು ಹೆಚ್ಚಿರುತ್ತದೆ ಅಲ್ಲದೇ ಅಂತಹವುಗಳು ವಾತಾವರಣದಲ್ಲಿನ ರಜತಮವನ್ನು ಆಕರ್ಷಿಸಿ ಅಲ್ಲಿನ ಪರಿಸರವನ್ನು ರಜ-ತಮಯುಕ್ತಗೊಳಿಸುತ್ತದೆ. ಆಧ್ಯಾತ್ಮಿಕ ದೃಷ್ಟಿಯಿಂದ ಪ್ರತಿಯೊಂದು ದೇವತೆಯಲ್ಲಿ ಒಂದು ವಿಶಿಷ್ಟ ತತ್ತ್ವವಿರುತ್ತದೆ. ಹಾಗಾಗಿ ಗಣೇಶ ಚತುರ್ಥಿಯಂದು ಪೃಥ್ವಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ಬರುವ ಗಣೇಶತತ್ತ್ವವನ್ನು ಆಕರ್ಷಿಸುವ ಸಾತ್ವಿಕ ವಸ್ತುಗಳನ್ನು ಬಳಸಬೇಕು. ಅದಕ್ಕೆ ಕೆಳಗಿನ ವಸ್ತುಗಳನ್ನು ಬಳಸಿರಿ. * ನೈಸರ್ಗಿಕ ಹೂವು-ಎಲೆಗಳಿಂದ ತಯಾರಿಸಿದ ತೋರಣಗಳು * ಕೆಂಪು ಬಣ್ಣದ ಹೂವು ಹಾಗೂ ದೂರ್ವೆ, ಶಮಿಯ ಎಲೆಗಳು * ಶ್ರೀಗಣೇಶನತತ್ತ್ವವನ್ನು ಆಕರ್ಷಿಸುವ ರಂಗೋಲಿ * ಶ್ರೀಗಣೇಶನ ಸಾತ್ವಿಕ ನಾಮಜಪದ ಪಟ್ಟಿಗಳು ಇತ್ಯಾದಿ. |
ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಸಾತ್ತ್ವಿಕವಾಗಿರುತ್ತದೆಮೂರ್ತಿಯು ದೇವರ ಮೂಲ ರೂಪದೊಂದಿಗೆ ಎಷ್ಟು ಹೋಲುತ್ತದೆಯೋ, ಅಷ್ಟೇ ಹೆಚ್ಚು ಪ್ರಮಾಣದಲ್ಲಿ ಆ ದೇವತೆಯ ತತ್ತ್ವವು ಮೂರ್ತಿಯ ಕಡೆಗೆ ಆಕರ್ಷಿತ ವಾಗುತ್ತದೆ. ಋಷಿಮುನಿಗಳು ಶಾಸ್ತ್ರಗಳನ್ನು ಬರೆದಿದ್ದಾರೆ. ಅವರಿಗೆ ದೇವತೆಗಳ ಸಾಕ್ಷಾತ್ಕಾರವು ಹೇಗೆ ಆಗಿದೆಯೋ, ಹಾಗೇ ಅವರು ದೇವತೆಗಳನ್ನು ಶಾಸ್ತ್ರದಲ್ಲಿ ವರ್ಣಿಸಿದ್ದಾರೆ; ಆದುದರಿಂದ ಶಾಸ್ತ್ರದಲ್ಲಿ ಹೇಳಿದಂತೆ ಮೂರ್ತಿಯನ್ನು ತಯಾರಿಸಿದರೆ ಅದು ಸಾತ್ತ್ವಿಕವಾಗುತ್ತದೆ. |