ಜಾಲನಾ ಜಿಲ್ಲೆಯ ಶಾಲೆಯೊಂದರಲ್ಲಿ ತಲೆ ಕಡಿಯುವ ಇಸ್ಲಾಮಿಕ್ ಹಾಡಿಗೆ ನೃತ್ಯ ಪ್ರದರ್ಶನ ನೀಡಿದ ಪ್ರಕರಣ
ರಾಷ್ಟ್ರೀಯ ಮಟ್ಟದ ಹಿಂದೂ ಸಂಘಟನೆಯ ಪರಿಣಾಮ !

ಜಾಲನಾ – ಜಾಲನಾ ಜಿಲ್ಲೆಯ ಪರತೂರು ಪಟ್ಟಣದಲ್ಲಿರುವ ‘ಕಿಡ್ಸ್ ವರ್ಲ್ಡ್ ಇಂಗ್ಲಿಷ್ ಸ್ಕೂಲ್’ನಲ್ಲಿ ಫೆಬ್ರವರಿ 2025 ರಲ್ಲಿ ವಿದ್ಯಾರ್ಥಿಗಳು ‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ, ಸರ್ ತನ್ ಸೆ ಜುದಾ’ (ಮುಹಮ್ಮದ್ ಪೈಗಂಬರರನ್ನು ಅವಮಾನಿಸಿದ್ದಕ್ಕೆ ಒಂದೇ ಶಿಕ್ಷೆ – ತಲೆ ಕಡಿಯುವುದು) ಎಂಬ ಪಾಕಿಸ್ತಾನಿ ಇಸ್ಲಾಮಿಕ್ ಹಾಡಿಗೆ ನೃತ್ಯ ಮಾಡಿರುವ ವಿಷಯ ಕಳೆದ ವಾರ ಬೆಳಕಿಗೆ ಬಂದಿತ್ತು. ಈ ಪ್ರಕರಣವನ್ನು ‘ಟ್ರಿನಿ’ ಎಂಬ ಪ್ರಖರ ರಾಷ್ಟ್ರೀಯತಾವಾದಿ ‘ಎಕ್ಸ್’ (ಟ್ವಿಟರ್) ಖಾತೆ ಜಗತ್ತಿನ ಮುಂದೆ ತಂದಿತ್ತು. ಈ ಘಟನೆಯ ನಂತರ ಭಾರತಾದ್ಯಂತದ ಹಿಂದೂತ್ವನಿಷ್ಠರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹೆಚ್ಚುತ್ತಿರುವ ಒತ್ತಡದಿಂದ ಪರತೂರು ಪೊಲೀಸರು ಶಾಲೆಯ ವಿರುದ್ಧ ದೂರು ದಾಖಲಿಸಿಕೊಂಡರು. ಇದೀಗ ಈ ಪ್ರಕರಣದಲ್ಲಿ ಶಾಲೆಯ ನಿರ್ದೇಶಕ ಮತ್ತು ಪ್ರಾಂಶುಪಾಲ ತಾರಿಕ್ ಸಿದ್ದಿಕಿ, ನೃತ್ಯ ಶಿಕ್ಷಕ ಸಾಜಿದ್ ಶೇಖ್ ಮತ್ತು ನಿರೂಪಕಿ ಉಜ್ಮಾ ತಬಸ್ಸುಮ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಸುದಾಮ್ ಭಾಗವತ್ ಅವರು ‘ಸನಾತನ ಪ್ರಭಾತ’ದ ಪ್ರತಿನಿಧಿಗೆ ತಿಳಿಸಿದ್ದಾರೆ. ಮೂವರಿಗೂ ಪೊಲೀಸ್ ಕಸ್ಟಡಿ ನೀಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭಾಗವತ್ ಹೇಳಿದರು. ಹಿಂದೂಗಳ ಈ ವಿಜಯದ ಬಗ್ಗೆ ‘ಟ್ರಿನಿ’ ಸಂಪಾದಕರು, ಈಶ್ವರನ ಕೃಪೆಯಿಂದ ಈ ಕಾರ್ಯ ಮಾಡಲು ಸಾಧ್ಯವಾಗುತ್ತಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
BIG BREAKING: Massive Treeni IMPACT 🔥
All three accused named in the FIR have been arrested in the 'Sar Tan Se Juda' at Kids World English Jalna matter.
Principal/Director: Tarique Siddiqui
Dance Teacher: Sheikh Sajid
Anchor: Uzma Tabassum (Had fled to Hyderabad)Jai Ho! https://t.co/x0OfNGI4Hj pic.twitter.com/rIyd2NFK8T
— Treeni (@treeni) June 23, 2026
ಶಾಲೆಯ ಮಾನ್ಯತೆ ರದ್ದುಗೊಳಿಸುವ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ!
ಈ ಹಾಡನ್ನು ಪ್ರದರ್ಶಿಸಿದ ಶಾಲೆಯ ಮೇಲೆ ಏನಾದರೂ ಕ್ರಮ ಕೈಗೊಳ್ಳಲಾಗುತ್ತದೆಯೇ? ಎಂಬ ಬಗ್ಗೆ ಸದ್ಯ ಅನುಮಾನವಿದೆ. ಈ ಶಾಲೆಯು ಕೇಂದ್ರ ಸರಕಾರದ ಸಿ.ಬಿ.ಎಸ್.ಇ. (CBSE) ಪಠ್ಯಕ್ರಮದ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದೆ. ಅದರ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆಯೇ? ಎಂಬ ಪ್ರಶ್ನೆಯನ್ನು ಎತ್ತಲಾಗುತ್ತಿದೆ. ಈ ಪ್ರಕರಣದ ಕುರಿತು ಜಾಲನಾ ಜಿಲ್ಲೆಯ ಶಿಕ್ಷಣಾಧಿಕಾರಿ ಸಂಗೀತಾ ಭಾಗವತ್ ಅವರನ್ನು ಸಂಪರ್ಕಿಸಿದಾಗ, ಅವರು ಈ ವಿಷಯದಲ್ಲಿ ಸಮಿತಿಯನ್ನು ರಚಿಸಿರುವುದಾಗಿ ತಿಳಿಸಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”