ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ (‘ಎಫ್‌ಸಿಆರ್‌ಎ’) ನಿಯಮಗಳಲ್ಲಿ ಬದಲಾವಣೆ

ನವದೆಹಲಿ – ಕೇಂದ್ರ ಸರಕಾರವು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ (‘ಎಫ್‌ಸಿಆರ್‌ಎ’ – ಫಾರಿನ್ ಕಾಂಟ್ರಿಬ್ಯೂಷನ್ ರೆಗ್ಯುಲೇಷನ್ ಆಕ್ಟ್) ನಿಯಮಗಳಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿದೆ. ಹೊಸ ತಿದ್ದುಪಡಿಗಳ ಪ್ರಕಾರ, ಮತಾಂತರವನ್ನು ಇನ್ನು ಮುಂದೆ ಶ್ರದ್ಧಾ ಆಧಾರಿತ ಕೃತ್ಯಗಳ ಭಾಗವೆಂದು ಪರಿಗಣಿಸಲಾಗುವುದಿಲ್ಲ. ಸರಕಾರದ ಈ ನಡೆಯು ವಿದೇಶಿ ದೇಣಿಗೆಗಳ ಮೂಲಕ ಮತಾಂತರದ ಸಂಚು ರೂಪಿಸುವ ಅಂತಹ ಖಾಸಗಿ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಸಂಸ್ಥೆಗಳ ಮೇಲೆ ನೇರ ಪರಿಣಾಮ ಬೀರಲಿದೆ.
🚨🇮🇳 Big Blow to Conversion Networks Using Foreign Funds!
The MHA has amended FCRA rules, making it clear that religious conversion is NOT a faith-based activity.
✅ Worship, prayer meetings, religious education, and spiritual programs remain permitted.
❌ Conversion… pic.twitter.com/yd7cNpeqDL
— Sanatan Prabhat (@SanatanPrabhat) June 23, 2026
೧. ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ, ಹೊಸ ನಿಯಮಗಳ ಪ್ರಕಾರ ಧರ್ಮ ಶಿಕ್ಷಣ, ಪೂಜೆ-ಅರ್ಚನೆ, ಪ್ರಾರ್ಥನಾ ಸಭೆಗಳು, ಆಧ್ಯಾತ್ಮಿಕ ಕಾರ್ಯಕ್ರಮಗಳು, ಧಾರ್ಮಿಕ ಸಾಹಿತ್ಯದ ಜ್ಞಾನ ನೀಡುವುದು ಅಥವಾ ಸಮುದಾಯ ಆಧಾರಿತ ಧಾರ್ಮಿಕ ಸೇವೆಗಳು ಶ್ರದ್ಧಾ ಆಧಾರಿತ ಕೃತ್ಯಗಳ ವರ್ಗದಲ್ಲಿರುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ.
೨. ಆದಾಗ್ಯೂ, ಯಾವುದೇ ವ್ಯಕ್ತಿಯ ಮೇಲೆ ಧರ್ಮ ಪರಿವರ್ತನೆಗಾಗಿ ಒತ್ತಡ ಹೇರುವುದು, ಆತನನ್ನು ಪ್ರಭಾವಿಸುವುದು ಅಥವಾ ಧರ್ಮ ಬದಲಾಯಿಸಲು ಅಭಿಯಾನ ನಡೆಸುವುದು ‘ಧಾರ್ಮಿಕ ಸೇವೆ’ ಎಂಬ ವರ್ಗದಿಂದ ಹೊರಗಿದೆ ಎಂದು ಪರಿಗಣಿಸಲಾಗುತ್ತದೆ.
೩. ಒಂದು ವೇಳೆ ಯಾವುದೇ ಸಂಸ್ಥೆಯು ವಿದೇಶಿ ದೇಣಿಗೆಗಳನ್ನು ಧರ್ಮ ಪ್ರಸಾರ ಅಥವಾ ಮತಾಂತರಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಬಳಸುತ್ತಿರುವುದು ಕಂಡುಬಂದರೆ, ಆ ಸಂಸ್ಥೆಯ ವಿರುದ್ಧ ಈ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದು.
೪. ಇಂತಹ ಪ್ರಕರಣಗಳಲ್ಲಿ ದೇಣಿಗೆಗಳ ಬಳಕೆಯ ತನಿಖೆ, ಪರವಾನಗಿಗೆ ಸಂಬಂಧಿಸಿದ ಕ್ರಮ ಅಥವಾ ಇತರ ಕಾನೂನು ಕ್ರಮಗಳನ್ನು ಕೈಗೊಳ್ಳಬಹುದು.
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!
ಆದಿವಾಸಿಗಳ ಮನೆ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ: ಪೊಲೀಸ್ ಮಧ್ಯಸ್ಥಿಕೆ ಬಳಿಕ ಕೆಲಸ ಪುನರಾರಂಭ
ಅಕೋಲಾ: ಗೋರಕ್ಷಕರೊಂದಿಗೆ ವಾದಕ್ಕಿಳಿದ ಮುಸಲ್ಮಾನರು; ಮುಸಲ್ಮಾನನನ್ನು ಬಿಟ್ಟಿದ್ದಾರೆಂದು ಆರೋಪಿಸಿದ ಭಾಜಪ!
ಮಹಾರಾಷ್ಟ್ರ: ೪ ತಿಂಗಳಲ್ಲಿ ೨೫೪ ಕೋಟಿ ೫೩ ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿ! – ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್
೫ ರಾಜ್ಯಗಳಲ್ಲಿ ಲವ್ ಜಿಹಾದ್ ನ ೭ ಪ್ರಕರಣಗಳು ಬೆಳಕಿಗೆ!