ಕುಂಭಮೇಳದಲ್ಲಿ ದಿನಕ್ಕೆ ೫೦ ಸಾವಿರ ಕೊರೋನಾ ಪರೀಕ್ಷೆ ಮಾಡುವಂತೆ ಉತ್ತರಾಖಂಡ ಉಚ್ಚನ್ಯಾಯಾಲಯದ ಆದೇಶ

ಹರಿದ್ವಾರದಲ್ಲಿ ಏಪ್ರಿಲ್ ೧ ರಿಂದ ಪ್ರಾರಂಭವಾಗುವ ಕುಂಭಮೇಳದಲ್ಲಿ ಪ್ರತಿದಿನ ೫೦ ಸಾವಿರ ಕೊರೋನಾದ ಪರೀಕ್ಷಣೆಯನ್ನು ನಡೆಸಲು ಉತ್ತರಾಖಂಡ ಉಚ್ಚ ನ್ಯಾಯಾಲಯವು ಆದೇಶಿಸಿದೆ. ಕುಂಭಮೇಳ ಪ್ರದೇಶದ ಎಲ್ಲಾ ವಾಹನ ನಿಲುಗಡೆ ಮತ್ತು ಸ್ನಾನಗೃಹಗಳಲ್ಲಿ ಓಡಾಡುವ ವೈದ್ಯಕೀಯ ತಂಡಗಳನ್ನು ನಿಯೋಜಿಸಬೇಕು. ಯಾರು ಕೊರೋನಾದ ಮೊದಲನೇಯ ಲಸಿಕೆ ಪಡೆದಿದ್ದಾರೆ, ಅವರೂ ಕೊರೋನಾದ ‘ನೆಗೆಟಿವ್'(ನಕಾರಾತ್ಮಕ) ಅನ್ನು ವರದಿಯನ್ನು ಕಡ್ಡಾಯವಾಗಿ ತರುವಂತೆ ಹೇಳಿದೆ. ‘ಕುಂಭಮೇಳ ಪ್ರದೇಶದಲ್ಲಿಯೂ ಕೊರೋನಾ ಲಸಿಕೆ ನೀಡಬೇಕು’, ಎಂದು ಉಚ್ಚ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಜಿಲ್ಲೆಯ ಎಲ್ಲ ಗಡಿಗಳಲ್ಲಿ ವೈದ್ಯಕೀಯ ತಂಡಗಳನ್ನು ನೇಮಿಸಲಾಗಿದೆ. ಕುಂಭಮೇಳಕ್ಕೆ ಬರುವ ಎಲ್ಲ ಭಕ್ತರಿಗೆ ೭೨ ಗಂಟೆಗಳ ಮುಂಚಿತವಾಗಿ ಕೊರೋನಾದ ‘ನಕಾರಾತ್ಮಕ’ ವರದಿಯನ್ನು ಪರಿಶೀಲಿಸಿದ ನಂತರವೇ ಜಿಲ್ಲೆಗೆ ಪ್ರವೇಶಿಸಲು ಅವಕಾಶವಿರುತ್ತದೆ. ಅದೇರೀತಿ ಕುಂಭಮೇಳ ಪ್ರದೇಶ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಗಡಿಗಳಲ್ಲಿ ಕೊರೋನಾದ ‘ರ್ಯಾಪಿಡ’ ಪರೀಕ್ಷಿಸಲಾಗುವುದು ಎಂದು ಹೇಳಿದೆ.