ಭಾರತವನ್ನು ‘ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು, ಇದೇ ನಮ್ಮ ಬೇಡಿಕೆಯಾಗಿದೆ ! – ಮಹಾಮಂಡಲೇಶ್ವರ ಮಹಂತ ಶ್ರೀ ಶ್ರೀ ೧೦೦೮ ಶ್ರೀ ರಘುವೀರ ದಾಸ ಮಹಾತ್ಯಾಗೀಜಿ, ಅಖನೂರ, ಜಮ್ಮು-ಕಾಶ್ಮೀರ

ಪ್ರತಿಯೊಂದು ದೇಶವು ಅಲ್ಲಿನ ಧರ್ಮಕ್ಕನುಸಾರ ನಡೆಯುತ್ತದೆ; ಆದರೆ ಭಾರತದಲ್ಲಿ ಹೀಗಾಗುವುದಿಲ್ಲ. ಜಗತ್ತಿನಲ್ಲಿ ಒಂದೂ ‘ಹಿಂದೂ ರಾಷ್ಟ್ರವಿಲ್ಲ. ಭಾರತವನ್ನೂ ಇಂದಿಗೂ ‘ಹಿಂದೂ ರಾಷ್ಟ್ರವೆಂದು ಘೋಷಿಸಲಾಗಿಲ್ಲ. ಮೋದಿ ಸರಕಾರವು ಈ ಕಾರ್ಯವನ್ನು ಆದಷ್ಟು ಬೇಗನೆ ಮಾಡಬೇಕು.

ಹರಿದ್ವಾರವನ್ನು ಹಿಂದೂಯೇತರರಿಂದ ರಕ್ಷಿಸುವುದು ಅವಶ್ಯಕ ! – ಸ್ವಾಮಿ ಅವಧೇಶಾನಂದ, ಜುನಾ ಅಖಾಡ

ಉತ್ತರಾಖಂಡವನ್ನು ಉತ್ತರ ಪ್ರದೇಶದಿಂದ ಬೇರ್ಪಡಿಸಿದ ನಂತರ, ಹರಿದ್ವಾರದ ‘ಹರಕಿ ಪೌಡಿ’ಯ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಮುಸಲ್ಮಾನರು ಭೂಮಿಯನ್ನು ಖರೀದಿಸಲು ಅಥವಾ ಬಾಡಿಗೆಗೆ ನೀಡಲು ಸಾಧ್ಯವಿಲ್ಲ ಎಂಬ ಕಾನೂನು ಜಾರಿಗೆ ಬಂದಿತ್ತು; ಆದರೆ ಪ್ರಸ್ತುತ, ಮುಸಲ್ಮಾನರು ಈ ಪ್ರದೇಶವನ್ನು ಅಕ್ರಮವಾಗಿ ಅತಿಕ್ರಮಿಸಿದ್ದಾರೆ.

ಚಾರ್ ಧಾಮ್ ಸಹಿತ ೫೧ ದೊಡ್ಡ ದೇವಾಲಯಗಳನ್ನು ಶೀಘ್ರದಲ್ಲೇ ಸರಕಾರಿಕರಣದಿಂದ ಮುಕ್ತಗೊಳಿಸಲಾಗುವುದು !

ರಾಜ್ಯದ ಮುಖ್ಯಮಂತ್ರಿ ತಿರಥಸಿಂಹ ರಾವತ ಇವರು, ಬದ್ರಿನಾಥ, ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಈ ಚಾರ್ ಧಾಮ್ಗಳು ಸೇರಿದಂತೆ ೫೧ ದೊಡ್ಡ ದೇವಾಲಯಗಳನ್ನು ಶೀಘ್ರದಲ್ಲೇ ದೇವಸ್ಥಾನ ಬೋರ್ಡ್‍ನಿಂದ ಅಂದರೆ ಸರಕಾರಿಕರಣದಿಂದ ಮುಕ್ತಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.

ಕುಂಭಮೇಳದಲ್ಲಿ ದಿನಕ್ಕೆ ೫೦ ಸಾವಿರ ಕೊರೋನಾ ಪರೀಕ್ಷೆ ಮಾಡುವಂತೆ ಉತ್ತರಾಖಂಡ ಉಚ್ಚನ್ಯಾಯಾಲಯದ ಆದೇಶ

ಹರಿದ್ವಾರದಲ್ಲಿ ಏಪ್ರಿಲ್ ೧ ರಿಂದ ಪ್ರಾರಂಭವಾಗುವ ಕುಂಭಮೇಳದಲ್ಲಿ ಪ್ರತಿದಿನ ೫೦ ಸಾವಿರ ಕೊರೋನಾದ ಪರೀಕ್ಷಣೆಯನ್ನು ನಡೆಸಲು ಉತ್ತರಾಖಂಡ ಉಚ್ಚ ನ್ಯಾಯಾಲಯವು ಆದೇಶಿಸಿದೆ.